ಸಿ.ಪಿ.ಯೋಗೇಶ್ವರ್‌ ಗೋಲ್‌ಮಾಲ್‌ ರಾಜಕಾರಣಿ: ಕುಮಾರಸ್ವಾಮಿ

By Kannadaprabha NewsFirst Published Nov 18, 2022, 3:00 AM IST
Highlights

ರೈತರ ರಕ್ಷಣೆಗೆ ರೌಡಿಸಂ, ಗೂಂಡಾಗಿರಿ ಮಾಡಲೂ ಸಿದ್ಧ, ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲೇ ನನ್ನ ಸ್ಪರ್ಧೆ: ಕುಮಾರಸ್ವಾಮಿ

ಮದ್ದೂರು(ನ.18): ವಿಧಾನ ಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ರೀತಿ ಗೋಲ್‌ಮಾಲ್‌ ರಾಜಕಾರಣ ಮಾಡುತ್ತಿಲ್ಲ. ನಾವು ಅನ್ನದಾತರ ಸಮಸ್ಯೆ ಪರ ಯಾವ ಹೋರಾಟಕ್ಕೂ ಸಿದ್ಧ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸವಾಲು ಹಾಕಿದರು. ಮಳವಳ್ಳಿ ಕಾರ‍್ಯಕ್ರಮಕ್ಕೆ ತೆರಳುವ ಮಾರ್ಗ ಮಧ್ಯೆ ಪಟ್ಟಣದ ಪ್ರವಾಸಿ ಮಂದಿರ ವೃತ್ತದಲ್ಲಿ ಜೆಡಿಎಸ್‌ ಕಾರ‍್ಯಕರ್ತರಿಂದ ಅಭಿನಂದನೆ ಸ್ವೀಕರಿಸಿದ ಬಳಿಕ ಜೆಡಿಎಸ್‌ನವರು ಯಾವಾಗಲೂ ದಬ್ಬಾಳಿಕೆ, ಗೂಂಡಾಗಿರಿ, ರೌಡಿಸಂ ಮಾಡುತ್ತಾರೆಂಬ ಸಿ.ಪಿ.ಯೋಗೇಶ್ವರ್‌ ಆರೋಪಕ್ಕೆ ತಿರುಗೇಟು ನೀಡಿದರು.

ಜೆಡಿಎಸ್‌ನವರು ರೌಡಿಸಂ, ಗೂಂಡಾಗಿರಿ ಮಾಡಿಕೊಂಡು ರಾಜಕೀಯ ಮಾಡುತ್ತಿಲ್ಲ. ನಮ್ಮ ಹೋರಾಟ ಏನಿದ್ದರೂ ರೈತರ ಪರವಾಗಿದೆ. ಇಂತಹ ಸಂದರ್ಭದಲ್ಲಿ ಅವರ ರಕ್ಷಣೆಗೆ ರೌಡಿಸಂ, ಗೂಂಡಾಗಿರಿ ಮಾಡುವುದಕ್ಕೂ ಸಿದ್ಧ ಎಂದು ಸಿ.ಪಿ.ಯೋಗೇಶ್ವರ್‌ಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.

Latest Videos

ASSEMBLY ELECTION: ಮಂಡ್ಯ ಕಾಂಗ್ರೆಸ್ ಟಿಕೆಟ್ ಗೆ ಡಿಮ್ಯಾಂಡ್ : ಜೆಡಿಎಸ್ ಮುಖಂಡ ಸೇರಿ ಹಲವರು ಅರ್ಜಿ

ಪವರ್‌ಫುಲ್‌ ಮಂತ್ರಿಯಲ್ಲವೇ?

ಚನ್ನಪಟ್ಟಣ ತಾಲೂಕಿನಲ್ಲಿ ವಸತಿಹೀನರಿಗೆ ಸೂರು ಕಲ್ಪಿಸುವಂತೆ ನಾನು 2019ರಲ್ಲೇ ವಸತಿ ಸಚಿವರಿಗೆ ಪತ್ರ ಬರೆದು 3200 ಮನೆಗಳನ್ನು ಮಂಜೂರು ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದೆ. ಆದರೆ, ಕೊರೋನಾ ಕಾಲದಿಂದಾಗಿ ಅದು ವಿಳಂಬವಾಗಿತ್ತು. ಇದೀಗ ಸರ್ಕಾರ ಮನೆಗಳ ಮಂಜೂರಾತಿಗೆ ಆದೇಶ ನೀಡಿದೆ. ಅದನ್ನು ಸಿ.ಪಿ.ಯೋಗೇಶ್ವರ್‌ ಅವರು ಕ್ರೆಡಿಟ್‌ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಏಕೆಂದರೆ, ಅವರು ಬಿಜೆಪಿ ಸರ್ಕಾರದ ಪವರ್‌ಪುಲ್‌ ಮಂತ್ರಿಯಲ್ಲವೇ ಎಂದು ವ್ಯಂಗ್ಯವಾಡಿದರು. ಹಿಂದೆ ಪತ್ರ ಬರೆದ ವೇಳೆ ಸರ್ಕಾರ ಮನ್ನಣೆ ನೀಡಿರಲಿಲ್ಲ. ಆದರೆ, ನನ್ನ ಪತ್ರಕ್ಕೆ ಮನ್ನಣೆ ನೀಡಿದೆ ಎಂದು ಸಿ.ಪಿ.ಯೋಗೇಶ್ವರ್‌ ಹೇಳಿಕೊಳ್ಳುತ್ತಿದ್ದಾರೆ. ಹೀಗಾಗಿ ಬಿಜೆಪಿ ಸರ್ಕಾರದ ಪವರ್‌ ಲೀಡರ್‌ ಆಗಿದ್ದಾರೆ ಎಂದು ಟೀಕಿಸಿದರು.

ನಾನು ಟೂರಿಂಗ್‌ ಟಾಕೀಸ್‌ ಅಲ್ಲ:

ಪ್ರತೀ ಚುನಾವಣೆಯಲ್ಲಿ ಬೇರೆ ಬೇರೆ ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಟೂರಿಂಗ್‌ ಟಾಕೀಸ್‌ ಅಲ್ಲ. ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಿಂದಲೇ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು. ಮೈಸೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ವಶಪಡಿಸಿಕೊಂಡ ಭೂಮಾಲೀಕರಿಗೆ ಪರಿಹಾರ ವಿತರಿಸುವಲ್ಲಿ ಸಾಕಷ್ಟುಅವ್ಯವಹಾರ ನಡೆದಿದೆ. ಈ ಬಗ್ಗೆ ಎಲ್ಲಾ ದಾಖಲೆಗಳೂ ನನ್ನ ಬಳಿ ಇವೆ. ಚುನಾವಣೆ ನಂತರ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸುವುದು ಅನಿವಾರ‍್ಯ ಎಂದು ಎಚ್ಚರಿಕೆ ನೀಡಿದರು.

'ಅಭಿವೃದ್ಧಿ ಪ್ರತಿಫಲವೇ ಕಳೆದ ಚುನಾವಣೆಯಲ್ಲಿ ಸೋಲು'

ತಾಲೂಕು ಜೆಡಿಎಸ್‌ ಉಪಾಧ್ಯಕ್ಷ ದೇವರಹಳ್ಳಿ ವೆಂಕಟೇಶ್‌, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಆರ್‌.ಪ್ರಸನ್ನಕುಮಾರ್‌, ಸದಸ್ಯ ಬಸವರಾಜು, ಹೊನ್ನಲಗೆರೆ ಗ್ರಾ.ಪಂ. ಸದಸ್ಯ ಬ್ಯಾಡರಹಳ್ಳಿ ರಾಮಕೃಷ್ಣ, ಮುಖಂಡರಾದ ಶಿವಣ್ಣ, ಚನ್ನಸಂದ್ರ ಸ್ವರೂಪ, ಸಹಬಾಜ್‌ ಮತ್ತಿತರರಿದ್ದರು.

ನಿಖಿಲ್‌ ಮಂಡ್ಯಕ್ಕೆ ಮಾತ್ರವಲ್ಲ, ರಾಜ್ಯ ನಾಯಕ: ಎಚ್‌ಡಿಕೆ

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಪಕ್ಷ ಸಂಘಟನೆ ವಿಚಾರದಲ್ಲಿ ಕೇವಲ ಮಂಡ್ಯ ಮಾತ್ರವಲ್ಲ, ಇಡೀ ರಾಜ್ಯದ ನಾಯಕ ಎಂದು ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದ ಬಳಿ ಜೆಡಿಎಸ್‌ ಮುಖಂಡರು ಕಾರ‍್ಯಕರ್ತರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ನಿಖಿಲ್‌ನನ್ನು ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿಸಿ ಶಾಸಕನಾಗಿಸುವುದು ನನಗೆ ಮುಖ್ಯವಲ್ಲ. ಆತನ ದುಡಿಮೆಯನ್ನು ಜೆಡಿಎಸ್‌ ಸಂಘಟನೆಗೆ ಬಳಸಿಕೊಳ್ಳುವುದು ನಮಗೆ ಮುಖ್ಯವಾಗಿದೆ ಎಂದರು.

2023ರ ವಿಧಾನ ಸಭಾ ಚುನಾವಣೆಯಲ್ಲಿ ನಿಖಿಲ್‌ ಕುಮಾರಸ್ವಾಮಿಯನ್ನು ಕಣಕ್ಕಿಳಿಸುವ ಯಾವುದೇ ಆಲೋಚನೆ ಸದ್ಯಕ್ಕೆ ನಮ್ಮಲ್ಲಿಲ್ಲ. ಆತನನ್ನು ರಾಜ್ಯಾದ್ಯಂತ ಪ್ರವಾಸ ಮಾಡಿರುವ ಮೂಲಕ ಕನಿಷ್ಠ 30ರಿಂದ 40 ಕ್ಷೇತ್ರಗಳಲ್ಲಿ ಪಕ್ಷವನ್ನು ಬೆಳೆಸುವ ಮೂಲಕ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದರು.
 

click me!