
ಬೆಂಗಳೂರು(ನ.29): ನಮ್ಮ ಸರ್ಕಾರದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚು ಸಹಾಯವಾಗುತ್ತಿದೆ. ಆದರೆ, ನಮ್ಮ ಪಕ್ಷದ ಅಸ್ತಿತ್ವ ಅನಿವಾರ್ಯತೆ ಇರುವುದರಿಂದ ನಮಗೆ ಹೆಚ್ಚು ಆದ್ಯತೆ ನೀಡಬೇಕು ಎಂದು ಆಡಳಿತಾರೂಢ ಬಿಜೆಪಿಯ ವಿಧಾನಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ತಮ್ಮ ಸರ್ಕಾರ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷದ ಆಡಳಿತದಲ್ಲಿ ಪ್ರತಿಪಕ್ಷಗಳಿಗೆ ಹೆಚ್ಚು ಸಹಾಯವಾಗುತ್ತಿದೆ ಎಂಬುದನ್ನು ಹಲವು ಭಾರಿ ಘಂಟಾಘೋಷವಾಗಿ ಹೇಳಲಾಗಿದೆ. ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದರೂ ಅದರಿಂದ ನಮಗೆ ಅನುಕೂಲವಾಗುವ ಬದಲು ನಮ್ಮ ವಿರೋಧಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ನಮ್ಮ ಅಸ್ತಿತ್ವ ಪ್ರಶ್ನೆ ಇರುವ ಕಾರಣ ಮೊದಲು ನಮಗೆ ಆದ್ಯತೆ ನೀಡಬೇಕು’ ಎಂದು ಹೇಳಿದರು.
ಮುಸ್ಲಿಮರ ಓಲೈಕೆಗೆ ಎಚ್ಡಿಕೆ ಹೊಸ ವರಸೆ: ಯೋಗೇಶ್ವರ್
‘ಈ ಹಿಂದೆ ಮಂಡ್ಯ ಭಾಗದಲ್ಲಿ ಅಭ್ಯರ್ಥಿಗಳ ಕೊರತೆ ಇತ್ತು. ಆದರೆ, ಈ ಬಾರಿ ಎಲ್ಲಾ ಕ್ಷೇತ್ರದಲ್ಲಿಯೂ ಅಭ್ಯರ್ಥಿಗಳು ಇರುವುದರಿಂದ ಕೊರತೆ ನೀಗಿದೆ. ಮಂಡ್ಯ ಜಿಲ್ಲೆಯಲ್ಲಿ ಪಕ್ಷ ಗಟ್ಟಿಯಾಗಬೇಕಾದರೆ ಸರ್ಕಾರದ ಯಂತ್ರ ಕೆಲಸ ಮಾಡಬೇಕು. ಮಂಡ್ಯ ಭಾಗದಲ್ಲಿ ಕೇವಲ ಭಾವನಾತ್ಮಕವಾಗಿ ಗೆಲ್ಲಲು ಸಾಧ್ಯವಿಲ್ಲ. ಆದರೆ, ಅಲ್ಲಿ ಅಭಿವೃದ್ಧಿ ಮೂಲಕ ಗೆಲುವು ಸಾಧಿಸಬೇಕು. ರಾಜಕೀಯ ಎಂದರೆ ಸ್ಪರ್ಧೆ ಇದ್ದೇ ಇರುತ್ತದೆ. ಆದರೆ, ಸರ್ಕಾರದ ಆಡಳಿತ ಯಂತ್ರ ಗಟ್ಟಿಯಾಗಿರಬೇಕು’ ಎಂದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.