ಇಂದು (ಮಂಗಳವಾರ) ವಿಧಾನಸಭಾ ಕಲಾಪದಲ್ಲಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಶಪಥ ಮಾಡಿದರು. ಏನದು..?
ಬೆಂಗಳೂರು, (ಫೆ.02): BDAನಲ್ಲಿ ನಡೆದಿರುವ ಅಕ್ರಮಗಳಿಗೆ ಬ್ರೇಕ್ ಹಾಕಲು ಸಿದ್ಧ. ಮೂರ್ನಾಲ್ಕು ತಿಂಗಳಲ್ಲಿ ಬಿಡಿಎ ಸುಧಾರಣೆ ಮಾಡಿಯೇ ತಿರುತ್ತೇನೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಕಲಾಪದಲ್ಲಿ ಶಪಥ ಮಾಡಿದರು.
ಇಂದು (ಮಂಗಳವಾರ) ಸದನದಲ್ಲಿ ಬಿಡಿಎ ಸೈಟ್ ಕುರಿತು ಬಿಸಿಬಿಸಿ ಚರ್ಚೆ ನಡೆಯಿತು. ಈ ವೇಳೆ ಶಾಸಕ ಅರಗ ಜ್ಞಾನೇಂದ್ರ ಮತನಾಡಿದ, ನನಗೆ ಕೊಟ್ಟ ಸೈಟ್‌ನಲ್ಲಿ ಮನೆ ಕಟ್ಟಲು ಆಗುತ್ತಿಲ್ಲ. ನನ್ನ ಸೈಟ್‌ಗೆ ನಕಲಿ ದಾಖಲೆ ಸೃಷ್ಠಿಸಿದ್ದು, ನಕಲಿ ದಾಖಲೆ ಕೊಟ್ಟು ವ್ಯಾಜ್ಯ ಮಾಡಿದ್ದಾರೆ. ಹೀಗಾಗಿ ನನಗೆ ಇನ್ನೂ ಸೈಟ್ ಸಿಕ್ಕಿಲ್ಲ, ಬಿಡಿಎನಲ್ಲಿ ಇಂತಹ ಅಕ್ರಮಗಳು ನಡೆಯುತ್ತಿವೆ ಎಂದು ಕಿಡಿಕಾರಿದರು.
ಸಿಎಂ ಬಿಎಸ್‌ವೈಗೆ ಒಂದೇ ಮ್ಯಾಟರ್, 15,000 ಲೆಟರ್: ಬರೆದವರು ಯಾರು?
ಅರಗ ಮಾತಿಗೆ ಮಧ್ಯಪ್ರವೇಶಿಸಿದ ಎಚ್.ಕೆ ಪಾಟೀಲ್, ಸುಮ್ಮನೆ ಯಾಕೆ ನೀವು ಆರೋಪ ಮಾಡ್ತೀರಿ. ನಿಮ್ಮ ಭಾಷಣ ಕೇವಲ ಭಾಷಣ ಆಗಬಾರದು. ನಿಮ್ಮ ಮಾತು ಕೇಳಿ ಸಿಎಂ ಕ್ರಮ ಕೈಗೊಳ್ಳಬೇಕಲ್ಲವೇ ಎಂದರು.
ಆಗ ಎಚ್.ಕೆ ಪಾಟೀಲ್ ಹಾಗೂ ಸ್ವಪಕ್ಷೀಯ ಶಾಸಕ ಅರಗ ಜ್ಞಾನೇಂದ್ರ ಆರೋಪಕ್ಕೆ ಉತ್ತರಿಸಿದ ಸಿಎಂ, ಮಾತಿನಿಂದ ಎಚ್ಚೆತ್ತುಕೊಂಡ ಸಿಎಂ, 'ಬಿಡಿಎನಲ್ಲಿ ಸುಧಾರಣೆ ತರಲು ಪ್ರಯತ್ನಿಸುತ್ತೇನೆ. ಸೈಟ್ʼಗಳಿಗೆ ದಾಖಲೆಗಳೇ ಇಲ್ಲದ ಪರಿಸ್ಥಿತಿ ಇದೆ. ಅಧಿಕಾರಿಗಳ ವರ್ಗಾವಣೆಗೆ ಕ್ರಮ ಕೈಗೊಳ್ಳಲಾಗಿದೆ. ಇನ್ನು ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುತ್ತೇನೆ. ನೀವೇ ನೋಡ್ತಾ ಇರಿ ಬದಲಾವಣೆ ಮಾಡುವೆ ಎಂದು ಖಡಕ್ ಆಗಿ ಹೇಳಿದರು.