ಬೈ ಎಲೆಕ್ಷನ್‌ಗೆ ಕೊರೋನಾ ಟಫ್ ರೂಲ್ಸ್ ಅನ್ವಯ ಆಗಲ್ವಂತೆ: ಸಿಎಂ ಸಾಹೇಬ್ರು ಹೇಳಿದ್ದು

By Suvarna News  |  First Published Mar 20, 2021, 4:48 PM IST

ಕರ್ನಾಟಕದಲ್ಲಿ ಕೊರೋನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದ್ದು, ರಾಜ್ಯ ಸರ್ಕಾರ ಕೆಲ ನಿರ್ಬಂದನೆಗಳನ್ನು ಹೇರಿದೆ. ಆದ್ರೆ, ಇದು ಬೈ ಎಲೆಕ್ಷನ್‌ಗೆ ಅನ್ವಯಿಸಲ್ವಂತೆ.


ತುಮಕೂರು, (ಮಾ.20): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚುತ್ತಿದ್ದು, ಈ ನಡುವೆ ಉಪಚುನಾವಣೆ ಕೂಡ ಘೋಷಣೆಯಾಗಿರುವುದರಿಂದ ಕೊರೋನಾ ನಿಯಮ ಪಾಲನೆ ಬಗ್ಗೆ ಸ್ಪಷ್ಟನೆ ನೀಡಿದರು.

ತುಮಕೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಉಪಚುನಾವಣೆಗೆ ಕೊರೋನಾ ಕಠಿಣ ನಿಯಮಗಳು ಅನ್ವಯವಾಗುವುದಿಲ್ಲ. 4 ಗೋಡೆಗಳ ಮಧ್ಯೆ ನಡೆಯುವ ಸಭೆ-ಸಮಾರಂಭಗಳಿಗೆ ಮಾತ್ರ ಕಠಿಣ ನಿಯಮ ಹಾಕಿದ್ದೇವೆ ಸ್ಪಷ್ಟಪಡಿಸಿದರು.

Latest Videos

undefined

ರಾಜ್ಯದಲ್ಲಿ ಮತ್ತೆ ಕೊರೋನಾ ಏರಿಕೆ: ಸಾರ್ವಜನಿಕರಿಗೆ ಸಿಎಂ ವಿಶೇಷ ಮನವಿ

ಜನರು ಸಾಮಾಜಿಕ ಅಂತರ ಕಾಯ್ದುಕೊಂಡು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಲಾ-ಕಾಲೇಜುಗಳನ್ನು ಬಂದ್ ಮಾಡುವ ಯೋಚನೆ ಸಧ್ಯಕ್ಕಿಲ್ಲ. ಜನರು ಎಚ್ಚೆತುಕೊಳ್ಳದಿದ್ದಲ್ಲಿ, ಕೊರೋನಾ ಪ್ರಕರಣಗಳು ಹೆಚ್ಚಿದರೆ ಕಠಿಣ ನಿಯಮಗಳ ಜಾರಿಗೆ ನಿರ್ಧರಿಸುತ್ತೇವೆ ಎಂದು ಹೇಳಿದರು.

ರಾಜ್ಯ ಆರೋಗ್ಯ ಇಲಾಖೆ ಹೊರಡಿಸಿರುವ ಕೊರೋನಾ ಗೈಡ್‌ಲೈನ್ಸ್‌ನಲ್ಲಿ ರಾಜಕೀಯ, ಮದುವೆ ಕಾರ್ಯಕ್ರಮಗಳಿಗೆ 500 ಜನರು ಭಾಗವಹಿಸಲು ಮಾತ್ರ ಅವಕಾಶ ಕೊಡಲಾಗಿದೆ. ಆದ್ರೆ, ಇದೀಗ ಬಿಎಸ್ ಯಡಿಯೂರಪ್ಪನವರು ಉಪಚುನಾವಣೆ ಈ ನಿಯಮ ಅನ್ವಯಿಸಲ್ಲ ಎಂದು ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.

ಬೇರೆ ಕಾರ್ಯಕ್ರಮಗಳಿಗೆ ಕೊರೋನಾ ಬರುತ್ತೆ. ಅದೇ ಸಾವಿರಾರು ಜನ ಇರುವ ಉಪಚುನಾವಣೆಗೆ ಕೊರೋನಾ ಬರಲ್ವಾ ಎಂದು  ಟೀಕೆಗಳು ವ್ಯಕ್ತವಾಗುತ್ತಿವೆ. 

ಮೊನ್ನೇ ಅಷ್ಟೇ ಸ್ವತಃ ಸಿಎಂ ಸಾಹೇಬ್ರು ಪತ್ರದ ಮೂಲಕ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕಡ್ಡಾಯವಾಗಿ ಮಾಸ್ಕ್ ಹಾಕಿಕೊಳ್ಳಿ, ಸಾಮಾಜಿಕ ಅಂತರ ಕಾಪಾಡಿ ಹೀಗೆ ಕೊರೋನಾ ಮುಂಜಾಗ್ರತಾ ಬಗ್ಗೆ ಸಲಹೆ ಕೊಟ್ಟಿದ್ದಾರೆ.

ಆದ್ರೆ, ಇದೀಗ ಕೊರೋನಾ ಕಠಿಣ ನಿಯಮಗಳು ಉಪಚುನಾವಣೆಗೆ ಅನ್ವಯವಾಗುವುದಿಲ್ಲ ಎನ್ನುವ ಸಿಎಂ ಯಡಿಯೂಪರಪ್ಪನವರ ಹೇಳಿಕೆ ಎಷ್ಟು ಸರಿ..?

click me!