ಬಿಜೆಪಿ ಡೋಂಗಿ ಹಿಂದುಗಳು ಲೋಕಸಭಾ ಚುನಾವಣೆಗಾಗಿ ಏನೆಲ್ಲ ಮಾಡುತ್ತಿದ್ದಾರೆ. ನಿಜವಾದ ಹಿಂದುಗಳು ಎಂದು ಅದು ಕಾಂಗ್ರೆಸ್ಸಿಗರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಬೆಂಗಳೂರು (ಜ.8) : ಬಿಜೆಪಿ ಡೋಂಗಿ ಹಿಂದುಗಳು ನಿಜವಾದ ಹಿಂದುಗಳು ಎಂದು ಅದು ಕಾಂಗ್ರೆಸ್ಸಿಗರು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಮೇಲಿನ ಆಕ್ರೋಶದಿಂದ ತಪ್ಪಿಸಿಕೊಳ್ಳಲು ರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ನಡೆಯುವ ಜ.22ರಂದು ರಾಜ್ಯದ ಮುಜರಾಯಿ ಇಲಾಖೆಗೆ ಒಳಪಡುವ ದೇವಾಲಯಗಳಲ್ಲಿ ವಿಶೇಷ ಪೂಜೆಗೆ ಆದೇಶಿಸಲಾಗಿದೆ ಎಂಬ ಆರೋಪಕ್ಕೆ ತಿರುಗೇಟು ನೀಡಿರುವ ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ರಾಜಕಾರಣ ಮುಖ್ಯವಲ್ಲ, ಜನರ ಧಾರ್ಮಿಕ ನಂಬಿಕೆಗಳು ಮುಖ್ಯ. ಬಿಜೆಪಿಯವರು ಮಾತ್ರ ರಾಜಕಾರಣಕ್ಕಾಗಿ ಧರ್ಮ, ದೇವರನ್ನು ಬಳಸಿಕೊಳ್ಳುತ್ತಾರೆ. ನಿಜವಾದ ಹಿಂದುಗಳು ಹಾಗೂ ಹಿಂದು ಧರ್ಮ ಪಾಲಿಸುವವರು ಕಾಂಗ್ರೆಸ್ಸಿಗರು ಎಂದು ಪ್ರತಿಕ್ರಿಯಿಸಿದ್ದಾರೆ.
ಭಾನುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯುಗಾದಿ ಹಬ್ಬದ ವೇಳೆ ಎಲ್ಲ ದೇವಾಲಯಗಳಲ್ಲಿ ವಿಶೇಷ ಪೂಜೆ ಮಾಡಲು ತಿಳಿಸಿದ್ದೆ. ಮುಂಬರುವ ಸಂಕ್ರಾಂತಿ ಹಬ್ಬಕ್ಕೂ ವಿಶೇಷ ಪೂಜೆ ಮಾಡಲು ಹೇಳುತ್ತೇನೆ. ಸಾವಿರಾರು ವರ್ಷಗಳ ಇತಿಹಾಸವಿರುವ ಶ್ರೀರಾಮ ಈ ನೆಲದ ಆದರ್ಶ ಪುರುಷ. ನಮ್ಮ ದೇಶದಲ್ಲಿ ಲಕ್ಷಾಂತರ ಶ್ರೀರಾಮನ ದೇವಾಲಯಗಳು ಇವೆ. ಶ್ರೀರಾಮ ತನ್ನ ಜೀವನದಲ್ಲಿ ನಡೆದುಕೊಂಡ ರೀತಿಗೆ ಅವರನ್ನು ಪೂಜಿಸುತ್ತಾರೆ ಎಂದು ಹೇಳಿದರು.
ನಾಳೆ, ನಾಡಿದ್ದು ಕಾಂಗ್ರೆಸ್ಸಿಂದ ಲೋಕಸಭೆ ತಂತ್ರಗಾರಿಕೆ ಸಭೆ; ನಿಗಮ-ಮಂಡಳಿಗೆ ಕಾರ್ಯಕರ್ತರ ನೇಮಕ ಬಗ್ಗೆಯೂ ಚರ್ಚೆ?