ತುಮಕೂರು (ಮಾ.7) : ನಿನ್ನೆ ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವೇಳೆ ಅನಾಹುತದಿಂದ ಡಾ.ಜಿ.ಪರಮೇಶ್ವರ ಪಾರಾದ ಘಟನೆ ನಡೆದಿದೆ.
ತುಮಕೂರು (ಮಾ.7) : ತುಮಕೂರು (ಮಾ.7) : ನಿನ್ನೆ ಜಿಲ್ಲೆಯ ಕೊರಟಗೆರೆಯಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ವೇಳೆ ಅನಾಹುತದಿಂದ ಡಾ.ಜಿ.ಪರಮೇಶ್ವರ ಪಾರಾದ ಘಟನೆ ನಡೆದಿದೆ.
ಕೊರಟಗೆರೆ ಪಟ್ಟಣದ ಊರ್ಡಿಗೆರೆ ವೃತ್ತದ ಬಳಿ ಪ್ರಜಾಧ್ವನಿ ಯಾತ್ರೆ ಹೊರಟಿದ್ದ ವೇಳೆ ಕಾರ್ಯಕ್ರಮಕ್ಕೆ ಬಸ್‌ನಲ್ಲಿ ಆಗಮಿಸಿದ್ದ ಡಾ.ಜಿ.ಪರಮೇಶ್ವರ ಜನರತ್ತ ಕೈಬಿಸುತ್ತಿದ್ದರು. ಇನ್ನೇನು ಬೃಹತ್ ಹಾರ ಹಾಕಬೇಕು ಅನ್ನುಷ್ಟರಲ್ಲಿ ಅದು ತುಂಡಾಗಿ ಬಿದ್ದಿದೆ.
Prajadhwani yatre: ಜನ ಜೀವನ ಸುಧಾರಣೆಗೆ ಕಾಂಗ್ರೆಸ್ ಕಂಕಣಬದ್ಧ: ಬಿಕೆ ಹರಿಪ್ರಸಾದ್
ಅದೃಷ್ಟವಶಾತ್ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಪಾಯದಿಂದ ಪಾರಾಗಿದ್ದಾರೆ. ಬೃಹತ್ ಹಾರ ಡಾ.ಜಿ.ಪರಮೇಶ್ವರ ಬಳಿ ಕ್ರೇನ್ ಮೂಲಕ ತೆಗೆದುಕೊಂಡು ಹೋಗುವಾಗಲೇ ಕೆಳಗೆ ಬಿದ್ದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಯಿತು. ಇದೇ ವೇಳೆ ಅನಾಹುತವೊಂದು ತಪ್ಪಿತು ಎಂದು ನಿಟ್ಟುಸಿರು ಬಿಡುತ್ತಿದ್ದರೆ ಇನ್ನೊಂದೆಡೆ ಬೃಹತ್ ಸೇಬಿನ ಹಾರ ಕೆಳಗೆ ಬೀಳ್ತಿದ್ದಂತೆ ಕಾರ್ಯಕರ್ತರು ಹಣ್ಣುಗಳನ್ನು ಆಯ್ದುಕೊಳ್ಳಲು ಮುಗಿಬಿದ್ದರು.
ಕಾಂಗ್ರೆಸ್ ಅಭ್ಯರ್ಥಿ ಆಯ್ಕೆಗೆ ಇಂದು ಅಂತಿಮ ಕಸರತ್ತು
ಬೆಂಗಳೂರು ಮುಂಬರುವ ವಿಧಾನಸಭೆ ಚುನಾವಣೆ(Assembly election)ಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಅಂತಿಮಗೊಳಿಸುವ ಸಲುವಾಗಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮೋಹನ್ ಪ್ರಕಾಶ್ ಅಧ್ಯಕ್ಷತೆಯ ಸ್ಕ್ರೀನಿಂಗ್ ಸಮಿತಿಯು ಮಂಗಳವಾರ ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದೆ.
ಮಂಗಳವಾರ ನಗರದಲ್ಲಿ ನಡೆಯಲಿರುವ ಸಭೆಯಲ್ಲಿ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲು ಕಸರತ್ತು ನಡೆಯಲಿದ್ದು, ಈಗಾಗಲೇ ಕೆಪಿಸಿಸಿ ಮಟ್ಟದಲ್ಲಿ ಅಂತಿಮಗೊಳಿಸಿರುವ ಸಂಭಾವ್ಯರ ಪಟ್ಟಿಯನ್ನು ಅಳೆದು ತೂಗಿ ಅಂತಿಮ ಪಟ್ಟಿಯನ್ನು ಎಐಸಿಸಿ ಮಟ್ಟದ ಚುನಾವಣಾ ಸಮಿತಿಗೆ ಕಳುಹಿಸಲಾಗುತ್ತದೆ. ಚುನಾವಣಾ ಸಮಿತಿಯು ಅಂತಿಮ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸಲಿದೆ ಎಂದು ಮೂಲಗಳು ತಿಳಿಸಿವೆ.
ಮಂಗಳವಾರದ ಸಭೆಯಲ್ಲಿ ಸ್ಕ್ರೀನಿಂಗ್ ಸಮಿತಿಯ ಪದನಿಮಿತ್ತ ಸದಸ್ಯರಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೆವಾಲಾ, ಪರಿಷತ್ ಪ್ರತಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ್, ಚುನಾವಣಾ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ರಾಜ್ಯ ಉಸ್ತುವಾರಿಯಲ್ಲಿರುವ ಎಐಸಿಸಿ ಕಾರ್ಯದರ್ಶಿಗಳು ಭಾಗವಹಿಸಲಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕಮಿಷನ್‌ಗಾಗಿ ಜೀವ ಕಸಿದವರನ್ನ ಜೈಲಿಗೆ ಹಾಕ್ತೇವೆ: ಸುರ್ಜೇವಾಲಾ
ಅಂತಿಮ ಕಸರತ್ತು:
ಸ್ಕ್ರೀನಿಂಗ್ ಸಮಿತಿಯು ಈಗಾಗಲೇ ಫೆ.12 ರಿಂದ 13 ರವರೆಗೆ ರಾಜ್ಯದ ವಿವಿಧ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸಿ ವಸ್ತು ಸ್ಥಿತಿ ಬಗ್ಗೆ ವರದಿ ಸಿದ್ಧಪಡಿಸಿದೆ. ಫೆ.12 ರಂದು ಕೆಪಿಸಿಸಿ ಕಾರ್ಯಾಧ್ಯಕ್ಷರು, ಎಐಸಿಸಿ ಕಾರ್ಯದರ್ಶಿಗಳು, ಫೆ.13 ರಂದು ಹಿರಿಯ ನಾಯಕರು, ಫೆ.14 ರಂದು ಆಕಾಂಕ್ಷಿಗಳು ಹಾಗೂ ಕೆಪಿಸಿಸಿ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿತ್ತು. ಈ ವರದಿ ಆಧರಿಸಿ ಈಗಾಗಲೇ ಅಂತಿಮ ಸಂಭಾವ್ಯರ ಪಟ್ಟಿಸಿದ್ಧಗೊಂಡಿದ್ದು, ಕೆಲವು ಕ್ಷೇತ್ರಗಳ ಬಗ್ಗೆ ಇರುವ ಗೊಂದಲಗಳನ್ನು ಬಗೆಹರಿಸಿಕೊಳ್ಳಲು ಮಂಗಳವಾರ ಮಹತ್ವದ ಸಭೆ ಸೇರಲಿದೆ. ಈ ಬಳಿಕ ಹೈಕಮಾಂಡ್ ಒಪ್ಪಿಗೆಗೆ ಪಟ್ಟಿಕಳುಹಿಸಲಾಗುವುದು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.