ಪಕ್ಷಕ್ಕೆ ಸೆಳೆದುಕೊಳ್ಳಲು ಜೆಡಿಎಸ್‌ ನಾಯಕನಿಗೆ ಕಾಂಗ್ರೆಸ್‌ ಗಾಳ?

By Kannadaprabha NewsFirst Published Aug 21, 2023, 2:00 AM IST
Highlights

ತಮ್ಮ ಜೊತೆಯಲ್ಲೇ ರಾಜಕೀಯ ಪ್ರವೇಶಿಸಿರುವ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ‘ಕೈ’ಪಾಳಯಕ್ಕೆ ಕರೆತರುವುದಕ್ಕೆ ಸಚಿವ ಚಲುವರಾಯಸ್ವಾಮಿ ಪ್ರಯತ್ನ ನಡೆಸುತ್ತಿದ್ದಾರಾದರೂ, ಇನ್ನೂ ಸ್ಪಷ್ಟಚಿತ್ರಣ ಸಿಗದಂತಾಗಿದೆ.

ಮಂಡ್ಯ(ಆ.21):  ಮುಂಬರುವ ಲೋಕಸಭಾ ಚುನಾವಣೆಯನ್ನು ಗುರಿಯಾಗಿಸಿಕೊಂಡಿರುವ ಕಾಂಗ್ರೆಸ್‌ ಜಿಲ್ಲೆಯೊಳಗೆ ಜೆಡಿಎಸ್‌ನ ಮುಂಚೂಣಿ ನಾಯಕ, ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ಪಕ್ಷಕ್ಕೆ ಸೆಳೆದುಕೊಳ್ಳಲು ಗಾಳ ಹೆಣೆದಿದೆ. 2023ರ ಚುನಾವಣಾ ಸೋಲಿನ ಬಳಿಕ ರಾಜಕೀಯ ಚಟುವಟಿಕೆಗಳಿಂದ ದೂರವೇ ಉಳಿದಿರುವ ಅವರಿಗೆ ಮಂಡ್ಯ ಲೋಕಸಭಾ ಕ್ಷೇತ್ರದ ಟಿಕೆಟ್‌ ನೀಡುವ ಭರವಸೆಯನ್ನೂ ಕಾಂಗ್ರೆಸ್‌ ನೀಡಿದೆ.

ತಮ್ಮ ಜೊತೆಯಲ್ಲೇ ರಾಜಕೀಯ ಪ್ರವೇಶಿಸಿರುವ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಅವರನ್ನು ‘ಕೈ’ಪಾಳಯಕ್ಕೆ ಕರೆತರುವುದಕ್ಕೆ ಸಚಿವ ಚಲುವರಾಯಸ್ವಾಮಿ ಪ್ರಯತ್ನ ನಡೆಸುತ್ತಿದ್ದಾರಾದರೂ, ಇನ್ನೂ ಸ್ಪಷ್ಟಚಿತ್ರಣ ಸಿಗದಂತಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗಾಗಲೇ ಸಿ.ಎಸ್‌.ಪುಟ್ಟರಾಜು ಅವರಿಗೆ ಪಕ್ಷ ಸೇರುವಂತೆ ಆಹ್ವಾನ ನೀಡಿದ್ದು, ಪಕ್ಷ ಸೇರಿದರೆ ಮಂಡ್ಯ ಲೋಕಸಭೆ ಟಿಕೆಟ್‌ ನೀಡುವ ಆಫರ್‌ ಕೊಟ್ಟಿದ್ದಾರೆ ಎನ್ನಲಾಗಿದೆ.

ಕೃಷಿ ಸಚಿವರ ಲಂಚ ಬೇಡಿಕೆ ಪ್ರಕರಣಕ್ಕೆ ಟ್ವಿಸ್ಟ್‌ ಕೊಟ್ಟ ಸಿಐಡಿ: ಮಂಡ್ಯ ಮಾತ್ರವಲ್ಲ, ಮೈಸೂರಿನವರ ಕೈವಾಡವೂ ಇದೆ

ವದಂತಿ: 

ಮೇಲುಕೋಟೆ ಕ್ಷೇತ್ರದೊಳಗೆ ಜೆಡಿಎಸ್‌ ಪ್ರಾಬಲ್ಯವಿದ್ದು, ಮುಖಂಡರು-ಕಾರ್ಯಕರ್ತರ ದೊಡ್ಡ ಪಡೆಯೇ ಇದೆ. ಪುಟ್ಟರಾಜು ಎಚ್‌.ಡಿ.ದೇವೇಗೌಡರ ಮಾನಸಪುತ್ರರೆಂದೇ ಹೆಸರಾಗಿದ್ದಾರೆ. ಇನ್ನು, ಪುಟ್ಟರಾಜು ಕಾಂಗ್ರೆಸ್‌ ಸೇರ್ಪಡೆಯನ್ನು ಅಲ್ಲಗಳೆದಿರುವ ಜೆಡಿಎಸ್‌ ಜಿಲ್ಲಾಧ್ಯಕ್ಷ ರಮೇಶ್‌, ಇದು ಕೇವಲ ವದಂತಿ ಎಂದಿದ್ದಾರೆ.

click me!