ಈ ಹಿಂದೆ ಗರೀಬಿ ಹಠಾವೋ, ರೋಟಿ-ಕಪಡಾ- ಮಕಾನ್ ಘೋಷಣೆ ಮಾಡಿದ್ದರು. ಆ ರೀತಿ ಮಾಡಿದರಾ?. 2004ರಲ್ಲಿ ಕಾಂಗ್ರೆಸ್ ಕೆ ಹಾಥ್ ಗರೀಬ್ ಲೋಗೊಂಕೆ ಸಾಥ್ ಎಂದು ಘೋಷಿಸಿದರು. ಆದರೆ ಏನು ಮಾಡಿದರು? ಎಂದು ಜೋಶಿ ಪ್ರಶ್ನಿಸಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ
ಹುಬ್ಬಳ್ಳಿ(ಏ.07): ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ನ್ಯಾಯ ಎಂದು ಚುನಾವಣಾ ಪ್ರಣಾಳಿಕೆ ಘೋಷಿಸಿದ್ದಾರೆ. ಆದರೆ, ಇವರು ಯಾವತ್ತೂ ದೇಶಕ್ಕೆ ನ್ಯಾಯ ಕಲ್ಪಿಸಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತಾವು ಅಧಿಕಾರಕ್ಕೆ ಬರುವುದಿಲ್ಲ ಎಂಬುದು ಅವರಿಗೂ ಗೊತ್ತಿದೆ. ಹೀಗಾಗಿ ಮನಬಂದಂತೆ ಘೋಷಣೆ ಮಾಡುತ್ತಿ ದ್ದಾರೆ ಅಷ್ಟೇ ಎಂದು ಲೇವಡಿ ಮಾಡಿದರು.
ಸಿದ್ದರಾಮಯ್ಯಗೆ ಸಿದ್ಧಾಂತಗಳೇ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ಈ ಹಿಂದೆ ಗರೀಬಿ ಹಠಾವೋ, ರೋಟಿ-ಕಪಡಾ- ಮಕಾನ್ ಘೋಷಣೆ ಮಾಡಿದ್ದರು. ಆ ರೀತಿ ಮಾಡಿದರಾ?. 2004ರಲ್ಲಿ ಕಾಂಗ್ರೆಸ್ ಕೆ ಹಾಥ್ ಗರೀಬ್ ಲೋಗೊಂಕೆ ಸಾಥ್ ಎಂದು ಘೋಷಿಸಿದರು. ಆದರೆ ಏನು ಮಾಡಿದರು? ಎಂದು ಜೋಶಿ ಪ್ರಶ್ನಿಸಿದರು.