* ಶಾಸಕರ ಗಮನಕ್ಕೆ ತರದೇ ಪ್ರಗತಿ ಪರಿಶೀಲನೆ ಸಭೆ ಆರೋಪ
* ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಸಂಸದ ಡಿಕೆ ಸುರೇಶ್ ತಿರುಗೇಟು
* ಸದನದಲ್ಲಿ ಡಿಕೆ ಸುರೇಶ್ ವಿರುದ್ಧ ಆರೋಪ ಮಾಡಿದ್ದ ಕುಮಾರಸ್ವಾಮಿ
ರಾಮನಗರ, (ಸೆ.20): ಚನ್ನಪಟ್ಟಣ ಹಾಗೂ ರಾಮನಗರದಲ್ಲಿ ಶಾಸಕರ ಗಮನಕ್ಕೆ ತರದೇ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ ಎನ್ನುವ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಸಂಸದ ಡಿಕೆ ಸುರೇಶ್ ತಿರುಗೇಟು ಕೊಟ್ಟಿದ್ದಾರೆ.
ರಾಮನಗರದಲ್ಲಿ ಇಂದು (ಸೆ.20) ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್, ಕಾಮಗಾರಿಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಂದ್ರ ಸರ್ಕಾರ ನಮಗೆ ಅವಕಾಶ ಕೊಟ್ಟಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿಗೆ ಟಾಂಗ್ ಕೊಟ್ಟರು.
ಆಮರೇಷನ್ ಹಸ್ತ: ನಾವ್ಯಾಕೆ ಗುಟ್ಟು ಬಿಟ್ಟು ಕೊಡೋಣ ಎಂದ ಡಿಕೆಶಿ
ನಾನು ಒಬ್ಬ ಜನಪ್ರತಿನಿಧಿ ಇದ್ದೇನೆ. ಜನರ ಸಮಸ್ಯೆ ಬಗೆಹರಿಸುವುದು ನನ್ನ ಕರ್ತವ್ಯ. ಜನರ ಸಮಸ್ಯೆ ಬಗೆಹರಿಸಲು ಅಧಿಕಾರಿಗಳನ್ನು ಭೇಟಿ ಮಾಡಬೇಕಾಗುತ್ತದೆ. ರಾಜ್ಯ ಹಾಗೂ ಕೇಂದ್ರದ ಹಲವು ಯೋಜನೆಗಳು ನನಗೆ ಸಂಬಂಧಪಟ್ಟಿದೆ. ಆ ಕಾಮಗಾರಿಗಳ ಉಸ್ತುವಾರಿಯನ್ನು ನೋಡಿಕೊಳ್ಳಲು ಕೇಂದ್ರ ಅವಕಾಶ ಕೊಟ್ಟಿದೆ. ಈ ನಿಟ್ಟಿನಲ್ಲಿ ನಾನು ಕೆಲಸ ಮಾಡ್ತಿದ್ದೇನೆ ಎಂದರು.
ಬೇರೆಯವರನ್ನು ಅಪಮಾನ ಮಾಡುವ ಉದ್ದೇಶ ನನಗಿಲ್ಲ. ಬೇಕಿದ್ದರೆ ಅವರು ಕೇಂದ್ರಕ್ಕೆ ಪತ್ರ ಬರೆಯಲಿ. ಯಾರ್ಯಾರ ಅಧಿಕಾರ ಏನಿದೆ ಎಂದು ಕೇಳಲಿ. ಅವರು ಸ್ಪೀಕರ್ ಬಳಿ ವಿಚಾರ ಮಂಡನೆ ಮಾಡಿದ್ದಾರೆ. ನಾವು ಸಹ ಸ್ಪೀಕರ್ ಭೇಟಿ ಮಾಡ್ತೇವೆ ಎಂದು ಹೇಳಿದರು.
ನಾನು ಕ್ಷೇತ್ರದ ಜನರಿಗಾಗಿ ಮಾತ್ರ ಕೆಲಸ ಮಾಡುತ್ತೇನೆ. ಅದು ಬೇರೆಯವರ ಕಣ್ಣಿಗೆ ಹೇಗೆ ಕಾಣಿಸುತ್ತೆ ಎಂಬುದು ನನಗೆ ಗೊತ್ತಿಲ್ಲ. ಅದು ಅವರ ದೃಷ್ಟಿಕೋನಕ್ಕೆ ಬಿಟ್ಟ ವಿಚಾರ. ಚುನಾವಣೆಗೆ ಇನ್ನೂ ತುಂಬಾ ಸಮಯವಿದೆ. ಮೊದಲು ಜನರ ಕಷ್ಟವನ್ನು ನೋಡಬೇಕು ಎಂದು ತಿಳಿಸಿದರು.