ಬಿಜೆಪಿಯವರ ಬಳಿ ಸಾಕಷ್ಟು ದುಡ್ಡಂತೂ ಇದೆ. ರಾಜ್ಯಸಭೆ ಚುನಾವಣೆ ವೇಳೆ ನನ್ನಲ್ಲಿ ಅವರು ಮತ ಕೇಳಿದ್ದು ನಿಜ. ನಮಗೆ ಮತ ನೀಡಿ ಎಂಬುದಾಗಿ ಕೇಳಿದ್ದರು. ಚುನಾವಣೆ ವೇಳೆ ಯಾರು ಬೇಕಾದರೂ ಮತ ಕೇಳಬಹುದು. ನನ್ನ ಮತ ಕೊಡಲ್ಲ, ಎಷ್ಟು ಬೇಕಾದರೂ ದುಡ್ಡು ಬೇಕಿದ್ದರೆ ಕೊಡ್ತೇನೆ ಅಂತ ಹೇಳಿದ್ದೆ ಎಂದ ಶಾಸಕ ಡಾ.ಶಾಮನೂರು ಶಿವಶಂಕರಪ್ಪ
ದಾವಣಗೆರೆ(ಮಾ.12): ರಾಜ್ಯಸಭೆ ಚುನಾವಣೆಗೂ ಮೊದಲು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಪಕ್ಷದ ಪರ ಮತ ಚಲಾಯಿಸುವಂತೆ ಕೇಳಿದ್ದು ನಿಜ. ಆದರೆ 50 ಕೋಟಿ ರು. ಆಮಿಷವೊಡ್ಡಿದ್ದರು ಎಂಬ ಆರೋಪ ಸುಳ್ಳು ಎಂದು ಕಾಂಗ್ರೆಸ್ ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿಯವರ ಬಳಿ ಸಾಕಷ್ಟು ದುಡ್ಡಂತೂ ಇದೆ. ರಾಜ್ಯಸಭೆ ಚುನಾವಣೆ ವೇಳೆ ನನ್ನಲ್ಲಿ ಅವರು ಮತ ಕೇಳಿದ್ದು ನಿಜ. ನಮಗೆ ಮತ ನೀಡಿ ಎಂಬುದಾಗಿ ಕೇಳಿದ್ದರು. ಚುನಾವಣೆ ವೇಳೆ ಯಾರು ಬೇಕಾದರೂ ಮತ ಕೇಳಬಹುದು. ನನ್ನ ಮತ ಕೊಡಲ್ಲ, ಎಷ್ಟು ಬೇಕಾದರೂ ದುಡ್ಡು ಬೇಕಿದ್ದರೆ ಕೊಡ್ತೇನೆ ಅಂತ ಹೇಳಿದ್ದೆ ಎಂದರು.
undefined
ಜಾತಿ ಗಣತಿಗೆ ಶಾಮನೂರು ಶಿವಶಂಕರಪ್ಪ ತೀವ್ರ ವಿರೋಧ, ನಾವು ಸುಮ್ಮನೆ ಕೂರಲ್ಲ ಎಂದ ಕೈ ನಾಯಕ
ಕಾಂಗ್ರೆಸ್ ಶಾಸಕರಿಗೆ, ವಿಶೇಷವಾಗಿ ನನಗೆ ಬಿಜೆಪಿಯವರು 50 ಕೋಟಿ ರು. ಆಮಿಷವೊಡ್ಡಿದ್ದರು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರೆ ಅದೆಲ್ಲ ಸುಳ್ಳು. ನನ್ನ ಬಳಿ ಯಾರೂ ದುಡ್ಡಿನ ವಿಚಾರ ಮಾತಾಡಿಲ್ಲ. ಮತಕೇಳಿದ್ದಂತು ನಿಜ ಎಂದರು.