
ದಾವಣಗೆರೆ (ಮಾ.29): ತಾಕತ್ತಿದ್ದರೆ ದಾವಣಗೆರೆಗೆ ಬಾ ಎಂಬ ಬಿಜೆಪಿ ಮುಖಂಡ ಬಿ.ಜಿ.ಅಜಯಕುಮಾರ್ ಸವಾಲನ್ನು ಸ್ವೀಕರಿಸಿ ಶನಿವಾರ ನಗರಕ್ಕೆ ಆಗಮಿಸಿದ ಕಾಂಗ್ರೆಸ್ ಶಾಸಕ ಪ್ರದೀಪ ಈಶ್ವರ್ ಅವರು ತಮ್ಮ ಪಕ್ಷದ ಅಭ್ಯರ್ಥಿ ಸಮರ್ಥ ಎಂ.ಶಾಮನೂರು ಪರ ಪ್ರಚಾರ ಮಾಡಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರು ಶಾಸಕರ ವಿರುದ್ಧ ಕಿಡಿಕಾರಿದ್ದು, ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ನಗರದ ಕೆ.ಬಿ.ಬಡಾವಣೆಯಲ್ಲಿ ಶನಿವಾರ ಬಿಎಂಡಬ್ಲ್ಯು ಕಾರಿನ ಮೇಲೆ ನಿಂತ ಪ್ರದೀಪ ಈಶ್ವರ ಕಾಂಗ್ರೆಸ್ ಬಾವುಟ ಹಿಡಿದು, ತೊಡೆತಟ್ಟುತ್ತಾ, ತಲೆಗೂದಲನ್ನು ಸವರಿಕೊಂಡು ಬಿಜೆಪಿಗರನ್ನು ಕೆಣಕಿದರು. ಈ ವೇಳೆ ಮುಖಂಡರು ಹಾಗೂ ಮಹಿಳಾ ಕಾರ್ಯಕರ್ತರು ಕೈಯಲ್ಲಿ ಪೊರಕೆ ಹಿಡಿದು ತೋರಿಸಿ ಆಕ್ರೋಶ ಹೊರಹಾಕಿದರು.
ಬಡಾವಣೆಯ ಬಿಜೆಪಿ ಕಚೇರಿ ಬಳಿ ಬಿಜೆಪಿ ಮತ್ತು ಕಾಂಗ್ರೆಸ್ ಗುಂಪುಗಳು ಮುಖಾಮುಖಿಯಾಗಿ, ಪರಸ್ಪರ ವಿರುದ್ಧ ಘೋಷಣೆಗಳನ್ನು ಕೂಗತೊಡಗಿದರು. ಕಾರಿನ ಮೇಲೆ ನಿಂತಿದ್ದ ಶಾಸಕನಿಗೆ ಬಿಜೆಪಿಯವರು ನಿಂದಿಸಿದರು. ಎರಡೂ ಕಡೆಯವರು ಪರಸ್ಪರರ ಕೈ-ಕೈ ಮಿಲಾಯಿಸುವಂತೆ ಮುನ್ನುಗ್ಗಲು ಪ್ರಯತ್ನಿಸುತ್ತಿದ್ದಂತೆ ಪೊಲೀಸ್ ಸಿಬ್ಬಂದಿ ಹರಸಾಹಸ ಸಮಾಧಾನ ಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.