ಮನೆಗೆ ಬಂದ ಕಾಂಗ್ರೆಸ್‌ ನಾಯಕರಿಗೆ ಪ್ರವೀಣ್‌ ಬಂಧುಗಳಿಂದ ತರಾಟೆ

By Govindaraj S  |  First Published Aug 1, 2022, 3:30 AM IST

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು ಮನೆಗೆ ಭಾನುವಾರ ಕಾಂಗ್ರೆಸ್‌ ನಾಯಕರ ನಿಯೋಗವು ಭೇಟಿ ನೀಡಿದ್ದು, ಈ ವೇಳೆ ಪ್ರವೀಣ್‌ ಸಂಬಂಧಿಕರೊಬ್ಬರು ನಾಯಕರನ್ನು ತರಾಟೆಗೆ ತೆಗೆದುಕೊಂಡು ಧಿಕ್ಕಾರ ಕೂಗಿದ ಘಟನೆ ನಡೆಯಿತು.


ಸುಳ್ಯ (ಆ.01): ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರವೀಣ್‌ ನೆಟ್ಟಾರು ಮನೆಗೆ ಭಾನುವಾರ ಕಾಂಗ್ರೆಸ್‌ ನಾಯಕರ ನಿಯೋಗವು ಭೇಟಿ ನೀಡಿದ್ದು, ಈ ವೇಳೆ ಪ್ರವೀಣ್‌ ಸಂಬಂಧಿಕರೊಬ್ಬರು ನಾಯಕರನ್ನು ತರಾಟೆಗೆ ತೆಗೆದುಕೊಂಡು ಧಿಕ್ಕಾರ ಕೂಗಿದ ಘಟನೆ ನಡೆಯಿತು. 

ವಿಧಾನ ಪರಿಷತ್‌ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್‌, ಮಾಜಿ ಸಚಿವ ಬಿ. ರಮಾನಾಥ ರೈ, ವಿಧಾನ ಪರಿಷತ್‌ ಸದಸ್ಯರಾದ ಹರೀಶ್‌ ಕುಮಾರ್‌, ಮಂಜುನಾಥ ಭಂಡಾರಿ, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ, ಕಾಂಗ್ರೆಸ್‌ ನಾಯಕರಾದ ಶಶಿಧರ ಹೆಗ್ಡೆ, ಅಭಯಚಂದ್ರ ಜೈನ್‌, ಕಾವು ಹೇಮನಾಥ ಶೆಟ್ಟಿ, ಪ್ರತಿಭಾ ಕುಳಾಯಿ, ರಕ್ಷಿತ್‌ ಶಿವರಾಮ್‌, ಕವಿತಾ ಸನಿಲ್‌, ಎಂ. ವೆಂಕಪ್ಪ ಗೌಡ, ಪಿ.ಸಿ. ಜಯರಾಮ್‌, ಭರತ್‌ ಮುಂಡೋಡಿ, ಡಾ. ರಘು, ಪಿ.ಎಸ್‌. ಗಂಗಾಧರ್‌, ಸಚಿನ್‌ ರಾಜ್‌ ಶೆಟ್ಟಿಮೊದಲಾದವರು ಭಾನುವಾರ ಪ್ರವೀಣ್‌ ನೆಟ್ಟಾರು ಮನೆಗೆ ಭೇಟಿ ನೀಡಿತು.

Tap to resize

Latest Videos

Mangaluru murder case; ಜಾಲತಾಣಗಳ ವಿರುದ್ಧ ಗಂಭೀರ ಕ್ರಮಕ್ಕೆ ಚಿಂತನೆ: ADGP Alok Kumar

ಮುಖಂಡರು ಒಳಪ್ರವೇಶಿಸಿದಾಗ ಪ್ರವೀಣ್‌ ತಂದೆ ತಾಯಿ ನಮಸ್ಕರಿಸಿದರು. ಪತ್ನಿ ನೂತನ ‘ತಮಗೆ ನ್ಯಾಯ ಕೊಡಿಸಿ’ ಎಂದು ಹೇಳಿದರು. ಮನೆಯವರು ಮಾತನಾಡುತ್ತಿದ್ದಂತೆ ಸಂಬಂಧಿ ಜಯರಾಮ ಎಂಬವರು ‘ಇಷ್ಟು ದಿನ ಕಳೆದ ಮೇಲೆ ಯಾಕೆ ಬಂದಿದ್ದೀರಿ? ನೀವು ಇದೇ ಜಿಲ್ಲೆಯವರಲ್ಲವೇ?’ ಎಂದು ರಮಾನಾಥ ರೈಯವರನ್ನು ಪ್ರಶ್ನಿಸಿದರು.

ಆಗ ರೈಗಳು, ‘ಅವರು ಮಾತನಾಡುತ್ತಿದ್ದಾರೆ, ಮಾತನಾಡಲಿ’ ಎಂದರು. ಇಷ್ಟುದಿನ ನಾವೇ ಇಲ್ಲಿದ್ದದ್ದು ಎಂದು ಹೇಳುತ್ತಾ ಹೊರಗೆ ಬಂದ ಜಯರಾಮ, ಕಾಂಗ್ರೆಸ್‌ ನಾಯಕರನ್ನು ತರಾಟೆಗೆ ತೆಗೆದುಕೊಂಡರು. ‘ನಾಳೆ ಇವರಿಗೆ ಜಾಮೀನು ಕೊಡಿಸುವವರು ನೀವೇ ಅಲ್ಲವೇ?’ ಎಂದು ಕೆಲವರು ತರಾಟೆಗೆ ತೆಗೆದುಕೊಂಡರು. ಒಳಗೆ ಮನೆಯವರೊಂದಿಗೆ ಮಾತುಕತೆ ನಡೆಸಿ ಮುಖಂಡರು ಹೊರಗೆ ಬಂದ ಬಳಿಕ ಬಿ.ಕೆ. ಹರಿಪ್ರಸಾದ್‌ ಮಾಧ್ಯಮದವರನ್ನುದ್ದೇಶಿಸಿ ಮಾತನಾಡುತ್ತಿದ್ದಂತೆ ಕೆಲವರು ‘ಕಾಂಗ್ರೆಸ್‌ಗೆ ಧಿಕ್ಕಾರ’ ಎಂದು ಘೋಷಣೆ ಕೂಗಿದರು.

ದ.ಕ. ಜಿಲ್ಲೆಗೆ ಎನ್‌ಐಎ ತಂಡ ಆಗಮನ: ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆಗೆ ಸಂಬಂಧಿಸಿ ಹಂತಕರಿಗೆ ಕೇರಳ ಲಿಂಕ್‌ ಇರುವ ಸಾಧ್ಯತೆ ಹಿನ್ನೆಲೆಯಲ್ಲಿ ಹೆಚ್ಚಿನ ತನಿಖೆ ನಡೆಸಲು ಕೇಂದ್ರ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ) ದ.ಕ.ಜಿಲ್ಲೆಗೆ ಆಗಮಿಸಿದೆ. ಇಬ್ಬರು ಅಧಿಕಾರಿಗಳನ್ನು ಒಳಗೊಂಡ ಈ ತಂಡ ಶನಿವಾರ ಮಂಗಳೂರಿಗೆ ಆಗಮಿಸಿದ್ದು, ಭಾನುವಾರ ಪುತ್ತೂರು, ಬೆಳ್ಳಾರೆ ಮತ್ತಿತರ ಕಡೆಗಳಿಗೆ ತೆರಳಿ ಹತ್ಯೆ ಘಟನೆಗೆ ಸಂಬಂಧಿಸಿ ಪ್ರಾಥಮಿಕ ಮಾಹಿತಿ ಕಲೆ ಹಾಕಲು ತೊಡಗಿದೆ. 

ಪ್ರವೀಣ್‌ ಹತ್ಯೆ ಘಟನೆಗೆ ಕೇರಳದ ಸಂಘಟನೆಗಳ ಸಂಪರ್ಕ ಇರುವ ಸಾಧ್ಯತೆ ಸಲುವಾಗಿ ರಾಜ್ಯ ಸರ್ಕಾರ ಎನ್‌ಐಎ ತನಿಖೆಗೆ ಕೇಂದ್ರಕ್ಕೆ ಶಿಫಾರಸು ಮಾಡಿತ್ತು. ಈ ಹಿನ್ನೆಲೆಯಲ್ಲಿ ಶಿಫಾರಸು ಮಾಡಿದ ಎರಡೇ ದಿನದಲ್ಲಿ ತನಿಖಾ ತಂಡ ಆಗಮಿಸಿದೆ. ಪ್ರವೀಣ್‌ ಹತ್ಯೆಯಾದ ಸ್ಥಳ, ಆತನ ಅಂಗಡಿ ವ್ಯವಹಾರ, ಸ್ನೇಹಿತರ ಸಂಪರ್ಕ, ಹಿಂದು, ಮುಸ್ಲಿಂ ಸಂಘಟನೆಗಳು ಹಾಗೂ ಆತನ ಕುಟುಂಬದ ಜತೆ ಮಾತನಾಡಿ ವಿವರವಾದ ಮಾಹಿತಿ ಸಂಗ್ರಹಿಸಲಿದೆ. ಅಲ್ಲದೆ ಪೊಲೀಸ್‌ ತನಿಖಾ ತಂಡದ ಜತೆ ಮಾತನಾಡಲಿದ್ದು, ಬಂಧಿತ ಆರೋಪಿಗಳನ್ನೂ ವಿಚಾರಣೆಗೆ ಗುರಿ ಪಡಿಸಲಿದೆ. 

ಪ್ರವೀಣ್‌ ಹತ್ಯೆ ಪ್ರಕರಣ: ಕೇರಳ ಮೂಲದ ಶಂಕಿತ ವ್ಯಕ್ತಿ ಪೊಲೀಸ್‌ ವಶಕ್ಕೆ

ಈ ಎಲ್ಲ ಪ್ರಾಥಮಿಕ ಮಾಹಿತಿ ಸಂಗ್ರಹ ಪ್ರಕ್ರಿಯೆ ಮುಕ್ತಾಯಗೊಳಿಸಿದ ಬಳಿಕವೇ ತನಿಖೆಗೆ ಕ್ರಮ ಕೈಗೊಳ್ಳಲಿದೆ. ಸಾಮಾನ್ಯವಾಗಿ ದೇಶದ ಹಿತಾಸಕ್ತಿಗೆ ಧಕ್ಕೆ ತರುವಂತಹ, ಉಗ್ರವಾದ ಕೃತ್ಯಗಳಲ್ಲಿ ಎನ್‌ಐಎ ತನಿಖೆ ಪ್ರಮುಖ ಪಾತ್ರ ವಹಿಸುತ್ತದೆ. ಇದು ದುಷ್ಕರ್ಮಿಗಳಿಂದ ನಡೆದ ಹತ್ಯೆ ಘಟನೆಯಾದರೂ ಕೇರಳದ ನಿಷೇಧಿತ ಅಥವಾ ಸಮಾಜದ್ರೋಹಿ ಸಂಘಟನೆಗಳ ಪಾತ್ರದ ಬಗ್ಗೆ ಎನ್‌ಐಎ ತನಿಖೆಯನ್ನು ಕೈಗೆತ್ತಿಕೊಳ್ಳುವ ಸಂಭವ ಇದೆ ಎಂದು ಮೂಲಗಳು ತಿಳಿಸಿವೆ.

click me!