ದಲಿತರು ಸಿಎಂ ಆಗೋದ್ರಲ್ಲಿ ತಪ್ಪೇನಿಲ್ಲ: ಕಾಂಗ್ರೆಸ್‌ ನಾಯಕ ತಿಮ್ಮಾಪೂರ

Suvarna News   | Asianet News
Published : Oct 03, 2021, 02:28 PM ISTUpdated : Oct 03, 2021, 02:32 PM IST
ದಲಿತರು ಸಿಎಂ ಆಗೋದ್ರಲ್ಲಿ ತಪ್ಪೇನಿಲ್ಲ: ಕಾಂಗ್ರೆಸ್‌ ನಾಯಕ ತಿಮ್ಮಾಪೂರ

ಸಾರಾಂಶ

*  ಯಾರು ಮತಾಂಧರೋ ಅವರೆಲ್ಲಾ ತಾಲಿಬಾನಿಗಳೇ *  ನಾ ಒಬ್ಬನೇ ಹೇಳಿದ ತಕ್ಷಣ ಸಿಎಂ ಆಗ್ತಿದ್ರೆ, ನಾ ಆವಾಗ್ಲೆ ದಲಿತ ಸಿಎಂ ಆಗಿ ಬಿಡ್ತಿದ್ದೆ *  ಅಸ್ಪೃಶ್ಯತೆ ಎಲ್ಲೆಡೆ ತಾಂಡವವಾಡುತ್ತಿದೆ 

ಬಾಗಲಕೋಟೆ(ಅ.03):  ಕಾಂಗ್ರೆಸ್‌ನವರು(Congress) ಪಂಜಾಬ್‌ನಲ್ಲಿ(Punjab) ದಲಿತರನ್ನ ಮುಖ್ಯಮಂತ್ರಿ ಮಾಡಿದ್ದಾರೆ. ಅದು ನಮಗೆ ಬಹಳ ಖುಷಿಯಿದೆ. ನಮ್ಮ ರಾಜ್ಯದಲ್ಲಿ ಮೆಜಾರಿಟಿ ಬಂದ ಮೇಲೆ ಹೈಕಮಾಂಡ್ ಜೊತೆ ಮಾತನಾಡುತ್ತೇವೆ. ಮಾಜಿ ಡಿಸಿಎಂ ಡಾ.ಪರಮೇಶ್ವರ ಅವರು ಹೇಳಿದ್ದಲ್ಲಿ ತಪ್ಪಿಲ್ಲ, ಅವರು ತಮ್ಮ ವಿಚಾರ ಧಾರೆಗಳನ್ನ ಹೇಳಿದ್ದಾರೆ. ಎಲ್ಲ ಸಮಾಜದವರು ಬೇಡ್ತಾರೆ. ಹಾಗೆ ನಾವು ಬೇಡಿದ್ದೇವೆ, ಅದರಲ್ಲಿ ತಪ್ಪೇನಿಲ್ಲ ಎಂದು ಹೇಳುವ ಮೂಲಕ ದಲಿತ(Dalit) ಸಿಎಂ ವಿಚಾರವನ್ನ ಮಾಜಿ ಸಚಿವ ಆರ್.ಬಿ.ತಿಮ್ಮಾಪೂರ ಸಮರ್ಥಿಸಿಕೊಂಡಿದ್ದಾರೆ. 

ಇಂದು(ಭಾನುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನಾಭಿಪ್ರಾಯ, ಮತ ಯಾರಿಂದ ಹೆಚ್ಚಿಗೆ ಬರುತ್ವೆ ಅನ್ನೋದನ್ನ ನೋಡಿಕೊಂಡು ಹೈಕಮಾಂಡ್ ಆಯ್ಕೆ ಮಾಡುತ್ತದೆ. ದಲಿತ ಸಿಎಂ ಆಯ್ಕೆ ವಿಚಾರದ ಬಗ್ಗೆ ನಾನೇನು ಹೇಳಲ್ಲ. ಅದರ ಬಗ್ಗೆ ನಾ ಮಾತನಾಡೋದು ಸರಿಯಾದುದ್ದಲ್ಲ. ಚುನಾವಣೆ(Election) ಇನ್ನು ದೂರವಿದೆ. ಈಗ ಅದರ ಬಗ್ಗೆ ಮಾತನಾಡೋದು ಸರಿಯಲ್ಲ. ಈಗ ಅದರ ಬಗ್ಗೆ ಮಾತನಾಡಿಸಿ ನಮ್ಮ ಪಾರ್ಟಿ ಗೊಂದಲಕ್ಕೆ ಕೆಡುವಬೇಡ್ರಿ ಅಂತ ಪತ್ರಕರ್ತರಿಗೆ ಆರ್. ಬಿ. ತಿಮ್ಮಾಪೂರ(RB Timmapur) ಮನವಿ ಮಾಡಿಕೊಂಡಿದ್ದಾರೆ. 

ರಾಜ್ಯದಲ್ಲಿ ಮತ್ತೆ ದಲಿತ ಮುಖ್ಯಮಂತ್ರಿ ಕೂಗು..!

ಮೆಜಾರಿಟಿ ಬಂದ ಮೇಲೆ ನಾವೆಲ್ಲ ಮಾತನಾಡ್ತೇವೆ. ಈಗ ಆ ವಿಷಯ ಗೊಂದಲಕ್ಕೀಡು ಮಾಡಬೇಡಿ. ಇಲೆಕ್ಷನ್ ಬಂದಿಲ್ಲ ನಮ್ಮ ಪಾರ್ಟಿ ಅಧಿಕಾರಕ್ಕೆ ಬಂದಿಲ್ಲ. ನಮ್ಮ ಸಿಎಲ್‌ಪಿ ಮೀಟಿಂಗ್ ಆಗಬೇಕು. ನಮ್ಮ ಹೈಕಮಾಂಡ್ ಒಪ್ಪಿಗೆ ಸೂಚಿಸಬೇಕು. ನಾ ಒಬ್ಬನೇ ಹೇಳಿದ ತಕ್ಷಣ ಸಿಎಂ ಆಗ್ತಿದ್ರೆ, ನಾ ಆವಾಗ್ಲೆ ದಲಿತ ಸಿಎಂ ಆಗಿ ಬಿಡುತ್ತಿದ್ದೆ. ಬೇರೆಯವರಿಗೆ ನಾನ್ಯಾಕೆ ಹೇಳಬೇಕು ಅಂತ ಪ್ರಶ್ನಿಸಿದ್ದಾರೆ. 

ಬಿಜೆಪಿಗರು(BJP) ತಾಲೀಬಾನಿಗಳು ಎನ್ನುವ ವಿಚಾರದ ಬಗ್ಗೆ ಮಾತನಾಡಿದ ತಿಮ್ಮಾಪೂರ, ಯಾರು ಮತಾಂಧರೋ ಅವರೆಲ್ಲಾ ತಾಲಿಬಾನಿಗಳೇ(Taliban). ಮುಸ್ಲಿಂರಲ್ಲಿ ತಾಲಿಬಾನಿಗಳಿದ್ರೆ ಅವರು ತಾಲಿಬಾನಿಗಳೇ, ಹಿಂದೂಗಳಲ್ಲಿದ್ರೂ ಅವರು ತಾಲಿಬಾನಿಗಳೇ ಅಂತ ಹೇಳಿದ್ದಾರೆ. 

ಸಚಿವ ಗೋವಿಂದ ಕಾರಜೋಳ ಅವರಿಗೆ ಅಸ್ಪೃಶ್ಯತೆ ಏನು ನಡಿತಿದೆ ಅನ್ನೋದು ಗೊತ್ತಾ ಇವರಿಗೆ?. ಎಷ್ಟೋ ಜಾತಿಗಳಿಗೆ ಅಸ್ಪೃಶ್ಯತೆ ನಡಿತಿದೆ. ಉಡುಪಿಯ ಸಹಪಂಕ್ತಿ ಭೋಜನದಲ್ಲಿ ಪ್ರಧಾನಿ ಮೋದಿ ಮತ್ತು ಯಡಿಯೂರಪ್ಪನ್ನ ಕೂರಿಸಿ ಅಂತ ಹೇಳಿದ್ದೆ, ಇಂತಹ ಧರ್ಮಾಚರಣೆ ಮಾಡುವ ಮತಾಂಧರಿಗೆ ಏನಂತಾರೆ. ಬಿಜೆಪಿಗರು ಒಮ್ಮೆ ಹೇಳಿದ್ರೂ ನಾವೇ ಮಹಾತ್ಮ ಗಾಂಧೀಜಿ ಅವರನನ್ನ ಕೊಂದವರು ಅಂತ. ಇಂತವರಿಗೆ ಏನಂತ ಕರೀಬೇಕು, ಯಾವ ಶಬ್ಧ ಉಪಯೋಗಿಸಿ ಕರೆಯಬೇಕು. ಅವರನ್ನು ತಾಲಿಬಾನಿಗಳೇ ಅಂತ ಕರೆಯಬೇಕಲ್ಲವೆ, ದೇಶದ್ರೋಹಿಗಳಲ್ಲವೇ ಇವರು. ದೇಶಕ್ಕೆ ಸ್ವಾತಂತ್ರ್ಯ ತಂದವರನ್ನ ಕೊಂದವರಿಗೆ ಏನೆನ್ನಬೇಕು?. ಅಸ್ಪೃಶ್ಯತೆ ಎಲ್ಲೆಡೆ ತಾಂಡವವಾಡುತ್ತಿದೆ. ಮನುಷ್ಯರನ್ನ ಮನುಷ್ಯರಂತೆ ಕಾಣುತ್ತಿಲ್ಲ ಇವರು. ತಾಲಿಬಾನ್‌ಗಿಂತ ಕೆಟ್ಟ ಶಬ್ಧ ಇದು ಎಂದ ತಿಮ್ಮಾಪೂರ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. 
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್