
ಚಿಕ್ಕಬಳ್ಳಾಪುರ (ಜ.26): ನಮ್ಮ ತಾತ, ತಂದೆ ಮತ್ತು ನನ್ನ ಮತ್ತು ಎಲ್ಲರ ಹೆಸರಲ್ಲೂ ರಾಮನಿದ್ದಾನೆ. ರಾಮ ಕೇವಲ ಬಿಜೆಪಿಗರ ಸೊತ್ತಲ್ಲ, ರಾಮನ ಹೆಸರಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಎಂ.ಎಸ್.ರಕ್ಷಾ ರಾಮಯ್ಯ ಟೀಕಿಸಿದರು. ಅಯೋಧ್ಯೆಯ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠಾನ ಮತ್ತು ಉದ್ಘಾಟನಾ ಅಂಗವಾಗಿ ನಗರದ ವಿವಿಧ ದೇವಾಲಯಗಳಿಗೆ ಭೇಟಿ ನೀಡಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ವಾರದಲ್ಲಿ ಒಂದು ದಿನ ವೆಂಕಟೇಶ್ವರ ದೇವಾಲಯ, ಮತ್ತೊಂದು ದಿನ ರಾಮ , ಚೌಡೇಶ್ವರಿ, ಶಿವ, ಹನುಮಂತ ಹೀಗೆ ಎಲ್ಲಾ ದೇವಾಲಯಗಳಿಗೆ ಹೋಗುತ್ತೇನೆ. ಅದು ನನ್ನ ಭಕ್ತಿಯೇ ಹೊರತು ಪ್ರದರ್ಶನವಲ್ಲ ಎಂದರು.
ರಾಮ ಎಲ್ಲರ ಆರಾಧ್ಯ ಧೈವ: ದೇಶಕ್ಕೆ ಕೀರ್ತಿತಂದಂತಹ ರಾಮ ನಮ್ಮೆಲ್ಲರ ಆರಾಧ್ಯ ದೈವ. ಅಯೋಧ್ಯಯಲ್ಲಿ ರಾಮಮಂದಿರ ನಿರ್ಮಾಣ ಮಾಡುತ್ತಿರುವುದು ಸ್ವಾಗತಾರ್ಹ. ರಾಮನ ಆಡಳಿತದಲ್ಲಿ ಯಾವುದೇ ಒಂದು ವಸ್ತು ಕಳವು ಆಗುತ್ತಿರಲಿಲ್ಲ. ಜಾತಿಯ ಸಂಘರ್ಷವು ಇರಲಿಲ್ಲ. ಆದರೆ, ಇಂದು ಬಿಜೆಪಿಗರು ಜಾತಿ ಜಾತಿಗಳ ಮಧ್ಯೆ ವಿಷಬೀಜವನ್ನು ಬಿತ್ತಿ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎಂದು ದೂರಿದರು.
ಕೋಮು ಭಾವನೆಯ ರಾಮ ಬೇಡ: ಕಾಂಗ್ರೆಸಿಗರಿಗೆ ಕೋಮು ಭಾವನೆಯ ರಾಮ ಬೇಡ. ರಾಮ ಮಂದಿರ ಬಿಜೆಪಿಗರ ಸೊತ್ತಲ್ಲ. ರಾಮನ ಹೆಸರಿನಲ್ಲಿ ಕೋಮುವಾದ ಮಾಡುವುದು ತಪ್ಪು. ಅಯೋಧ್ಯೆ ಶ್ರೀರಾಮ ಕೇವಲ ಬಿಜೆಪಿಗರ ಮತ್ತು ಸಂಘ ಪರಿವಾರದವರ ಸೊತ್ತಲ್ಲ. ಜಾತ್ಯತೀತ ಮನೋಭಾವನೆ ಹೊಂದಿದ ಶ್ರೀರಾಮಚಂದ್ರನನ್ನು ಬಿಜೆಪಿಯವರು ಲೋಕಸಭಾ ಚುನಾವಣೆಗೆ ದೊಡ್ಡಅಸ್ತ್ರವನ್ನಾಗಿ ಮಾಡಿಕೊಳ್ಳುತ್ತಿರುವುದು ರಾಜಕೀಯ ಎಂದರು. ರಾಜ್ಯದಲ್ಲಿ ಅಯೋಧ್ಯೆ ಶ್ರೀರಾಮ ಮಂದಿರ ಉಧ್ಘಾಟನೆಗೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಜೆಯನ್ನು ನೀಡಿಲ್ಲಾ ಎಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಕ್ಷಾರಾಮಯ್ಯ, ರಜೆ ಏನಾದರೂ ನೀಡಿದರೆ ಅದರಿಂದ ತೊಂದರೆಗಳೆ ಜಾಸ್ತಿ, ಎಮ್ಸ್ ನವರು ಇಂದು ಆಸ್ಪತ್ರೆ ಮುಚ್ಚಿದ್ದರೆ ಜನರ ಆರೋಗ್ಯ ಮತ್ತು ಅತಿ ತುರ್ತು ಚಿಕಿತ್ಸೆ ಪಡೆಯುತ್ತಿರುವವರ ಗತಿ ಎನು ನೀವೆ ಯೋಚಿಸಿ ಎಂದರು.
ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವೆ ಎಂದಿದ್ದ ದೇವೇಗೌಡರು: ಸಚಿವ ಚಲುವರಾಯಸ್ವಾಮಿ
ರಕ್ಷಾ ರಾಮಯ್ಯಗೆ ಸನ್ಮಾನ: ಈ ಸಂದರ್ಭದಲ್ಲಿ ಸಂತೆ ಮಾರ್ಕೆಟ್ ನ ಯುವಕರು ರಕ್ಷಾರಾಮಯ್ಯರನ್ನು ಸನ್ಮಾನಿಸಿದರು. ಮುಖಂಡರಾದ ಖೋಡೇಸ್ ವೆಂಕಟೇಶ್, ಷಾಹೀದ್, ಕುಬೇರ್ ಅಚ್ಚು, ಕುಪೇಂದ್ರ, ಮಹಿಳಾ ಕಾಂಗ್ರೇಸ್ ನ ರಾಜ್ಯ ಉಪಾಧ್ಯಕ್ಷೆ ಮಮತಾಮೂರ್ತಿ,ಅಖಿಲ ಭಾರತ ರಾಜೀವ್ ಕಾಂಗ್ರೇಸ್‌ನ ರಾಜ್ಯಾಧ್ಯಕ್ಷ ಬಾಭಾಜಾನ್ ಮತ್ತಿತರರು ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.