ದಲಿತ, ಮುಸ್ಲಿಮರು ಮನಸ್ಸು ಮಾಡಿದರೆ ದಲಿತ ಸಿಎಂ: ಜಿ.ಪ​ರ​ಮೇ​ಶ್ವರ್‌

By Kannadaprabha News  |  First Published Jul 4, 2022, 4:45 AM IST

*   ಕಾಂಗ್ರೆಸ್ಸಲ್ಲಿ ಗುಂಪುಗಾರಿಕೆ ಇಲ್ಲ
*  ಸಿದ್ದು ಜನ್ಮದಿನಾಚರಣೆ ತಪ್ಪಲ್ಲ
*  ಸಂವಿ​ಧಾನ ಇದ್ದರೆ ಪ್ರಜಾ​ಪ್ರ​ಭುತ್ವ ಇರು​ತ್ತದೆ
 


ರಾಮನಗರ(ಜು.04):  ದ​ಲಿ​ತರು ಮತ್ತು ಮುಸಲ್ಮಾ​ನರು ಮನಸ್ಸು ಮಾಡಿ​ದರೆ ರಾಜ್ಯ​ದಲ್ಲಿ ಯಾರನ್ನು ಬೇಕಾ​ದರೂ ಮುಖ್ಯ​ಮಂತ್ರಿ ಮಾಡ​ಬ​ಹುದು ಎಂದು ಮಾಜಿ ಸಚಿವ ಡಾ. ಜಿ.ಪ​ರ​ಮೇ​ಶ್ವರ್‌ ಹೇಳಿ​ದ್ದಾರೆ. ತಾಲೂಕಿನ ಶ್ಯಾನುಬೋಗನಹಳ್ಳಿಯಲ್ಲಿರುವ ಎಸ್‌.ವಿ.ಕನ್ವೆನ್ಷನ್‌ ಹಾಲ್‌ನಲ್ಲಿ ನಡೆದ ಅಂಬೇಡ್ಕರ್‌ ಹಬ್ಬ ಹಾಗೂ ರಮಾಬಾಯಿ ಅಂಬೇಡ್ಕರ್‌ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘ ಉದ್ಘಾ​ಟಿಸಿ ಹಾಗೂ ನಂತರ ಸುದ್ದಿಗಾರರ ಜತೆಗೆ ಮಾತ​ನಾ​ಡಿ​ ಈ ವಿಚಾರ ತಿಳಿಸಿದರು.

ರಾಜ್ಯ​ದಲ್ಲಿ ದಲಿ​ತರು ಮತ್ತು ಅಲ್ಪ​ಸಂಖ್ಯಾ​ತ ಮತ​ದಾ​ರರ ಸಂಖ್ಯೆ ಹೆಚ್ಚಿದ್ದು, ಈ ಎರಡೂ ಸಮುದಾಯ ಮನಸ್ಸು ಮಾಡಿ​ದರೆ ಮಾತ್ರ ದಲಿ​ತ ನಾಯ​ಕ​ರೊ​ಬ್ಬರು ಮುಖ್ಯ​ಮಂತ್ರಿ​ಯಾ​ಗಲು ಸಾಧ್ಯ​. ಕೆಲ ಮಾಧ್ಯ​ಮ​ಗಳು ದಲಿತ ಮುಖ್ಯ​ಮಂತ್ರಿಯೆಂದು ವಿನಾಃ ಕಾರಣ ಪ್ರಸ್ತಾಪ ಮಾಡಿ ಗೊಂದಲ ಸೃಷ್ಟಿ​ಸುತ್ತಿವೆ ಎಂದರು.

Tap to resize

Latest Videos

ಕಾಂಗ್ರೆಸ್‌ನಲ್ಲಿ ಸಿಗದ ಸೂಕ್ತ ಸ್ಥಾನಮಾನ: ಪರಮೇಶ್ವರ ಹೇಳಿದ್ದಿಷ್ಟು

ಸಂವಿ​ಧಾನ ಇದ್ದರೆ ಪ್ರಜಾ​ಪ್ರ​ಭುತ್ವ ಇರು​ತ್ತದೆ. ಸಂವಿ​ಧಾನ ಮತ್ತು ಪ್ರಜಾ​ಪ್ರ​ಭುತ್ವದ ಉಳಿವು ಕಾಂಗ್ರೆಸ್‌ ಪಕ್ಷ​ದಿಂದ ಮಾತ್ರ ಸಾಧ್ಯ. ದಲಿ​ತರು ಮತ್ತು ಅಲ್ಪ​ಸಂಖ್ಯಾ​ತರು ಕಾಂಗ್ರೆಸ್‌ ಪರ​ ಇರ​ಬೇಕು. ರಾಮ​ನ​ಗರ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ ಅವ​ರನ್ನು ಬೆಂಬ​ಲಿ​ಸ​ಬೇಕು ಎಂದರು.

ಸಿದ್ದು ಹುಟ್ಟುಹಬ್ಬ ಸಂಭ್ರಮ ತಪ್ಪೇನಿಲ್ಲ:

ಕಾಂಗ್ರೆಸ್‌ನಲ್ಲಿ ಯಾವುದೇ ಗುಂಪುಗಾರಿಕೆ ಇಲ್ಲ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ 75 ವರ್ಷ ಪೂರೈಸಿದ ಹಿನ್ನೆಲೆ ಅಭಿಮಾನಿಗಳು ಸಂಭ್ರಮಾಚರಣೆ ಮಾಡಿದರೆ ತಪ್ಪೇನೂ ಇಲ್ಲ. ಒಬ್ಬ ವ್ಯಕ್ತಿ 75 ವರ್ಷ ಪೂರೈಸುವುದು ಸುಲಭವಲ್ಲ. ಸಿದ್ದ​ರಾ​ಮ​ಯ್ಯ​ರ​ವರ ಅಭಿಮಾನಿಗಳು ಅವರ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡುತ್ತಿ​ದ್ದಾರೆ ಅಷ್ಟೆ ಎಂದರು.

ರಾಜ್ಯದಲ್ಲಿನ ಎಸ್ಸಿ, ಎಸ್ಟಿಸಮುದಾಯದ ಜನಸಂಖ್ಯೆಗೆ ತಕ್ಕಂತೆ ರಾಜ್ಯದ ಬಿಜೆಪಿ ಸರ್ಕಾರ ಆಯವ್ಯಯದಲ್ಲಿ ಅನುದಾನ ಮೀಸಲಿಟ್ಟಿಲ್ಲ. .42 ಸಾವಿರ ಕೋಟಿ ಬದಲಿಗೆ .28 ಸಾವಿರ ಕೋಟಿ ಮಾತ್ರ ಮೀಸಲಿಟ್ಟಿದೆ ಎಂದು ದೂರಿದರು.
ಕಾಂಗ್ರೆಸ್‌ ಅಧಿಕಾರದಲ್ಲಿದ್ದ ವೇಳೆ ಜನಸಂಖ್ಯೆಯನ್ನು ಆಧರಿಸಿ ಎಸ್ಸಿ, ಎಸ್ಟಿಸಮುದಾಯಗಳ ಅಭಿವೃದ್ಧಿಗೆಂದು ಆಯವ್ಯಯದ ಒಟ್ಟು ಗಾತ್ರದಲ್ಲಿ ಶೇ.24ರಷ್ಟುಮೊತ್ತವನ್ನು ಮೀಸಲಿಟ್ಟಿತ್ತು. ಅದರಂತೆ ಈ ಬಾರಿ ಮಂಡನೆಯಾದ ಆಯವ್ಯಯದಲ್ಲಿ ಒಟ್ಟು .42 ಸಾವಿರ ಕೋಟಿ ಮೀಲಿಡಬೇಕಿತ್ತು. ಆದರೆ, ಬಿಜೆಪಿ ಸರ್ಕಾರ ಕೇವಲ .28 ಸಾವಿರ ಕೋಟಿ ಮಾತ್ರ ಇಟ್ಟಿದೆ. ಇಂಥ ಪಕ್ಷಕ್ಕೆ ಮುಂದಿನ ಚುನಾವಣೆಯಲ್ಲಿ ಮತ ಕೊಡಬೇಕೇ ಎಂಬ ಕುರಿತು ಆಲೋಚಿಸಿ ಎಂದರು.
 

click me!