ದಾವಣಗೆರೆಯಲ್ಲಿ ಚುರುಕುಗೊಂಡಿದೆ ಬಿಜೆಪಿ ಭ್ರಷ್ಟಾಚಾರದ ತನಿಖೆ: ದಿನೇಶ್.ಕೆ.ಶೆಟ್ಟಿ

By Govindaraj S  |  First Published Aug 11, 2023, 6:01 PM IST

ಬಿಜೆಪಿ ಆಡಳಿತ ಅವಧಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯಲ್ಲಿ ಭ್ರಷ್ಟಾಚಾರ ಸಾಬೀತಾದ್ರೆ ಸಂಸದರು, ಶಾಸಕರು ಜೈಲಿಗೆ ಹೋಗಲು ಸಿದ್ದರಾಗಿ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ ಎಚ್ಚರಿಸಿದ್ದಾರೆ. 
 


ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಆ.11): ಬಿಜೆಪಿ ಆಡಳಿತ ಅವಧಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದ್ದು ತನಿಖೆ ನಡೆಸಲಾಗುತ್ತಿದೆ. ಈ ತನಿಖೆಯಲ್ಲಿ ಭ್ರಷ್ಟಾಚಾರ ಸಾಬೀತಾದ್ರೆ ಸಂಸದರು, ಶಾಸಕರು ಜೈಲಿಗೆ ಹೋಗಲು ಸಿದ್ದರಾಗಿ ಎಂದು ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್.ಕೆ.ಶೆಟ್ಟಿ ಎಚ್ಚರಿಸಿದ್ದಾರೆ. ಜಿಲ್ಲೆಯ ಪ್ರತಿಯೊಂದು ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರುಗಳು ಬಂದಿದ್ದು, ಜಿಲ್ಲಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಈಗಾಗಲೇ ತನಿಖೆಗೆ ಸೂಚಿಸಿದ್ದಾರೆ. ಈ ತನಿಖೆ ವರದಿ ಬಂದ ತಕ್ಷಣ ಭ್ರಷ್ಟಾಚಾರದಲ್ಲಿ ಭಾಗಿಗಳಾದ ಬಿಜೆಪಿ ಸಂಸದರು, ಶಾಸಕರನ್ನು ಜೈಲಿಗೆ ಕಳುಹಿಸಲಾಗುವುದು ಎಂದರು. 

Tap to resize

Latest Videos

ಕಾಂಗ್ರೆಸ್ ಪಕ್ಷ ಎಂದಿಗೂ ಅರಿವೆ ಹಾವು ಬಿಡೋದಿಲ್ಲ. ಜಿಲ್ಲೆಯಲ್ಲಿ ಭ್ರಷ್ಟಾಚಾರ ನಡೆದಿರುವುದನ್ನು ಬಿಜೆಪಿ ಮುಚ್ಚಿ ಹಾಕಲು ತಂತ್ರಗಳನ್ನು ಮಾಡುತ್ತಿದ್ದು, ತಂತ್ರಗಳಿಗೆ ಮಣೆ ಹಾಕುವುದಿಲ್ಲ ಭ್ರಷ್ಟರಿಗೆ ತಕ್ಕ ಶಿಕ್ಷೆ ಆಗಲಿದೆ ಎಂದರು. ಭ್ರಷ್ಟಾಚಾರ ನಡೆಸುವವರ ಕೈಗೊಂಬೆ ಆಗಿರುವ ಹಾಲಿ ಶಾಸಕ ಬಿಪಿ ಹರೀಶ್ ಈ ಹಿಂದೆ  ಹರಿಹರದಲ್ಲಿ ನಮ್ಮ ಶಾಸಕರಿದ್ದರು ಅಭಿವೃದ್ಧಿಗೆ ತಡೆ ಹಾಕಿದ್ದರು .ಜೊತೆಗೆ ಕೆಲವು ಭ್ರಷ್ಟ ಅಧಿಕಾರಿಗಳೊಂದಿಗೆ ಸೇರಿ ಭ್ರಷ್ಟಾಚಾರ ನಡೆಸಿರುವ ಬಗ್ಗೆಯೂ ನಮ್ಮ ಗಮನಕ್ಕೆ ಇದ್ದು, ಇದರ ಬಗ್ಗೆಯೂ ಸ್ವಯಂ ತನಿಖೆಗೆ ಬಿಪಿ  ಹರೀಶ್ ಮುಂದಾಗಲಿ ಎಂದು ಪ್ರಧಾನ ಕಾರ್ಯದರ್ಶಿ ದಿನೇಶ್ ಶೆಟ್ಟಿ ಸವಾಲ್ ಹಾಕಿದ್ದಾರೆ. 

ರೈತ​ರು ಸಾಲಮನ್ನಾ ಮನೋ​ಭಾ​ವನೆ ಬಿಡ​ಬೇಕು: ಶಾಸಕ ಇಕ್ಬಾಲ್‌ ಹುಸೇನ್‌

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಮಹಾಂತೇಶ್ ಬೀಳಗಿ  ಈ ಹಿಂದೆ ಇಲ್ಲಿನ ಜಿಲ್ಲಾಧಿಕಾರಿಗಳಾಗಿದ್ದಾಗ ಬಿಜೆಪಿಯವರಿಗೆ ಒಳ್ಳೆಯವರಾಗಿದ್ದರು. ಅವರು ಕಳೆದ ಗೃಹ ಜ್ಯೋತಿ ಕಾರ್ಯಕ್ರಮದಲ್ಲಿ ಮಾತನಾಡಿದ್ದನ್ನು ಕೇಳಿ ಅವರನ್ನು ತೆಜೋವಧೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಭ್ರಷ್ಟಾಚಾರಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ  ಭ್ರಷ್ಟರು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ಕಾರ್ಯಕ್ರಮದಲ್ಲಿ  ಹರಿಹರ ಶಾಸಕ ಬಿಪಿ  ಹರೀಶ್ ಅವರ ಮಾತಿಗೆ ಕಾಂಗ್ರೆಸ್ ನ ಎಲ್ಲರೂ ಬೇಸರ ವ್ಯಕ್ತಪಡಿಸಿದರು . ಕೆಲವು ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

 ಇದು ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ. ಪ್ರಜಾಪ್ರಭುತ್ವ,ಸಂವಿಧಾನದ ಬಗ್ಗೆ ಬಿಜೆಪಿಗರಿಗೆ ಗೌರವ ಇದ್ದರೆ ಅದನ್ನು ಸ್ಪರ್ಧಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದರು. ಆದರೆ ಸಂವಿಧಾನ ವಿರೋಧ ನಡೆಯ ಬಿಜೆಪಿಗರು ಹಿಟ್ಲರ್ ಸಂಸ್ಕೃತಿಯನ್ನು ಹೊಂದಿರುವುದರಿಂದ ಸಾರ್ವಜನಿಕರ ಆಕ್ಷೇಪವನ್ನು ಸ್ವೀಕರಿಸದೇ ಆರೋಪ ಮಾಡುತ್ತಿದ್ದಾರೆ. ಹರೀಶ್ ಅವರಿಗೆ ನಮ್ಮ ಸರ್ಕಾರ ನೀಡಿರುವ ಉಚಿತ ಭಾಗ್ಯದ ಬಗ್ಗೆ ಒಲವು ಇಲ್ಲದಿದ್ದರೆ ತಮ್ಮ ಕಾರ್ಯಕರ್ತರಿಗೆ ಉಚಿತ ಭಾಗ್ಯಗಳನ್ನು ತೆಗೆದುಕೊಳ್ಳದಂತೆ ಕರೆ ನೀಡಲಿ ಎಂದರು.  ಈ ಹಿಂದೆ ಬಿಜೆಪಿ ಸರ್ಕಾರದ ಕಾರ್ಯಕ್ರಮಗಳಲ್ಲಿ ಬಿಜೆಪಿ ಅಧ್ಯಕ್ಷರುಗಳು ವೇದಿಕೆ ಹಂಚಿಕೊಳ್ಳುತ್ತಿದ್ದರು . ಆಗ ಅವರು ಆಡಿದ್ದೆ ಆಟ ಎಂಬಂತೆ ಅಧಿಕಾರಿಗಳ ಮೇಲೆ ದರ್ಪ ತೋರಿಸುತ್ತಿದ್ದ ಬಿಜೆಪಿಗರು ಉತ್ತಮ ಅಧಿಕಾರಿಗಳನ್ನು ಭ್ರಷ್ಟರನ್ನಾಗಿ ಮಾಡಿದ್ದಾರೆ.

ದೇಶದಲ್ಲಿ 2050ಕ್ಕೆ ಆಹಾರ ಧಾನ್ಯಗಳ ಕೊರತೆ ಸಂಭವ: ನಿರ್ಮಲಾನಂದನಾಥ ಸ್ವಾಮೀಜಿ

ಮರಳುಗಾರಿಕೆ, ಇಟ್ಟಿಗೆ ಉದ್ಯಮ ಇಲ್ಲದಿದ್ದರೆ ಅಭಿವೃದ್ಧಿ ಅಸಾಧ್ಯ ಎನ್ನುವ ಹರೀಶ್ ಅವರು ಅದಕ್ಕೆ ತಡೆ ನೀಡಿದ್ದ ಎಸ್ಪಿಯವರನ್ನು ಸರ್ಕಾರ ವರ್ಗಾವಣೆ ಮಾಡಿರುವುದಕ್ಕೆ ಆಕ್ಷೇಪ ಎತ್ತಿರುವುದನ್ನು ನೋಡಿದರೆ ಅವರ ತೀರ್ಮಾನ ಡಬಲ್ ಸ್ಯಾಂಡ್ ಆಗಿದ್ದು , ಬಿಜೆಪಿಗರು ಅಧಿಕಾರಿಗಳನ್ನು ಹೆದರಿಸಿ ಬೆದರಿಸಿ ಸರ್ಕಾರದ ಆಸ್ತಿಗಳನ್ನು ಕಬಳಿಕೆ ಮಾಡಿಕೊಂಡಿದ್ದು , ಬಿಜೆಪಿ ಜಿಲ್ಲಾ ಯುವ ಅಧ್ಯಕ್ಷರು ತಮ್ಮ ಕುಟುಂಬ ಸದಸ್ಯರ ಹೆಸರಿಲ್ಲ ಉದ್ಯಾನವನವನ್ನು ನೋಂದಣಿ ಮಾಡಿಸಿದ್ದಾರೆ ಎಂದು ದೂರಿದ್ದರು. ಸುದ್ದಿಗೋಷ್ಠಿಯಲ್ಲಿ, ಕಾಂಗ್ರೆಸ್ ಮುಖಂಡರಾದ ಕೆ.ಜಿ. ಶಿವಕುಮಾರ್,ಅಯೂಬ್ ಪೈಲ್ವಾನ್, ಅನಿತಾ ಬಾಯಿ ಮಹಾಂತೇಶ್, ಕೊಡಪಾನ ರಾಜು, ಹರೀಶ್ ಬಸಾಪುರ, ರಾಜೇಶ್ವರಿ, ಶುಭಮಂಗಳ ಇತರರು ಹಾಜರಿದ್ದರು.

click me!