ಟಿಕೆಟ್‌ ಗೊಂದಲ: ಕಾಂಗ್ರೆಸ್‌ ಕೋಲಾರ ಸಮಾವೇಶ ಮುಂದಕ್ಕೆ

By Kannadaprabha News  |  First Published Mar 29, 2024, 6:57 AM IST

ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳು ನಿವಾರಣೆಯಾದ ನಂತರ ಪ್ರಜಾಧ್ವನಿ ಸಮಾವೇಶ ಆಯೋಜಿಸುವ ಕುರಿತು ನಿರ್ಧರಿಸಿದ ಕಾಂಗ್ರೆಸ್‌ ನಾಯಕರು 


ಬೆಂಗಳೂರು(ಮಾ.29):  ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಗೊಂದಲ ನಿವಾರಣೆಯಾಗದ ಹಿನ್ನೆಲೆಯಲ್ಲಿ ಕೋಲಾರದಿಂದಲೇ ಶುಕ್ರವಾರ ಚಾಲನೆ ದೊರೆಯಬೇಕಿದ್ದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶ ಮುಂದೂಡಲಾಗಿದೆ. 

ದಿನದಿಂದ ದಿನಕ್ಕೆ ಕೋಲಾರ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಜಟಿಲಗೊಳ್ಳುತ್ತಿದ್ದು, ಅದರ ನಿವಾರಣೆಗೆ ಕಾಂಗ್ರೆಸ್‌ ನಾಯಕರು ಹರಸಾಹಸಪಡುವಂತಾಗಿದೆ. ಸಚಿವ ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ಅವರಿಗೆ ಟಿಕೆಟ್‌ ನೀಡುವುದನ್ನು ವಿರೋಧಿಸಿ ಶಾಸಕರು ರಾಜೀನಾಮೆಗೂ ಮುಂದಾಗಿದ್ದರು. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್‌ ಅಸಮಧಾನಿತ ಶಾಸಕರೊಂದಿಗೆ ಸಭೆ ನಡೆಸಿದರೂ ಅಸಮಧಾನ ತಣಿದಿಲ್ಲ. ಹೀಗಾಗಿ ಕೋಲಾರದಲ್ಲಿ ಶುಕ್ರವಾರ ನಡೆಯಬೇಕಿದ್ದ ಕಾಂಗ್ರೆಸ್‌ ಪ್ರಜಾಧ್ವನಿ ಸಮಾವೇಶಗಳನ್ನು ಮುಂದೂಡಲಾಗಿದೆ. 

Latest Videos

undefined

Lok Sabha Election 2024: ಕಾಂಗ್ರೆಸ್‌ ಕೋಲಾರ ಸರ್ಕಸ್‌: ಮನವೊಲಿಕೆಗೆ ಸಿಎಂ, ಡಿಸಿಎಂ ಹರಸಾಹಸ

ಕೋಲಾರ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಇರುವ ಗೊಂದಲಗಳು ನಿವಾರಣೆಯಾದ ನಂತರ ಪ್ರಜಾಧ್ವನಿ ಸಮಾವೇಶ ಆಯೋಜಿಸುವ ಕುರಿತು ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

click me!