
ಹೈದರಾಬಾದ್ (ಏ.29): ಕಾಂಗ್ರೆಸ್ ಹಿಂದೂಗಳನ್ನು ಕಡೆಗಣಿಸಿ ಮುಸ್ಲಿಮರನ್ನು ಓಲೈಸುವ ರಾಜಕಾರಣ ಮಾಡುತ್ತಿದೆ ಎಂಬ ಪ್ರಧಾನಿ ನರೇಂದ್ರ ಮೋದಿಯಾಗಿ ಬಿಜೆಪಿಯ ನಾಯಕರು ಆರೋಪ ಮಾಡುತ್ತಿರುವ ಹೊತ್ತಿನಲ್ಲೇ, ಕಾಂಗ್ರೆಸ್ ಗೆಲುವಿಗೆ ಹಿಂದೂಗಳ ಮತ ಬೇಡ. ಕಾಂಗ್ರೆಸ್ ಎಂದರೆ ಮುಸ್ಲಿಂ ಸೋದರರ ಪಕ್ಷ ಎಂದು ತೆಲಂಗಾಣದ ಕಾಂಗ್ರೆಸ್ ನಾಯಕರೊಬ್ಬರು ಹೇಳಿದ್ದಾರೆ.
ಆರ್‌ಎಸ್‌ಎಸ್- ಕಾಂಗ್ರೆಸ್ ಮೀಸಲು ಸಮರ, ಆರೆಸ್ಸೆಸ್ ಈ ಹಿಂದೆ ವಿರೋಧಿಸಿತ್ತು ಎಂದ ರಾಹುಲ್
ಇಲ್ಲಿ ಪಕ್ಷದ ಪರ ಚುನಾವಣಾ ಪ್ರಚಾರ ಭಾಷಣ ಮಾಡಿದ ತೆಲಂಗಾಣ ಕಾಂಗ್ರೆಸ್ ಸರ್ಕಾರದಲ್ಲಿನ ಕೃಷಿ ಸಚಿವ ತುಮ್ಮಲ ನಾಗೇಶ್ವರ ರಾವ್, ‘ಕಾಂಗ್ರೆಸ್‌ನ ಅರ್ಥವೇ ಮುಸ್ಲಿಂ ಸೋದರರ ಪಕ್ಷ ಎಂದು; ಇದು ಮುಸ್ಲಿಮರ ಪಕ್ಷ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀವು ಮತಹಾಕದೇ ಇದ್ದಲ್ಲಿ ನಾವು ತೆಲಂಗಾಣ ಮತ್ತು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ. ಇದೆಲ್ಲವೂ ಅಲ್ಲಾನ ಕೃಪೆ. ಕಾಂಗ್ರೆಸ್ ಗೆಲ್ಲಲು ಹಿಂದೂಗಳ ಮತ ಬೇಕಾಗಿಲ್ಲ ಎಂದು ಹೇಳಿದ್ದಾರೆ. ನಾಗೇಶ್ವರ ರಾವ್ ಹೇಳಿಕೆಯನ್ನು ಹಲವು ಬಿಜೆಪಿ ನಾಯಕರು ಕಟುವಾಗಿ ಟೀಕಿಸಿದ್ದು, ಕಾಂಗ್ರೆಸ್‌ನ ನಿಜ ಬಣ್ಣ ಬದಲಾಗಿದೆ ಎಂದು ಹೇಳಿದ್ದಾರೆ.
ಆಂದ್ರದಲ್ಲಿ ಎನ್‌ಡಿಎ ಗೆದ್ದರೆ ಹಜ್ ಯಾತ್ರಿಕರಿಗೆ ತಲಾ 1 ಲಕ್ಷ: ನಾಯ್ಡು
ನಲ್ಲೂರು: ಆಂಧ್ರಪ್ರದೇಶದಲ್ಲಿ ಎನ್‌ಡಿಎ ಬಹುಮತದಿಂದ ಅಧಿಕಾರಕ್ಕೆ ಬಂದಲ್ಲಿ ಹಜ್ ಯಾತ್ರೆಗೆ ತೆರಳುವ ಯಾತ್ರಿಕರಿಗೆ ತಲಾ 1 ಲಕ್ಷ ರು.ಗಳ ಸರ್ಕಾರಿ ಸಹಾಯಧನ ನೀಡಲಾಗುವುದು ಎಂದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಘೋಷಿಸಿದ್ಧಾರೆ.
ಪಟಿಯಾಲಾದಲ್ಲಿ ಬಿಜೆಪಿಯಿಂದ ಅಮರೀಂದರ್ ಪತ್ನಿ vs ಕಾಂಗ್ರೆಸ್ vs ಆಪ್ ಬಿಗ್ ಫೈಟ್
ನಗರದಲ್ಲಿ ಮುಸ್ಲಿಂ ಸಮುದಾಯದೊಂದಿಗೆ ಸಂವಾದ ನಡೆಸುತ್ತಾ, ‘ಟಿಡಿಪಿ ಅಧಿಕಾರದಲ್ಲಿದ್ದಾಗ ಮುಸ್ಲಿಮರ ಹಬ್ಬವೊಂದಕ್ಕೆ ನಾಡಹಬ್ಬದ ಸ್ಥಾನಮಾನ ನೀಡಲಾಗಿದೆ. ಜೊತೆಗೆ ನಿಯತ್ತು, ಧೈರ್ಯ ಹಾಗೂ ನಂಬಿಕೆಗೆ ಹೆಸರಾಗಿರುವ ಮುಸ್ಲಿಂ ಸಮುದಾಯಕ್ಕೆ ಎಂದಿಗೂ ಅನ್ಯಾಯವಾಗಲು ಟಿಡಿಪಿ ಬಿಟ್ಟಿಲ್ಲ. ಹಾಗೆಯೇ ಈ ಬಾರಿಯೂ ರಾಜ್ಯದಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದರೆ ಹಜ್ ಯಾತ್ರೆಗೆ ತಲಾ 1 ಲಕ್ಷ ರು. ಸಹಾಯಧನ ನೀಡಲಾಗುವುದು. ಆದರೆ ಹಾಲಿ ಅಧಿಕಾರದಲ್ಲಿರುವ ಜಗನ್ ನೇತೃತ್ವದ ವೈಎಸ್‌ಆರ್ ಪಕ್ಷ ಮುಸ್ಲಿಮರನ್ನು ನಿರ್ಲಕ್ಷಿಸಿರುವುದಕ್ಕೆ ಕಳೆದ ಐದು ವರ್ಷಗಳಲ್ಲಿ ಒಂದೂ ಮಸೀದಿಯನ್ನು ಕಟ್ಟದಿರುವುದೇ ನಿದರ್ಶನ’ ಎಂದು ಆರೋಪಿಸಿದ್ದಾರೆ.
ಆಂಧಪ್ರದೇಶದಲ್ಲಿ ಮೇ.13ರಂದು ವಿಧಾನಸಭೆ ಹಾಗೂ ಲೋಕಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಯಲಿದ್ದು, ನಾಯ್ಡು ನೇತೃತ್ವದ ಟಿಡಿಪಿ ಹಾಗೂ ನಟ ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧೆಗಿಳಿದಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.