ಚಿಕ್ಕಮಗಳೂರು: ಸಚಿವ ಅಶ್ವಥ್ ನಾರಾಯಣರನ್ನ ಬಂಧಿಸಿ, ಕಾನೂನು ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಆಗ್ರಹ

By Girish Goudar  |  First Published Feb 17, 2023, 1:43 PM IST

ತರೀಕೆರೆ ಕಾಂಗ್ರೆಸ್ ಪಕ್ಷದ ಸೇವಾ ದಳದ ಅಧ್ಯಕ್ಷ ಟಿ.ಎನ್. ಜಗದೀಶ್ ನೇತೃತ್ವದಲ್ಲಿ ಕಾರ್ಯಕರ್ತರು ತರೀಕೆರೆ ತಾಲೂಕಿನ ಪೊಲೀಸ್ ನಿರೀಕ್ಷಕರಾದ ರವೀಂದ್ರ ಅವರಿಗೆ ದೂರು ನೀಡಿದ್ದಾರೆ. 


ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಫೆ.17): ಮಂಡ್ಯ ಜಿಲ್ಲೆಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಒಡೆದು ಹಾಕಬೇಕು ಎಂದು ಹೇಳಿರುವ ಉನ್ನತ ಶಿಕ್ಷಣ ಸಚಿವ ಅಶ್ವತ್ ನಾರಾಯಣ ರವರನ್ನು ಬಂಧಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕೆಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸಿದ್ದಾರೆ.  ತರೀಕೆರೆ ಕಾಂಗ್ರೆಸ್ ಪಕ್ಷದ ಸೇವಾ ದಳದ ಅಧ್ಯಕ್ಷ ಟಿ.ಎನ್. ಜಗದೀಶ್ ನೇತೃತ್ವದಲ್ಲಿ ಕಾರ್ಯಕರ್ತರು ತರೀಕೆರೆ ತಾಲೂಕಿನ ಪೊಲೀಸ್ ನಿರೀಕ್ಷಕರಾದ ರವೀಂದ್ರ ಅವರಿಗೆ ದೂರು ನೀಡಿದ್ದಾರೆ. 

Latest Videos

undefined

ಬಳಿಕ ಮಾತನಾಡಿದ ಟಿ.ಎನ್. ಜಗದೀಶ್ ಅವರು, ಸ್ವಾತಂತ್ರ ಹೋರಾಟಗಾರ ಹಾಗೂ ಮೈಸೂರಿನ ಹುಲಿ ಎಂದೇ ಪ್ರಖ್ಯಾತರಾಗಿರುವ ಟಿಪ್ಪು ಸುಲ್ತಾನ್‍ರವರನ್ನು ಹೊಡೆದು ಹಾಕಿದ ರೀತಿಯೇ ಸಿದ್ದರಾಮಯ್ಯರವರನ್ನು ಹೊಡೆದು ಹಾಕಬೇಕು ಎಂದು ಪ್ರಚೋದನಕಾರಿ ಮತ್ತು ಕೊಲೆ ಬೆದರಿಕೆ ಹೇಳಿಕೆ ನೀಡಿರುವ, ಸಚಿವ ಅಶ್ವಥ್ ನಾರಾಯಣರವರ ಮೇಲೆ ಕಾನೂನು ರೀತಿ ಕ್ರಮ ಜರುಗಿಸಬೇಕು. ಅವರನ್ನ ಬಂಧಿಸಿ ಸೂಕ್ತ ಶಿಕ್ಷೆಗೆ ಗುರಿಪಡಿಸಬೇಕೆಂದು ಆಗ್ರಹಿಸಿದ್ದಾರೆ.

KARNATAKA BUDGET 2023 ಚಿಕ್ಕಮಗಳೂರಿನಲ್ಲಿ ಹೊಸ ವಿವಿ, ತುಮಕೂರಿನಲ್ಲಿ ಹೊಸ ಪಾಲಿಟೆಕ್ನಿಕ್‌ ಕಾಲೇಜು!

ಈ ಸಂದರ್ಭದಲ್ಲಿ ಕಸಬಾ ಹೋಬಳಿ ಕಾಂಗ್ರೆಸ್ ಅಧ್ಯಕ್ಷರಾದ ವೀರಮಣಿ, ಮಾಜಿ ಪುರಸಭಾ ಸದಸ್ಯರಾದ ಜಯಕುಮಾರ್, ಕಾಂಗ್ರೆಸ್ ಸೇವಾದಳದ ಉಪಾಧ್ಯಕ್ಷರಾದ ದೇವರಾಜ್, ಎನ್.ಎಸ್.ವೈ ಕಾರ್ಯದರ್ಶಿ ರವಿ, ಮಂಜು, ಬರಗೇನಹಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ದಿನೇಶ್, ಮುಂತಾದವರು ಉಪಸ್ಥಿತರಿದ್ದರು.

click me!