ಕೇಸ್ ಬೈ ಕೇಸ್ ಮಾಹಿತಿ ಪಡೆದು ಬಿಜೆಪಿ ವಿರುದ್ಧ ತನಿಖೆಗೆ ಸರ್ಕಾರ ನಿರ್ಧಾರ: ಕೃಷ್ಣ ಬೈರೇಗೌಡ

By Gowthami KFirst Published Jun 27, 2023, 12:11 PM IST
Highlights

ಬಿಜೆಪಿ ಅಕ್ರಮಗಳಿಗೆ ಎಸ್.ಐ.ಟಿ ತನಿಖೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು  ಕೇಸ್ ಬೈ ಕೇಸ್ ಮಾಹಿತಿ ಪಡೆದು ತನಿಖೆ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ ಎಂದಿದ್ದಾರೆ.

ಬೆಂಗಳೂರು (ಜೂ.27): ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಈ ಹಿಂದಿನ ಬಿಜೆಪಿ ಸರಕಾರದ ವಿರುದ್ಧ ಕಿಡಿಕಾರಿದ್ದಾರೆ. ಅಕ್ಕಿ ವಿಚಾರಕ್ಕೆ  ಬಿಜೆಪಿ ಅಭಿಯಾನ ವಿಚಾರವಾಗಿ ಮಾತನಾಡಿದ ಅವರು ಅಧಿಕಾರ ಇದ್ದಾಗ ಒಂದೇ ಒಂದು ಬಡವರಿಗೆ ಬಿಜೆಪಿ ಸಹಾಯ ಮಾಡಲಿಲ್ಲ. ಬಡವರ ಯೋಜನೆಗಳನ್ನ ಕಿತ್ತುಕೊಂಡವರು ಬಿಜೆಪಿಯವರು, ತಿಗಣೆಯಂತೆ ಬಡವರ ರಕ್ತ ಹೀರಿದವರು ಬಿಜೆಪಿಯವರು, 40% ಕಮಿಷನ್ ಹೊಡೆದವರು ಬಿಜೆಪಿಯವರು, ಈಗ ನಾವು ಬಡವರಿಗೆ ಸಹಾಯ ಮಾಡುವುದಕ್ಕೆ ಹೊರಟಾಗ ಅಡ್ಡಿಪಡಿಸ್ತಿದ್ದಾರೆ ಎಂದಿದ್ದಾರೆ.

ಬಿಜೆಪಿ ಅಕ್ರಮಗಳಿಗೆ ಎಸ್.ಐ.ಟಿ ತನಿಖೆ ವಿಚಾರಕ್ಕೆ ಸಂಬಂಧಿಸಿಂತೆ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು ನಿರ್ದಿಷ್ಟ ಪ್ರಕರಣಗಳಲ್ಲಿ ತನಿಖೆ ಮಾಡಿಯೇ ಮಾಡ್ತೀವಿ. ಕೇಸ್ ಬೈ ಕೇಸ್ ಮಾಹಿತಿ ಪಡೆದು ತನಿಖೆ ಮಾಡುವುದಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ಸಿಎಂ ಡಿಸಿಎಂ ಕೂಡ ಕ್ಯಾಬಿನೇಟ್ ಮೀಟಿಂಗ್ ನಲ್ಲಿ ಭರವಸೆ ನೀಡಿದ್ದಾರೆ. ಸಾರಾಸಗಟಾಗಿ ಎಲ್ಲ ಪ್ರಕರಣಗಳನ್ನೂ ಕೂಡ ತನಿಖೆಗೆ ಒಳಪಡಿಸ್ತೀವಿ ಅಂತಲ್ಲ. ನಿರ್ದಿಷ್ಟ ಪ್ರಕರಣಗಳಲ್ಲಿ ಎಲ್ಲಿ ಲೋಪದೋಷಗಳಾಗಿವೆ ಅವನ್ನು ತನಿಖೆಗೆ ಒಳಪಡಿಸ್ತೀವಿ. ಯಾವ ಇಲಾಖೆಯಲ್ಲಿ ಅಕ್ರಮವಾಗಿದೆ ಅಂತ ನಿರ್ದಿಷ್ಟ ಪ್ರಕರಣಗಳ ಮಾಹಿತಿ ಪಡೆಯುತ್ತೇವೆ ಎಂದಿದ್ದಾರೆ.

ಬಿಜೆಪಿ ಕಾಲದ ಬಿಟ್‌ಕಾಯಿನ್‌ ಹಗರಣ ಮತ್ತೆ ಸಿಐಡಿ ತನಿಖೆಗೆ?

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ , ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಮತ್ತು ಬಿಟ್‌ಕಾಯಿನ್ ಮನಿ ಲಾಂಡರಿಂಗ್ ಸೇರಿದಂತೆ ಹಿಂದಿನ ಬಿಜೆಪಿ ಸರ್ಕಾರದ ವಿವಿಧ ಹಗರಣಗಳ ತನಿಖೆಗೆ ವಿಶೇಷ ತನಿಖಾ ತಂಡಗಳು (ಎಸ್‌ಐಟಿ) ಮತ್ತು ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ರಚನೆಗೆ ಬುಧವಾರ ರಾಜ್ಯ ಸಚಿವ ಸಂಪುಟವು ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.  

ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ಕಾಂಗ್ರೆಸ್ ನೀಡಿದ ಭರವಸೆಗಳಲ್ಲಿ ಇದೂ ಒಂದು. ಆರ್‌ಡಿಪಿಆರ್ ಮತ್ತು ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಂದಾಯ ಸಚಿವ ಕೃಷ್ಣ ಬೈರೇಗೌಡ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಮತ್ತು ಉನ್ನತ ಶಿಕ್ಷಣ ಸಚಿವ ಡಾ ಎಂಸಿ ಸುಧಾಕರ್ ತನಿಖೆಯ ಪರವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುಲೈನಲ್ಲಿ ನೂತನ ಬಜೆಟ್ ಮಂಡನೆ, 3.35 ಲಕ್ಷ ಕೋಟಿ ರೂ ಗಾತ್ರ; ಸಿದ್ದರಾಮಯ್ಯ!

ಬಿಜೆಪಿ ಸರಕಾರ ಅಧಿಕಾರದಲ್ಲಿದ್ದಾಗ ಶೇ.40ರಷ್ಟು ಕಮಿಷನ್ ನೀಡಿ ಯೋಜನೆಗಳನ್ನು ಪಡೆಯಲು ಮುಂದಾಗಿದೆ ಎಂದು ಆರೋಪಿಸಿರುವ ಗುತ್ತಿಗೆದಾರರ ಸಂಘದ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಸಾಕ್ಷ್ಯಾಧಾರಗಳನ್ನು ನೀಡುವುದಾಗಿ ಹೇಳಿದ್ದರು.  ಆಯೋಗದ ಹಗರಣದ ತನಿಖೆಗೆ ಆದೇಶಿಸುವ ಕುರಿತು ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮೂಲಗಳು ತಿಳಿಸಿವೆ.

click me!