ಆರ್‌ಆರ್‌ ನಗರ, ಶಿರಾ ಬೈ ಎಲೆಕ್ಷನ್ ಮುಗಿಯುತ್ತಿದ್ದಂತೆಯೇ ಮತ್ತೆರೆಡು ಉಪಚುನಾವಣೆಗೆ ಸಿದ್ಧತೆ

By Suvarna NewsFirst Published Nov 10, 2020, 9:01 AM IST
Highlights

ಆರ್.ಆರ್.ನಗರಹಾಗೂ ಶಿರಾ ಉಪಚುನಾವಣೆ ಮುಗಿಯುತ್ತಿದ್ದಂತೆಯೇ ಕರ್ನಾಟಕದಲ್ಲಿ ಮತ್ತೆರೆಡು ಮತ್ತೆ ಬೈ ಎಲೆಕ್ಷನ್‌ ಎದುರಾಗಿದೆ. ಇದಕ್ಕೆ ಮೂರು ಪಕ್ಷಗಳು ಸಿದ್ಧತೆ ನಡೆಸಿವೆ.
 

ಬೆಂಗಳೂರು, (ನ.10): ರಾಜರಾಜೇಶ್ವರಿ ಮತ್ತು ಶಿರಾ ಉಪಚುನಾವಣೆಗಳು ಮುಗಿದ ಬೆನ್ನಲ್ಲೇ ಮತ್ತೆರಡು ಉಪ ಚುನಾವಣೆಗಾಗಿ ಸಿದ್ಧತೆ ನಡೆಯುತ್ತಿದೆ. ರಾಯಚೂರಿನ ಮಸ್ಕಿ ಮತ್ತು ಬೀದರ್ ನ ಬಸವಕಲ್ಯಾಣ ಉಪ ಚುನಾವಣೆಗೆ ಶೀಘ್ರವೇ ದಿನಾಂಕ ಪ್ರಕಟಗೊಳ್ಳುವ ಸಾಧ್ಯತೆಯಿದೆ.

ಇದಕ್ಕಾಗಿ ಕಾಂಗ್ರೆಸ್ ಭರ್ಜರಿ ಸಿದ್ಧತೆ ಮಾಡಿಕೊಳ್ಳುತ್ತಿದೆ. ಅದರಲ್ಲೂ ಮಸ್ಕಿ ಭಾರೀ ಜಿದ್ದಾಜಿದ್ದಿಯಿಂದ ಕೂಡಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಪ್ರತಾಪ್ ಗೌಡ ಅವರಗೆ ಟಿಕೆಟ್ ಖಚಿತವಾಗಿದೆ. ಇನ್ನು ರಿವರ್ಸ್ ಆಪರೇಷನ್ ಮಾಡಿರುವ ಕಾಂಗ್ರೆಸ್,   2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 213 ಮತಗಳಿಂದ ಸೋಲುಕಂಡಿದ್ದ ಬಿಜೆಪಿಯ ಬಸನಗೌಡ ತುರ್ವಿಹಾಳ್ ಅವರನ್ನ ಸೆಳೆಯುವಲ್ಲಿ ಯಶಸ್ವಿಯಾಗಿದೆ.  

ಯಡಿಯೂಪರಪ್ಪ ಮಾತಿಗೂ ಡೋಂಟ್ ಕೇರ್: ಕಾಂಗ್ರೆಸ್ ಸೇರಿದ ಬಿಜೆಪಿ ನಾಯಕ

ಇನ್ನು  ಇತ್ತೀಚೆಗೆ ನಿಧನರಾದ ಬಸವ ಕಲ್ಯಾಣದ ಕಾಂಗ್ರೆಸ್ ಶಾಸಕ ನಾರಾಯಣ ರಾವ್ ಪುತ್ರ ಗೌತಮ್ ಅಥವಾ ಪತ್ನಿ ಮಾಲಾ ಅವರಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ, ಆದರೆ ಇನ್ನೂ ಫೈನಲ್ ಆಗಿಲ್ಲ.

ಇಂದು (ಮಂಗಳವಾರ) ಆರ್.ಆರ್.ನಗರ ಹಾಗೂ ಶಿರಾ ಉಪಚುನಾವಣೆಯ ಮತದಾನ ಎಣಕೆ ಕಾರ್ಯ ನಡೆಯುತ್ತಿದ್ದು, ಬಿಜೆಪಿ ಎರಡೂ ಕ್ಷೇತ್ರದಲ್ಲೂ ಆರಂಭಿಕ ಮುನ್ನಡೆ ಸಾಧಿಸಿದೆ.

ನವೆಂಬರ್ ಕೊನೆ ವಾರ ಇಲ್ಲ ಡಿಸೆಂಬರ್ ಮೊದಲ ವಾರದಲ್ಲಿ ಮಸ್ಕಿ, ಬಸವಕಲ್ಯಾಣ ವಿಧಾಸಭಾ ಹಾಗೂ ಸುರೇಶ್ ಅಂಗಡಿ ಅವರ ನಿಧನದಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೂ ಉಪಚುನಾವಣೆ ದಿನಾಂಕ ಘೋಷಣೆಯಾಗುವ ಸಾಧ್ಯತೆಗಳಿವೆ.

click me!