ಲೋಕಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್‌, ವಿಪಕ್ಷಗಳಿಂದ ಬಿಜೆಪಿಗೆ ನಾಯಕರ ಗುಳೆ..!

By Kannadaprabha NewsFirst Published Mar 29, 2024, 10:06 AM IST
Highlights

ಕಟಕ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಡಿಯಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಂಸದ ಭ್ರಾತೃಹರಿ ಮಹಲ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಬಿಜು ಜನತಾ ದಳ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.

ಚಂಡೀಗಢ/ನವದೆಹಲಿ(ಮಾ.29):  ಲೋಕಸಭೆ ಚುನಾವಣೆಗೂ ಮುನ್ನ ದೇಶದ ಶ್ರೀಮಂತ ಮಹಿಳೆ, ಹರಿಯಾಣದ ಹಿಸಾರ್ ಕ್ಷೇತ್ರದ ಜಿಂದಾಲ್ ಅವರ ಪತ್ನಿ ಸಾವಿತ್ರಿ ಜಿಂದಾಲ್ ಗುರುವಾರ ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.  ಇತ್ತೀಚೆಗಷ್ಟೇ ತಮ್ಮ ಮಗ ನವೀನ್ ಜಿಂದಾಲ್ ಜಿಜೆಪಿಗೆ ಸೇರ್ಪಡೆಗೊಂಡಿದ್ದರು. ಅದರ ಬೆನ್ನಲ್ಲೇ ಹರ್ಯಾಣ ಮುಖ್ಯ ಮಂತ್ರಿ ನಯಬ್ ಸಿಂಗ್ ಸೈನಿ, ಮಾಜಿ ಸಿಎಂ ಮನೋಹರ್‌ಲಾಲ್ ಖಟ್ಟ‌ರ್ ಮತ್ತು ಇತರ ಬಿಜೆಪಿ ನಾಯಕರ ಸಮ್ಮು ಖದಲ್ಲಿ ಅವರು ಬಿಜೆಪಿ ಸೇರಿದರು.

ಸಾವಿತ್ರಿ ಬುಧವಾರ ರಾತ್ರಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪೋಸ್ಟ್ ಮಾಡಿದ್ದರು. ಸಾವಿತ್ರಿ ಜಿಂದಾಲ್ ಅವರು ಇಂಡಿಯಾದ ಅತ್ಯಂತ ಶ್ರೀಮಂತ ಮಹಿಳೆಯೆಂದು ಪೋರ್ಟ್ ಇಂಡಿಯಾ ಸಂಸ್ಥೆ ಪ್ರಕಟಿಸಿತ್ತು.

ಬಿಜೆಪಿ-ಜೆಡಿಎಸ್‌ ಮೈತ್ರಿಯಿಂದ ಕಾಂಗ್ರೆಸ್‌ಗೆ ನಿದ್ದೆ ಬರ್ತಿಲ್ಲ: ವಿಜಯೇಂದ್ರ

ಬಿಜೆಪಿಯ ಭ್ರಾತೃಹರಿ ಮತ್ತಚ್ ಬಿಜೆಪಿ ಸೇರ್ಪಡೆ: 

ಕಟಕ್ ಲೋಕಸಭಾ ಕ್ಷೇತ್ರದಲ್ಲಿ ಬಿಜೆಡಿಯಿಂದ ಆರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಸಂಸದ ಭ್ರಾತೃಹರಿ ಮಹಲ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಇದು ಬಿಜು ಜನತಾ ದಳ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.
ಇಲ್ಲಿನ ಮುಖ್ಯ ಕಚೇರಿಯಲ್ಲಿ ಬಿಜೆಪಿ ಹಿರಿಯ ನಾಯಕರ ಸಮ್ಮುಖದಲ್ಲಿ ಮಹಲ್ ಬಿಜೆಪಿಗೆ ಸೇರಿಕೊಂಡಿದ್ದಾರೆ. 2019 ರ ಲೋಕಸಭೆ ಚುನಾವಣೆಯಲ್ಲಿ ಕಟಕ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಮಹಚ್ ಬಿಜೆಪಿಯ ಪ್ರಕಾಶ್ ಮಿಶ್ರಾ ಅವರನ್ನು ಭಾರಿ ಮತಗಳ 'ಅಂತರದಿಂದ ಅಂತ ಸೋಲಿಸುವ ಮೂಲಕ ಜಯಗಳಿಸಿದ್ದರು.

click me!