Karnataka election 2023: ಕೂಡ್ಲಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ- ವಲಸಿಗರ ಮಧ್ಯೆ ಪೈಪೋಟಿ

Published : May 07, 2023, 04:30 PM IST
Karnataka election 2023: ಕೂಡ್ಲಗಿ ವಿಧಾನಸಭಾ ಕ್ಷೇತ್ರಕ್ಕೆ ಸ್ಥಳೀಯ- ವಲಸಿಗರ ಮಧ್ಯೆ ಪೈಪೋಟಿ

ಸಾರಾಂಶ

ಕೂಡ್ಲಿಗಿ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವಲಸಿಗರು ಮತ್ತು ಸ್ಥಳೀಯರ ಮಧ್ಯೆ ಪೈಪೋಟಿ ನಡೆದಿದೆ.

ಕೂಡ್ಲಿಗಿ (ಮೇ.7) : ಕೂಡ್ಲಿಗಿ ಎಸ್‌ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವಲಸಿಗರು ಮತ್ತು ಸ್ಥಳೀಯರ ಮಧ್ಯೆ ಪೈಪೋಟಿ ನಡೆದಿದೆ.

2008ರಲ್ಲಿ ಕ್ಷೇತ್ರ ಪುನರ್‌ ವಿಂಗಡಣೆಯಾದಾಗ ಕೊಟ್ಟೂರು ಕ್ಷೇತ್ರದ ಬದಲಾಗಿ ಕೂಡ್ಲಿಗಿ ಎಸ್‌ಟಿ ಮೀಸಲು ಕ್ಷೇತ್ರವಾಯಿತು. ಅಲ್ಲಿಂದ ಇಲ್ಲಿಯವರೆಗೆ 15 ವರ್ಷ ಕ್ಷೇತ್ರದಲ್ಲಿ ಮತದಾರರು ವಲಸಿಗರಿಗೆ ಮಣೆ ಹಾಕಿದ್ದಾರೆ. ಆದರೆ ಈ ಬಾರಿ ಕ್ಷೇತ್ರದಲ್ಲಿ ಸ್ಥಳೀಯ ಧ್ವನಿ ಹೆಚ್ಚಾಗಿದ್ದು, ಸ್ಥಳೀಯರನ್ನು ಆಯ್ಕೆ ಮಾಡುವರೋ ಅಥವಾ ವಲಸಿಗರಿಗೆ ಜೈ ಅನ್ನುತ್ತಾರೋ ಕಾದು ನೋಡಬೇಕಿದೆ.

The Kerala Story: ಟ್ಯಾಕ್ಸ್ ಫ್ರೀ ಮಾಡಲು ಹಿಂದೂ ಜನಜಾಗೃತಿ ಸಮಿತಿ ಒತ್ತಾಯ

ಈ ಬಾರಿ ಕಾಂಗ್ರೆಸ್ಸಿನಿಂದ ಮಾಜಿ ಶಾಸಕ ಎನ್‌.ಟಿ. ಬೊಮ್ಮಣ್ಣ ಅವರ ಪುತ್ರ ಸ್ಥಳೀಯ ಅಭ್ಯರ್ಥಿ ಡಾ. ಎನ್‌.ಟಿ. ಶ್ರೀನಿವಾಸ್‌ ಸ್ಪರ್ಧಿಸಿದ್ದಾರೆ. ಬಿಜೆಪಿಯಿಂದ ವಲಸಿಗರಾದ ಲೋಕೇಶ್‌ ನಾಯಕ ಅವರು ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್‌ನಿಂದ ಹರಪನಹಳ್ಳಿಯ ಕೋಡಿಹಳ್ಳಿ ಭೀಮಪ್ಪ ಅವರು ಸ್ಪರ್ಧೆ ಮಾಡಿದ್ದಾರೆ. ಬಳ್ಳಾರಿ ಮೂಲದ ನಾರಿ ಶ್ರೀನಿವಾಸ್‌ ಆಮ… ಆದ್ಮಿ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.

ಕಾಂಗ್ರೆಸ್‌ ಅಬ್ಬರದ ಪ್ರಚಾರದಲ್ಲಿ ಕ್ಷೇತ್ರದಲ್ಲಿ ಚುನಾವಣೆಗೆ ರಂಗು ತುಂಬುತ್ತಿದೆ. ಇತ್ತ ಬಿಜೆಪಿ ಸಹ ಅಬ್ಬರದ ಪ್ರಚಾರದ ಜತೆಗೆ ತನ್ನದೇಯಾದ ಮತಬ್ಯಾಂಕ್‌ ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಲು ನಿರಂತರ ಶ್ರಮಿಸುತ್ತಿದೆ. ಇವರಿಬ್ಬರ ಮಧ್ಯೆ ಜೆಡಿಎಸ್‌ ನಾವೇನೂ ಕಡಿಮೆ ಇಲ್ಲ ಎಂದು ಕ್ಷೇತ್ರಾದ್ಯಂತ ಯುವಪಡೆಯನ್ನು ಕಟ್ಟಿಕೊಂಡು ಕಾಂಗ್ರೆಸ್‌, ಬಿಜೆಪಿಯವರ ನಿದ್ದೆಗೆಡಿಸಿದ್ದಾರೆ.

ಅಚ್ಚರಿಯ ಫಲಿತಾಂಶ:

2008 ಮತ್ತು 2013ರಲ್ಲಿ ಎರಡು ಬಾರಿ ಸ್ಥಳೀಯ ಅಭ್ಯರ್ಥಿ ನರಸಿಂಹಗಿರಿ ವೆಂಕಟೇಶ್‌ ಹಾಗೂ ಹೊರಗಿನ ಅಭ್ಯರ್ಥಿ ಬಳ್ಳಾರಿಯಿಂದ ಬಂದ ಬಿ. ನಾಗೇಂದ್ರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಆಗ ಮತದಾರರು ವಲಸಿಗ ಅಭ್ಯರ್ಥಿಗೆ ಜೈ ಎಂದಿದ್ದರು. ಹೀಗಾಗಿ ಬಿ. ನಾಗೇಂದ್ರ 2 ಬಾರಿ ಶಾಸಕರಾಗಿ ಆಯ್ಕೆಯಾದರು. ನಂತರ 2018ರಲ್ಲಿ ನಾಗೇಂದ್ರ ಕೂಡ್ಲಿಗಿ ಕ್ಷೇತ್ರ ತೊರೆದು ತವರು ಬಳ್ಳಾರಿ ಗ್ರಾಮಾಂತರ ಕ್ಷೇತ್ರಕ್ಕೆ ಹೋದರು. 2018ರಲ್ಲಿ ಮತ್ತೋರ್ವ ವಲಸಿಗರಾದ ಮೊಳಕಾಲ್ಮುರಿನ ಎನ್‌.ವೈ. ಗೋಪಾಲಕೃಷ್ಣ ಅವರು ಸ್ಥಳೀಯ ಜೆಡಿಎಸ್‌ ಅಭ್ಯರ್ಥಿ ಎನ್‌.ಟಿ. ಬೊಮ್ಮಣ್ಣ ವಿರುದ್ಧ ಗೆದ್ದು ಬೀಗಿದರು.

ಪರಿಶಿಷ್ಟರ ಕಲ್ಯಾಣಕ್ಕೆ ಡಬಲ್‌ ಎಂಜಿನ್‌ ಸರ್ಕಾರ ಬದ್ಧ- ಸಚಿವ ಜೋಶಿ

ಕ್ಷೇತ್ರದಲ್ಲಿ ಈ ಬಾರಿ ಚುನಾವಣಾ ಪ್ರಚಾರಕ್ಕೆ ಹೋದಾಗ ನನ್ನನ್ನು ಜನತೆ ಮನೆಮಗನಂತೆ ಸತ್ಕರಿಸಿದ್ದಾರೆ. ಹೀಗಾಗಿ ನನ್ನನ್ನು ಪ್ರಚಂಡ ಬಹುಮತದಿಂದ ಗೆಲ್ಲಿಸುತ್ತಾರೆ ಎನ್ನುವ ಬಲವಾದ ನಂಬಿಕೆ ಇದೆ. ನಾನು ಹುಟ್ಟಿದ ನೆಲದ ಋುುಣ ತೀರಿಸಲು ಇದೊಂದು ಅವಕಾಶವಾಗಿದೆ.

ಡಾ. ಎನ್‌.ಟಿ. ಶ್ರೀನಿವಾಸ್‌, ಕಾಂಗ್ರೆಸ್‌ ಅಭ್ಯರ್ಥಿ

ಕ್ಷೇತ್ರದಲ್ಲಿ ನಿರಂತರವಾಗಿ 10 ವರ್ಷಗಳಿಂದ ಜನತೆಯ ಮಧ್ಯೆ ಇದ್ದೇನೆ. ಕಳೆದ ಬಾರಿ ಚುನಾವಣೆಯಲ್ಲಿ ಪಕ್ಷೇತರನಾಗಿ ಸ್ಪರ್ಧಿಸಿದಾಗ ಮತದಾರರು 29 ಸಾವಿರ ಮತ ನೀಡಿ ನನ್ನನ್ನು ಬೆಂಬಲಿಸಿದ್ದಾರೆ. ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ನನ್ನ ಸೇವೆಗೆ ಮತದಾರರು ಮನ್ನಣೆ ನೀಡಲಿದ್ದಾರೆ ಎನ್ನುವ ಭರವಸೆ ಇದೆ.

ಲೋಕೇಶ್‌ ವಿ. ನಾಯಕ, ಬಿಜೆಪಿ ಅಭ್ಯರ್ಥಿ

ಕ್ಷೇತ್ರದಲ್ಲಿ ಜನತೆ ಬಿಜೆಪಿ ಹಾಗೂ ಕಾಂಗ್ರೆಸ್‌ ಭ್ರಷ್ಟಾಚಾರವನ್ನು ನೋಡಿದ್ದಾರೆ. ಈ ಬಾರಿ ಜೆಡಿಎಸ್‌ನತ್ತ ಜನರ ಒಲವು ಹೆಚ್ಚಿದೆ. ಕ್ಷೇತ್ರಾದ್ಯಂತ ಯುವಪಡೆ, ಮಹಿಳೆಯರು, ಹಿರಿಯ ಮುಖಂಡರು, ಕಾರ್ಯಕರ್ತರ ಅಪಾರ ಬಳಗ ನಮ್ಮ ಜತೆ ಇದೆ. ಈ ಬಾರಿ ನನ್ನನ್ನು ಗೆಲ್ಲಿಸಲಿದ್ದಾರೆ.

ಕೋಡಿಹಳ್ಳಿ ಭೀಮಪ್ಪ, ಜೆಡಿಎಸ್‌ ಅಭ್ಯರ್ಥಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನೆಹರೂ ಕಾಲದಲ್ಲೇ ಮೊದಲ ಮತಗಳ್ಳತನ ನಡೆದಿದ್ದು; ಎರಡು ಮತ ಪಡೆದು ಪ್ರಧಾನಿಯಾದರು' ಸಂಸತ್ತಿನಲ್ಲಿ ಕಾಂಗ್ರೆಸ್ ವಿರುದ್ಧ ಶಾ ವಾಗ್ದಾಳಿ
2.84 ಲಕ್ಷ ಹುದ್ದೆ ಖಾಲಿ ಇದ್ರೂ, ಶೇ.9 ಹುದ್ದೆಗಳ ನೇಮಕಾತಿಯನ್ನೇ ಪ್ರಚಾರಕ್ಕೆ ಬಳಸಿಕೊಂಡ ಸರ್ಕಾರ!