ರಾಜ್ಯ ಸರ್ಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡೋದನ್ನು ಬಿಜೆಪಿ ಬಿಡಬೇಕು, ಬ್ಯಾಂಕ್ ಅವ್ಯವಹಾರದಲ್ಲಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಟ್ಟರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು.
ಬೀದರ್ (ಜು.20): ರಾಜ್ಯ ಸರ್ಕಾರದ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡೋದನ್ನು ಬಿಜೆಪಿ ಬಿಡಬೇಕು, ಬ್ಯಾಂಕ್ ಅವ್ಯವಹಾರದಲ್ಲಿ ನರೇಂದ್ರ ಮೋದಿ, ನಿರ್ಮಲಾ ಸೀತಾರಾಮನ್ ರಾಜೀನಾಮೆ ಕೊಟ್ಟರೆ, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ಕೊಡುತ್ತಾರೆ ಎಂದು ಅಬಕಾರಿ ಸಚಿವ ಆರ್.ಬಿ.ತಿಮ್ಮಾಪೂರ ಹೇಳಿದರು. ನಗರದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭೇಟಿಯಾದ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ವಾಲ್ಮೀಕಿ ಹಗರಣ ವಿಚಾರವಾಗಿ ರಾಜ್ಯ ಸರ್ಕಾರ ಚುರುಕಾಗಿ ತನಿಖೆ ನಡೆಸಿದೆ. ಹಗರಣದಲ್ಲಿ ಯಾರೇ ಇರಲಿ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದ್ರು, ಬಿಜೆಪಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿರುವದು ಹಾಸ್ಯಾಸ್ಪದ ಎಂದರು.
ಬಿಜೆಪಿಯಲ್ಲಿ ಎಲ್ಲರೂ ಸತ್ಯ ಹರಿಶ್ಚಂದ್ರರೇ ಇದ್ದಾರೆಯೇ? ಎಂದು ಪ್ರಶ್ನಿಸಿದರು. ದೇಶದಲ್ಲಿ ನಡೆಯುತ್ತಿರುವ ಬ್ಯಾಂಕ್ ಹಗರಣಗಳ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ರಾಜೀನಾಮೆ ಕೇಳಬಹುದಾ? ಪ್ರಧಾನಿ ನರೇಂದ್ರ ಮೋದಿ ಅವರ ರಾಜೀನಾಮೆ ಕೊಡಬೇಕು ಅಂತಾ ನಾವು ಹೇಳಬಹುದು ಅಲ್ವಾ ಎಂದು ಪ್ರಶ್ನಿಸಿದರು. ವಾಲ್ಮೀಕಿ ಹಗರಣವನ್ನು ರಾಜ್ಯ ಸರ್ಕಾರಕ್ಕೆ ತಳ್ಳಿದ್ರೆ, ಬ್ಯಾಂಕ್‌ನಲ್ಲಿ ಭಾರೀ ಅವ್ಯವಹಾರ ನಡೆಯುತ್ತಿದೆ. ಹೀಗೆಯೇ ಬ್ಯಾಂಕ್ ಅವ್ಯವಹಾರ ಆಗ್ತೀವೆ, ಹಾಗಂತ ಕೇಂದ್ರ ಸರ್ಕಾರದ ಭ್ರಷ್ಟಾಚಾರ ಅಂತಾ ಹೇಳಬಹುದು ಅಲ್ವಾ, ಬ್ಯಾಂಕ್ ಅವ್ಯವಹಾರದಲ್ಲಿ ಮೋದಿ ರಾಜೀನಾಮೆ ಕೊಟ್ರೆ, ಇಲ್ಲಿ ಸಿದ್ದರಾಮಯ್ಯ ರಾಜೀನಾಮೆ ಕೊಡ್ತಾರೆ ಎಂದರು.
undefined
ಸಂಘಟಿತರಗದಿದ್ರೆ ಯಾವುದೇ ಪಕ್ಷ ನಮ್ಮ ಬಳಿ ಸುಳಿಯಲ್ಲ: ಯಾವುದೇ ಸಮಾಜದ ಅಭಿವೃದ್ಧಿಗೆ ರಾಜಕೀಯ ಸಂಘಟಿತ ಎಂಬ ಮಾಸ್ಟರ್ ಕೀ ಇದ್ದರೆ ಮಾತ್ರ ನಾವು ಬೆಳೆಯಲು ಸಾಧ್ಯವಿದೆ ಎಂದು ಅಬಕಾರಿ ಸಚಿವ ಆರ್‌ಬಿ ತಿಮ್ಮಾಪೂರ ನುಡಿದರು. ನಗರದ ಚನ್ನಬಸವ ಪಟ್ಟದ್ದೇವರ ರಂಗಮಂದಿರದಲ್ಲಿ ಮಾದಿಗ ಸಮನ್ವಯ ಸಮಿತಿ ಬೀದರ್ ವತಿಯಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಜಕಾರಣಕ್ಕಾಗಿ ಹಣ ಇಲ್ಲ. ಚುನಾವಣೆಗಳಲ್ಲಿ ವಿಪರೀತ ಸ್ಥಿತಿಯಾಗಿದೆ, ಹಣ ಇಲ್ಲ ಎಂದರೆ ಜನ ಇರಬೇಕು. ಜನ ಇದ್ದರೆ ಒಗ್ಗಟ್ಟಿನಿಂದ ಇರಬೇಕು ಎಂದರು.
108 ಆ್ಯಂಬುಲೆನ್ಸ್‌ಗೆ 7 ವರ್ಷವಾದರೂ ಹೊಸ ಟೆಂಡರ್ ಇಲ್ಲ: ರಾಜ್ಯಾದ್ಯಂತ ಸೇವೆಯಲ್ಲಿ ಪದೇ ಪದೇ ವ್ಯತ್ಯಯ
ಸಂಘಟನೆ ಇರದೇ ಇದ್ದರೆ ಯಾವುದೇ ಪಕ್ಷದವರು ತಮ್ಮ ಬಳಿ ಸುಳಿಯಲು ಬಿಡಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ ನಮಗೆ ರಾಜಕೀಯ ಪ್ರಾತಿನಿಧ್ಯ ನೀಡಿಲ್ಲ ಎಂಬುವದು ಸತ್ಯದ ಮಾತು. ನಾವು ಎಲ್ಲಿ ತಪ್ಪು ಮಾಡಿದ್ದೇವೆ ಎಂಬುವದನ್ನು ತಿಳಿಯಬೇಕಾಗಿದೆ. ನೀವು ನೀಡಿದ ಮತದ ಬೆಲೆ ಎಲ್ಲಿ ಹೋಯಿತು ಎಂಬುವದರ ಬಗ್ಗೆ ವಿಚಾರ ಮಾಡಬೇಕಾಗಿದೆ ಎಂದರು. ಡಾ. ಅಂಬೇಡ್ಕರ್ ಅವರು ನೀಡಿದ ಶಕ್ತಿ ಏನಿದೆ ಎಂಬುವದನ್ನು ತೋರಿಸಲು ಎಚ್ಚರಿಕೆಯಿಂದ ಮತ ನೀಡಿದರೆ ಮಾತ್ರ ಅಭಿವೃದ್ಧಿ ಸಾಧ್ಯವಿದೆ. ಮಾದಿಗ ಸಮಾಜದ ಅಭಿವೃದ್ಧಿಗಾಗಿ ಏನು ಸಾಧ್ಯವಿದೆ ಅದನ್ನು ಮಾಡುತ್ತೇನೆ ಆದರೆ ಮೊದಲು ನಿಮ್ಮಲ್ಲಿರುವ ಲೋಪ ದೋಷಗಳನ್ನು ಸರಿಪಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.