ಸಿದ್ದರಾಮಯ್ಯ ಸಸ್ಯಹಾರ ರಹಸ್ಯ, ಮತ್ತೆ ಪಟ್ಟಕ್ಕೇರಲು ಕಾರಣವಾಯ್ತಾ ಧರ್ಮಸ್ಥಳದಲ್ಲಿ ಎಸಗಿದ ತಪ್ಪಿನ ಪ್ರಾಯಶ್ಚಿತ!

Published : May 23, 2023, 10:09 PM ISTUpdated : May 23, 2023, 10:25 PM IST
ಸಿದ್ದರಾಮಯ್ಯ  ಸಸ್ಯಹಾರ ರಹಸ್ಯ, ಮತ್ತೆ ಪಟ್ಟಕ್ಕೇರಲು ಕಾರಣವಾಯ್ತಾ ಧರ್ಮಸ್ಥಳದಲ್ಲಿ ಎಸಗಿದ ತಪ್ಪಿನ ಪ್ರಾಯಶ್ಚಿತ!

ಸಾರಾಂಶ

ಸಿದ್ದರಾಮಯ್ಯ ಅವರ ಸಸ್ಯಹಾರ ವೃತಾಚರಣೆಯ ಕಥೆಯೊಂದು ರಾಜಕೀಯ ಪಡಸಾಲೆಯಲ್ಲಿ ಭರ್ಜರಿ ಸದ್ದು ಮಾಡ್ತಿದೆ. ಧರ್ಮಸ್ಥಳದಲ್ಲಿ ಎಸಗಿದ ತಪ್ಪಿಗೆ ವೃತಾಚರಣೆ ಮೂಲಕ ಸಿದ್ದು ಪ್ರಾಯಶ್ಚಿತ ಮಾಡಿಕೊಂಡು ಮತ್ತೆ ಪಟ್ಟ ಏರಿದ್ರಾ ಎಂಬ ಬಗ್ಗೆ ಚರ್ಚೆಗಳು‌ ನಡೀತಾ ಇದೆ.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಮಂಗಳೂರು (ಮೇ.23): ಮತ್ತೆ ಸಿದ್ದರಾಮಯ್ಯ ಈ ರಾಜ್ಯದ ಅಧಿಕಾರದ ಗದ್ದುಗೆ ಏರಿದ್ದಾರೆ. ಸೋಲುಗಳ ಮಧ್ಯೆ ಎದ್ದು ನಿಂತ ಸಿದ್ದು ಮತ್ತೆ ಮುಖ್ಯಮಂತ್ರಿಯಾಗಿ ಪಟ್ಟ ಏರಿದ್ದಾರೆ. ಈ ಮಧ್ಯೆ ಇವರ ಶ್ರಮದ ಜೊತೆಗೆ ಸಸ್ಯಹಾರ ವೃತಾಚರಣೆಯ ಕಥೆಯೊಂದು ರಾಜಕೀಯ ಪಡಸಾಲೆಯಲ್ಲಿ ಭರ್ಜರಿ ಸದ್ದು ಮಾಡ್ತಿದೆ. 

ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ ಒಲಿಯಲು ಸಸ್ಯಹಾರ ವೃತಾಚರಣೆ ಕಾರಣವಾಯ್ತಾ ಎಂಬ ಬಗ್ಗೆ ಕರಾವಳಿಯಲ್ಲಿ ಚರ್ಚೆ ಶುರುವಾಗಿದೆ. ಧರ್ಮಸ್ಥಳದಲ್ಲಿ ಎಸಗಿದ ತಪ್ಪಿಗೆ ವೃತಾಚರಣೆ ಮೂಲಕ ಸಿದ್ದು ಪ್ರಾಯಶ್ಚಿತ ಮಾಡಿಕೊಂಡು ಮತ್ತೆ ಪಟ್ಟ ಏರಿದ್ರಾ ಎಂಬ ಬಗ್ಗೆ ಚರ್ಚೆಗಳು‌ ನಡೀತಾ ಇದೆ. ಅಸಲಿಗೆ ಕರಾವಳಿಯ ಅರ್ಚಕರೊಬ್ಬರ ಸೂಚನೆಯಂತೆ ಸಿದ್ದರಾಮಯ್ಯ ಸಸ್ಯಹಾರ ವೃತಾಚರಣೆ ‌ಕೈಗೊಂಡಿದ್ದರಂತೆ. ಮತ್ತೆ ಪಟ್ಟಕ್ಕೇರಲು ಕಳೆದ ಎರಡು ತಿಂಗಳಿನಿಂದ ಸಸ್ಯಹಾರ ವೃತದಲ್ಲಿದ್ದ ಸಿದ್ದರಾಮಯ್ಯಗೆ, ದ.ಕ ಜಿಲ್ಲೆಯ ಕಾಂಗ್ರೆಸ್ ಪ್ರಮುಖರೊಬ್ಬರು ಈ ಬಗ್ಗೆ ಮಾರ್ಗದರ್ಶನ ಮಾಡಿದ್ದರು‌ ಎನ್ನಲಾಗಿದೆ.

ಹಿಂದೆ ಸಿಎಂ ಆಗಿದ್ದ ಅವಧಿಯಲ್ಲಿ ಕರಾವಳಿಯಲ್ಲಿ ಯಡವಟ್ಟು ಮಾಡಿಕೊಂಡಿದ್ದ ಸಿದ್ದರಾಮಯ್ಯ, ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿ ಭಾರೀ ಪ್ರಮಾದ ಎಸಗಿದ್ದರು.‌ ಕಾಕತಾಳೀಯ ಎಂಬಂತೆ ಆ ಬಳಿಕ ರಾಜಕೀಯವಾಗಿ ಸೋಲು ಅನುಭವಿಸಿದ್ದ ಸಿದ್ದರಾಮಯ್ಯ ಹಲವು ಏಳುಬೀಳುಗಳನ್ನು ಕಂಡಿದ್ದರು. 2017ರ ಅಕ್ಟೋಬರ್ ನಲ್ಲಿ ಸಿಎಂ ಆಗಿದ್ದ ವೇಳೆ ಮೀನು ತಿಂದು ಧರ್ಮಸ್ಥಳಕ್ಕೆ ಹೋಗಿದ್ದ ಸಿದ್ದರಾಮಯ್ಯ, ಮೀನು ತಿಂದಿದ್ದನ್ನ ಸಮರ್ಥಿಸಿಕೊಂಡಿದ್ದರು.

ಇದಾದ ಬೆನ್ನಲ್ಲೇ 2018ರ ಚುನಾವಣೆಯಲ್ಲಿ ಬಹುಮತದ ಸರ್ಕಾರ ರಚಿಸುವಲ್ಲಿ ಸಿದ್ದರಾಮಯ್ಯ ವಿಫಲವಾಗಿದ್ದು, ಜೆಡಿಎಸ್ ಜೊತೆ ಸೇರಿ ಸಮ್ಮಿಶ್ರ ಸರ್ಕಾರ ರಚಿಸಿದ ಕಾರಣ ಸಿದ್ದರಾಮಯ್ಯ ಅಧಿಕಾರ ಏರದೇ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಬೇಕಾಯಿತು. ಈ ವೇಳೆ ಮತ್ತೆ ಧರ್ಮಸ್ಥಳದಲ್ಲೇ ಮತ್ತೊಂದು ಯಡವಟ್ಟು ಮಾಡಿಕೊಂಡ ಸಿದ್ದರಾಮಯ್ಯ, 2018ರ ಜೂನ್ ನಲ್ಲಿ ಧರ್ಮಸ್ಥಳದ ಉಜಿರೆಯ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆಗೆ ಬಂದಿದ್ದ ವೇಳೆ ಮತ್ತೊಂದು ಪ್ರಮಾದ ಎಸಗಿದ್ದರು. ಈ ವೇಳೆ 'ಸಮ್ಮಿಶ್ರ ಸರ್ಕಾರ ಪೂರ್ಣ ಅವಧಿಗೆ ಇರುವುದಿಲ್ಲ, ಆದಷ್ಟು ಬೇಗ ಬೀಳುತ್ತದೆ' ಎಂದಿದ್ದ ಸಿದ್ದು ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿತ್ತು.

ಉರಿಗೌಡ-ನಂಜೇಗೌಡ ಕೇಸಲ್ಲಿ ನಮ್ಮ ವಿರುದ್ಧ ನಿಂತ್ರಿ, ಇನ್ನು ಅದೆಲ್ಲ ನಡೆಯಲ್ಲ: ಪೊಲೀಸರಿಗೆ

ರಾಜ್ಯ ರಾಜಕಾರಣದಲ್ಲಿ ಭಾರೀ ವಿವಾದ ಎಬ್ಬಿಸಿದ್ದ ಸಿದ್ದು ಹೇಳಿಕೆ ಬೆನ್ನಲ್ಲೇ 2019ರ ಜುಲೈನಲ್ಲಿ ಸಮ್ಮಿಶ್ರ ಸರ್ಕಾರ ‌ಪತನವಾಗಿತ್ತು. ಕಾಂಗ್ರೆಸ್ ಶಾಸಕರ ಪಕ್ಷಾಂತರದಿಂದ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ರಚನೆಯಾಯಿತು. ಧರ್ಮಸ್ಥಳದ ಯಡವಟ್ಟಿನ ಬಳಿಕ ಸಿದ್ದರಾಮಯ್ಯ ರಾಜಕೀಯ ಬದುಕಿಗೆ ಭಾರೀ ಹೊಡೆತ ಬಿದ್ದಿತ್ತು.

ಪೊಲೀಸ್ ಇಲಾಖೆಯನ್ನೇ ಕೇಸರಿಕರಣ ಮಾಡಲು ಹೊರಟಿದ್ದೀರಾ... ಅಧಿಕಾರಿಗಳ

ಈ ಮಧ್ಯೆ 2023ರಲ್ಲಿ ಮತ್ತೆ ಗದ್ದುಗೆ ಏರಲು ಸಿದ್ದು ಶತ ಪ್ರಯತ್ನ ನಡೆಸಿದ್ದು, ಈ ವೇಳೆ ಕರಾವಳಿಯ ಅರ್ಚಕರ ಸಲಹೆ ಹಿನ್ನೆಲೆ ಸಿದ್ದು ಸಸ್ಯಹಾರ ವೃತಾಚರಣೆ ಕೈಗೊಂಡಿದ್ದರು‌ ಎನ್ನಲಾಗಿದೆ. ಧರ್ಮಸ್ಥಳದಲ್ಲಿ‌ ಮಾಡಿದ ತಪ್ಪು ತಿದ್ದಿ ಕೊಳ್ಳುವ ಸಲುವಾಗಿ ಸಿದ್ದರಾಮಯ್ಯ ಈ ವೃತಾಚರಣೆ ಕೈಗೊಂಡರಾ ಎಂಬ ಮಾತುಗಳು ಹರಿದಾಡ್ತಿವೆ. ಅಲ್ಲದೇ ಎರಡು ತಿಂಗಳ ಸಸ್ಯಹಾರ ವೃತಾಚರಣೆ ಫಲವಾಗಿ ಸಿದ್ದರಾಮಯ್ಯಗೆ ಮತ್ತೆ ಸಿಎಂ ಪಟ್ಟ ಒಲಿಯಿತು ಎಂಬ ಚರ್ಚೆ ಸದ್ಯ ಚಾಲ್ತಿಯಲ್ಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಧಿವೇಶನ ವೇಳೆ ಹಳೆಯ ಬೇಡಿಕೆಗಳ ಹೊಸ ಕೂಗು!
ಸದನದಲ್ಲಿ ಆಡಳಿತ, ವಿಪಕ್ಷ ಭಾರೀ ಕದನ ಸಂಭವ!