ಮೋದಿ ಕೈ ಬೀಸಿದ ಕೂಡಲೇ ಮತ ಬರಲ್ಲ. ಮೋದಿ ನಂಜನಗೂಡಿಗೆ ಬಂದು ಕೈ ಬೀಸಿ ಹೋದ ಮೇಲೆ ಕಾಂಗ್ರೆಸ್ ನಾ ಎಲ್ಲರೂ ಗೆದ್ದರು. ನಾನು ಗೆದ್ದೆ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಗೆದ್ದ. ಎಲ್ಲರೂ ದೊಡ್ಡ ಲೀಡ್ ನಲ್ಲೆ ಗೆದ್ವಿ. ಉಚಿತ ಯೋಜನೆಗಳನ್ನು ಮೋದಿ ಅಣಕಿಸಿದ್ದರು. ಈಗ ಎಲ್ಲಾ ಕಡೆ ಉಚಿತ ಯೋಜನೆ ಘೋಷಣೆ ಮಾಡುತ್ತಿದ್ದಾರೆ ಟೀಕಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು(ನ.18): ಬಿಜೆಪಿಯವರು, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರೂ ನಾವು ಐದು ವರ್ಷ ಅಧಿಕಾರದಲ್ಲಿ ಇದ್ದೇ ಇರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಂಜನಗೂಡು ತಾಲೂಕು ಕಳಲೆ ಗ್ರಾಮದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅಂತಾ ಒಬ್ಬ ಇದ್ದಾನೆ. ಅವನಿಗೆ ಬರೀ ಹೊಟ್ಟೆ ಉರಿ. ನಾವು ಅಧಿಕಾರಕ್ಕೆ ಬಂದಿದ್ದೇವೆ ಅಂತಾ ಹೊಟ್ಟೆ ಕಿವುಚಿ ಕೊಳ್ಳುತ್ತಾನೆ. ಇಂಥವರ ಬಗ್ಗೆ ಬಿ ಕೇರ್ ಫ್ಹುಲ್ [ಎಚ್ಚರಿಕೆಯಿಂದಿರಿ]. ನಾವು ಇನ್ನೂ ಐದು ವರ್ಷ ಇದ್ದೇ ಇರುತ್ತೇವೆ. ಬಿಜೆಪಿ, ಕುಮಾರಸ್ವಾಮಿ ಏನೇ ಹೊಟ್ಟೆ ಹಿಸುಕಿಕೊಂಡರು ನಾವು ಐದು ವರ್ಷ ಇರುವುದಾಗಿ ಹೇಳಿದರು.
ಮೋದಿ ಕೈ ಬೀಸಿದ ಕೂಡಲೇ ಮತ ಬರಲ್ಲ. ಮೋದಿ ನಂಜನಗೂಡಿಗೆ ಬಂದು ಕೈ ಬೀಸಿ ಹೋದ ಮೇಲೆ ಕಾಂಗ್ರೆಸ್ ನಾ ಎಲ್ಲರೂ ಗೆದ್ದರು. ನಾನು ಗೆದ್ದೆ, ದರ್ಶನ್ ಧ್ರುವನಾರಾಯಣ್, ಅನಿಲ್ ಚಿಕ್ಕಮಾದು ಗೆದ್ದ. ಎಲ್ಲರೂ ದೊಡ್ಡ ಲೀಡ್ ನಲ್ಲೆ ಗೆದ್ವಿ. ಉಚಿತ ಯೋಜನೆಗಳನ್ನು ಮೋದಿ ಅಣಕಿಸಿದ್ದರು. ಈಗ ಎಲ್ಲಾ ಕಡೆ ಉಚಿತ ಯೋಜನೆ ಘೋಷಣೆ ಮಾಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಗ್ಯಾರಂಟಿ ಜಾರಿ ಆದರೆ ರಾಜ್ಯ ಆರ್ಥಿಕ ದಿವಾಳಿ ಆಗುತ್ತೆ ಅಂತಾ ಮೋದಿ ಹೇಳಿದ್ದರು. ಗ್ಯಾರಂಟಿ ಜಾರಿ ಮಾಡಿದ ಮೇಲೂ ರಾಜ್ಯ ಅರ್ಥಿಕವಾಗಿ ಸದೃಢ ವಾಗಿದೆ ಎಂದರು.
undefined
ಅನೈತಿಕ ರಾಜಕಾರಣದ ಅಧ್ಯಾಯಕ್ಕೆ ಮುನ್ನುಡಿ ಬರೆದವರು ಕುಮಾರಸ್ವಾಮಿ: ವೆಂಕಟೇಶ್ ಕಿಡಿ
ದೇವನೊಬ್ಬ ನಾಮ ಹಲವು
ದೇವರು ಒಬ್ಬನೇ ಇರೋದು. ಹೆಸರು ಬೇರೆ ಬೇರೆ ಇವೆ. ಕೋಟಿಗಟ್ಟಲೇ ದೇವರುಗಳು ಇವೆ ಎಂದು ಸಿದ್ದರಾಮಯ್ಯ ಪುನರುಚ್ಚರಿಸಿದರು. ಗ್ರಾಮದಲ್ಲಿ ಕಡೇಮಾಳಮ್ಮ ದೇವಾಲಯ ಉದ್ಘಾಟಿಸಿ ಮಾತನಾಡಿದ ಅವರು, ಕಡೇಮಾಳಮ್ಮ ದೇವಾಲಯ ಜೀರ್ಣೋದ್ಧಾರವಾಗಿದೆ. ಬಹಳ ಸಂತೋಷದಿಂದ ದೇವಾಲಯ ಉದ್ಘಾಟಿಸಿದ್ದೇನೆ.
ಪ್ರಧಾನಿ ಮೋದಿಯಿಂದ ಅಧಿಕಾರ ದುರ್ಬಳಕೆ: ಸಚಿವ ಎಚ್.ಸಿ. ಮಹದೇವಪ್ಪ
ಮೊಘಲರು 600 ವರ್ಷ, ಬ್ರಿಟಿಷರು 200 ವರ್ಷ ಆಳಿದರು. ಈ ದೇಶದಲ್ಲಿ 562 ಸಂಸ್ಥಾನಗಳು ಇದ್ದವು. ಬಸವಾದಿ ಶರಣರು ನಿಮ್ಮಲ್ಲೇ ದೇವರು ಇದ್ದಾನೆ ಅಂದರು. ಶುದ್ಧವಾದ ಮನಸ್ಸಿನಿಂದ ಪೂಜೆ ಮಾಡಬೇಕು. ಪಕ್ಕದ ಮನೆಯವರು ಹಾಳಾಗ ಅಂತ ಪೂಜೆ ಮಾಡಬಾರದು. ದೇವರು ವರ ಕೊಡುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ ಆಶೀರ್ವಾದ ಅಂತೂ ಮಾಡುತ್ತಾನೆ. ಯಾವುದೇ ಮನುಷ್ಯನಿಗೆ ಸ್ವಾರ್ಥ ಇರಬಾರದು. ಜಾತಿ ಬಿಟ್ಟು ಮಾನವೀಯತೆ ಆಧಾರದ ಮೇಲೆ ಪ್ರೀತಿಸಬೇಕು. ವಿಶ್ವಮಾನವ ಆಗೋದು ಬೇಡ, ಅಲ್ಪಮಾನವರಾಗಬೇಡಿ. ದೇವರ ಮೇಲೆ ನಂಬಿಕೆ ಇಟ್ಟುಕೊಳ್ಳೋದು ತಪ್ಪು ಅಂತ ಹೇಳಲ್ಲ. ಮನುಷ್ಯರ ನಡುವೆ ಗೋಡೆ ಕಟ್ಟಬಾರದು ಎಂಬುದಾಗಿ ಅವರು ತಿಳಿಸಿದರು.
ಈ ಊರು ಐತಿಹಾಸಿಕ ಗ್ರಾಮ. ನಂಜನಗೂಡು ಉಪ ಚುನಾವಣೆಯಲ್ಲಿ ಕೇಶವಮೂರ್ತಿ ಪರ ಮತ ಕೇಳಲು ಬಂದಿದ್ದೆ. ಪಶು ಸಂಗೋಪನಾ ಸಚಿವನಾಗಿದ್ದಾಗ, ಅಂಬೇಡ್ಕರ್ ಜಯಂತಿಗೆ ಬಂದಿದ್ದೆ. ಇಲ್ಲಿ ಅನೇಕ ಸಮುದಾಯಗಳು ಸೌಹಾರ್ಯತೆಯಿಂದ ಇದ್ದಾರೆ ಎಂದರು.