ವಿಪಕ್ಷಗಳಿಗೆ ಮಾನ ಮರ್ಯಾದೆ ಅನ್ನೋದೇ ಇಲ್ಲ. ಇವರಿಗೆ ಸಿದ್ದರಾಮಯ್ಯ ಆಡಳಿತ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಚಿತ್ರದುರ್ಗ (ಆ.18): ವಿಪಕ್ಷಗಳಿಗೆ ಮಾನ ಮರ್ಯಾದೆ ಅನ್ನೋದೇ ಇಲ್ಲ. ಇವರಿಗೆ ಸಿದ್ದರಾಮಯ್ಯ ಆಡಳಿತ ಸಹಿಸಿಕೊಳ್ಳಲು ಆಗುತ್ತಿಲ್ಲ ಎಂದು ಮಾಜಿ ಸಚಿವ ಹೆಚ್ ಆಂಜನೇಯ ಬಿಜೆಪಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ನೀಡಿರುವ ವಿಚಾರ ಸಂಬಂಧ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿಪಕ್ಷಗಳಿಗೆ ಹೊಟ್ಟೆ ಉರಿಯೋ ಇನ್ನೇನು ಉರಿದಿದೆಯೋ ಗೊತ್ತಿಲ್ಲ. ಸಿದ್ದರಾಮಯ್ಯ ಉತ್ತಮವಾಗಿ ಆಡಳಿತ ನಡೆಸಿದ್ದಾರೆ. 17 ಬಜೆಟ್ ಮಂಡಿಸಿ ದಾಖಲೆ ಬರೆದಿದ್ದಾರೆ. ಅವರ ಆಡಳಿತ ಅವಧಿ, ಬಜೆಟ್ ಮಂಡನೆ ಗಿನ್ನೆಸ್ ದಾಖಲೆ ಆಗಲಿದೆ ಅಂತವರ ಮೇಲೆ ಅಪಾದನೆ ಮಾಡುತ್ತಿರುವುದು ರಾಜಕೀಯ ಷಡ್ಯಂತ್ರ ಎಂದು ಹರಿಹಾಯ್ದರು.
ರಾಜ್ಯಪಾಲ ಸರಿಯಿದ್ದರೆ ಇನ್ನುಳಿದ ದೂರುಗಳಿಗೂ ಪ್ರಾಸಿಕ್ಯೂಷನ್ ಅನುಮತಿ ಕೊಡಲಿ. ಇನ್ನು ದೂರುಗಳ ಸುರಿಮಳೆ ಆಗುತ್ತದೆ. ಎಸ್ಸಿಪಿಟಿಎಸ್‌ಪಿ ದಲಿತಪರ ಯೋಜನೆ ತಂದಿದ್ದು ಸಿದ್ದರಾಮಯ್ಯ, ಸಿದ್ದರಾಮಯ್ಯ ದಲಿತರ ಅನಭಿಷಿಕ್ತ ದೊರೆ ಎಂದರು.
ವಾರ್ತಾ ಇಲಾಖೆ ದುರುಪಯೋಗ ಆರೋಪ; ಸಿಎಂ ಸಿದ್ದರಾಮಯ್ಯ ವಿರುದ್ಧ ಸಿಟಿ ರವಿ ವಾಗ್ದಾಳಿ
ಛಲವಾದಿ ನಾರಾಯಣಸ್ವಾಮಿ ಯಾರನ್ನೋ ಮೆಚ್ಚಿಸಲು ಟೀಕೆ ಮಾಡುತ್ತಿದ್ದಾರೆ. ಅಸಂಬದ್ಧವಾಗಿ ಟೀಕೆ ಮಾಡಬಾರದು. ಮತದಾರರಿಗೆ ಇಂತಿಷ್ಟು ಹಣ ಫಿಕ್ಸ್ ಮಾಡಿದವನು ಯಾವನು? ಜನಪ್ರತಿನಿಧಿಗಳನ್ನು ನಾಯಿ ನರಿಗಳಂತೆ ಖರೀದಿ ಮಾಡಿದವನು ಯಾವನು? ಶೇ 40 ರಷ್ಟು ಲಂಚದಲ್ಲಿ ಮುಳುಗಿ ರಾಜ್ಯ ಗೌರವ ಕಳೆದವರು ಯಾರು? ಬಿಜೆಪಿಯಿಂದ ರಾಜ್ಯದ ಮಾನ ಬೀದಿಗೆ ಬಂದಿದೆ. ಬಿಜೆಪಿಯವರು ಎಲ್ಲರೂ ಕಪ್ಪು ಕಾಗಿಗಳೇ ಸಿಎಂ ಸಿದ್ಧರಾಮಯ್ಯಗೆ ಕಪ್ಪು ಕಾಗೆ ಎಂದಿದ್ದ ಛಲವಾದಿ ನಾರಾಯಣಸ್ವಾಮಿಗೆ ತಿರುಗೇಟು ನೀಡಿದರು.
ಬಿಜೆಪಿಯವರ ತಟ್ಟೆಯಲ್ಲೇನಿದೆ ಎಂಬುದನ್ನು ನೋಡಿಕೊಳ್ಳಲಿ. ಬಡವರ ಭಾಗ್ಯವಿಧಾತ ಸಿದ್ದರಾಮಯ್ಯ ಅಪ್ಪಟ ಬಂಗಾರ. ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಅಂತಾ ಬಿಜೆಪಿಯವ್ರು ಹೇಳ್ತಿದ್ದಾರೆ. ಅವರನ್ನೇನು ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಂದುಕೊಂಡಿದ್ದರೇನು ಎಂದು ಹರಿಹಾಯ್ದರು