
ಬೆಂಗಳೂರು: ಟಿಪು ಸುಲ್ತಾನ್ ಹೆಸರನ್ನು ಬದಲಾಯಿಸಿ ಮಹಾರಾಜರ ಹೆಸರು ಇಡುವ ಬದಲು ಹೊಸ ರೈಲನ್ನೇ ಬಿಡಬಹುದಿತ್ತು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ. ಟಿಪು ಮರ್ಯಾದೆ ಟಿಪ್ಪುವಿಗೆ ಇದೆ, ಮಹಾರಾಜರ ಮರ್ಯಾದೆ ಮಹಾರಾಜರಿಗೆ ಇದೆ. ಟಿಪು ಹೆಸರು ಬದಲಾವಣೆ ಮಾಡಿದ ತಕ್ಷಣ ಟಿಪು ಮರ್ಯಾದೆ ಕಡಿಮೆ ಆಗಲ್ಲ. ಹೊಸ ಟ್ರೈನ್ ಬಿಡೋಕೆ ನಿಮಗೆ ಜಿಪುಣತನ. ಮಹಾರಾಜರ ಹೆಸರಿನಲ್ಲೇ ಇನ್ನೂ ದೊಡ್ಡ ರೈಲು ಬಿಡಬಹುದಿತ್ತು. ಮಹಾರಾಜರು ನಮ್ಮ ರಾಜ್ಯದ ದೇವರು, ಅವರ ಬಗ್ಗೆ ನಮಗೂ ಗೌರವ ಇದೆ, ಎಂದಿದ್ದಾರೆ.
ಇದನ್ನೂ ಓದಿ: ಹಿಂದಿ ರಾಷ್ಟ್ರಭಾಷೆ ಮಾಡುವ ಕುರಿತು Rahul Gnadhiಗೆ ಪ್ರಶ್ನೆ: ರಾಹುಲ್ ಹೇಳಿದ್ದೇನು
ಶೃಂಗೇರಿ ಮಠದವರೇ ಸಲಾಂ ಆರತಿ ಪದ್ದತಿ ತೆಗೆಯಲ್ಲ. ಟಿಪ್ಪು ಕೊಟ್ಟ ವಜ್ರಕ್ಕೆ ಮೊದಲ ಆರತಿ ಆಗುತ್ತೆ. ಆ ವಜ್ರ ಕಿತ್ತು ಕೊಳ್ಳಲು ಬಿಜೆಪಿಯವರಿಗೆ ದಮ್ ಇದೆಯಾ. ಇದೆಲ್ಲಾ ಓಟ್ ಬ್ಯಾಂಕ್ ಗಾಗಿ ಮಾಡ್ತಾ ಇದೀರಾ. ಕಾಂಗ್ರೆಸ್ ನವರ ನಪುಂಸಕತನದಿಂದ ಬಿಜೆಪಿ ಯವರು ಅಧಿಕಾರಕ್ಕೆ ಬಂದಿದ್ದಾರೆ. ರಾಜ್ಯದ ಜನ ನಿಮ್ಮನ್ನು ಒದ್ದು ಓಡಿಸುವ ದಿನ ಹತ್ರ ಬರ್ತಾ ಇದೆ. ಕಾಯ್ತಾ ಇರಿ. ಶೃಂಗೇರಿ ದೇವಸ್ಥಾನದಲ್ಲಿ ಸಲಾಂ ಆರತಿ ತೆಗೆದು ಹಾಕುವ ವಿಚಾರ ಕ್ಕೆ ಸಿಎಂ ಇಬ್ರಾಹಿಂ ಈ ರೀತಿ ಪ್ರತಿಕ್ರಿಯೆ ನೀಡಿದರು.
ಜೆಡಿಎಸ್ ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಎಚ್‌ಡಿ ದೇವೇ ಗೌಡರು ಪ್ರಧಾನಮಂತ್ರಿಗಳಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ಬೆಂಗಳೂರಿಗೆ ಇವತ್ತು ನೀರು ಬರ್ತಿದೆ ಅಂದರೆ ದೇವೇಗೌಡರು ಕಾರಣ. ಇವತ್ತಿಗೂ ಬೆಂಗಳೂರಿಗೆ ನೀರು, ರಸ್ತೆ ಸಮಸ್ಯೆ ಇದೆ. ಇದೆಲ್ಲಾ ಸರಿ ಹೋಗಬೇಕು ಅಂದ್ರೆ ಜೆಡಿಎಸ್ ಬರಬೇಕು ಎಂದು ಇಬ್ರಾಹಿಂ ಪ್ರತಿಕ್ರಿಯಿಸಿದ್ದಾರೆ. ಮೈಸೂರು - ತಾಳಗುಪ್ಪ ರೈಲಿಗೆ ಟಿಪು ಎಕ್ಸ್‌ಪ್ರೆಸ್ ಎಂಬ ಹೆಸರಿತ್ತು. ಮೈಸೂರು - ಕೊಡಗು ಸಂಸದ ಪ್ರತಾಪ ಸಿಂಹ ಅವರ ಮನವಿಯ ನಂತರ ಟಿಪು ಎಕ್ಸ್‌ಪ್ರೆಸ್ ಹೆಸರನ್ನು ವಡೆಯರ್ ಎಕ್ಸ್‌ಪ್ರೆಸ್ ಎಂದು ಮತ್ತು ಬೆಂಗಳೂರು ತಾಳಗುಪ್ಪ ರೈಲಿಗೆ ಕುವೆಂಪು ಎಕ್ಸ್‌ಪ್ರೆಸ್ ಎಂದು ಮರು ನಾಮಕರಣ ಮಾಡಲಾಗಿದೆ. ಈ ಬಗ್ಗೆ ಪ್ರತಾಪ ಸಿಂಹ ಅವರು ಟ್ವೀಟ್ ಮಾಡಿದ ನಂತರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: ಪಿಎಫ್‌ಐ ಬ್ಯಾನ್, ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಮತ್ತು ಕೈ ಅಧ್ಯಕ್ಷ ಚುನಾವಣೆ ಬಗ್ಗೆ ರಾಹುಲ್ ಗಾಂಧಿ ಮಾತು
ಒಪ್ಪಿದರೂ, ಒಪ್ಪದಿದ್ದರೂ ಟಿಪು ಇತಿಹಾಸದ ಭಾಗ; ಪರಮೇಶ್ವರ್
ಟಿಪ್ಪು ಎಕ್ಸ್‌ಪ್ರೆಸ್ ಹೆಸರು ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿದ ರಾಹುಲ್, ಬಿಜೆಪಿಗೆ ಮಾಡೋಕೆ ಸಾಕಷ್ಟು ಕೆಲಸ ಇದೆ. ನಿರುದ್ಯೋಗ ಕಡಿಮೆ ಮಾಡುವ ಕೆಲಸವಿದೆ, ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸವಿದೆ. ಆದರೆ ಇವರು ಅದನ್ನೆಲ್ಲಾ ಬಿಟ್ಟು ಟ್ರೈನ್‌ನ ಹೆಸರು ಬದಲಾಯಿಸಿಕೊಂಡು ಕುಳಿತಿದ್ದಾರೆ. ಟಿಪ್ಪುಸುಲ್ತಾನ ಇತಿಹಾಸದ ಒಂದು ಭಾಗ. ಯಾರು ಒಪ್ಪುತ್ತಾರೋ ಬಿಡುತ್ತಾರೋ. ಅದನ್ನು ಬದಲಾಯಿಸುವುದರಿಂದ ಇತಿಹಾಸವನ್ನು ಅಳಿಸಿಹಾಕೋಕೆ ಆಗಲ್ಲ, ಎಂದು ಕಾಂಗ್ರೆಸ್ ನಾಯಕ ಡಾ. ಜಿ ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ರಾಜಕೀಯ ಕಾರಣದಿಂದ ತೆಗೆದಿದ್ದರೆ ಅದನ್ನು ವಾಪಸ್ ಪಡೆಯಬೇಕು ಟಿಪ್ಪು ಸುಲ್ತಾನ್ ಹೆಸರನ್ನು ಮತ್ತೆ ಇಡಬೇಕು ಎಂದು ಆಗ್ರಹ ಮಾಡ್ತೀನಿ ಎಂದು ಪರಮೇಶ್ವರ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.