
ಹಾವೇರಿ, (ಆ.28): ಅಲ್ಪ ಸಮಯದಲ್ಲಿ ದೊಡ್ಡ ಸಾಧನೆ ಮಾಡೋ ವಿಚಾರವಿದೆ. ಕಡಿಮೆ ಅವಧಿಯಲ್ಲಿ ಬಡವರು, ದುಡಿಯುವ ವರ್ಗ ಸೇರಿದಂತೆ ಹಿಂದುಳಿದವರ ಜೀವನ ಮಟ್ಟವನ್ನು ಬದಲಾವಣೆ ಮಾಡಬಲ್ಲೆ ಎನ್ನುವ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.
ಹಾವೇರಿಯಲ್ಲಿ ಇಂದು (ಆ.28) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದ ತಿಂಗಳ ಆಡಳಿತದ ಬಗ್ಗೆ ನೀವೇ ವಿಶ್ಲೇಷಣೆ ಮಾಡಿ. ಉತ್ತಮ ಆಡಳಿತ ಕೊಟ್ರೆ ಬಹಳ ವರ್ಷದ ಸಮಸ್ಯೆಗಳು ಬಗೆಹರಿಯುತ್ತವೆ. ಜನರ ಕೆಲಸಗಳು ಕಚೇರಿಗಳಲ್ಲಿ ತುರ್ತಾಗಿ ಆಗಬೇಕು ಎನ್ನುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದರು.
ಮೈಸೂರು ಪ್ರಕರಣದ ಆರೋಪಿಗಳಿಗೆ ಡ್ರಿಲ್, ಕಂಗನಾ ಸ್ಟೈಲಿಶ್ ಲುಕ್ ವೈರಲ್; ಆ.28ರ ಟಾಪ್ 10 ಸುದ್ದಿ!
ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ ಆಗಬೇಕು. ಅವು ಹೊಸ ಶಿಕ್ಷಣ ನೀತಿಯಲ್ಲಿವೆ. ಆದ್ದರಿಂದ ದೇಶದಲ್ಲೇ ನಾವೆ ಮೊದಲು ಹೊಸ ಶಿಕ್ಷಣ ನೀತಿ ಜಾರಿ ಮಾಡ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಸಾಕಷ್ಟು ಉದ್ಯೋಗ ಸೃಷ್ಟಿಸುವ ಯೋಜನೆ ಮಾಡ್ತಿದ್ದೇವೆ. ಟೆಕ್ಸ್ ಟೈಲ್ ಪಾರ್ಕ್, ಮೆಗಾ ಟೆಕ್ಸ್ ಟೈಲ್ ಗಳನ್ನ ಮಾಡೋ ಬಗ್ಗೆ ಮೊನ್ನೆ ದೆಹಲಿಗೆ ಹೋದಾಗ ಚರ್ಚೆ ಮಾಡಿದ್ದೇನೆ. ಇಡೀ ರಾಜ್ಯದಲ್ಲಿ ಡಿಜಿಟಲೀಕರಣ ಮಾಡೋ ವಿಚಾರವಿದೆ. ಇದಕ್ಕೆ ಈಗಾಗಲೆ ಹಲವು ಕ್ರಮಗಳನ್ನು ಕೈಗೊಂಡಿದ್ದೇವೆ ಎಂದು ರಾಜ್ಯದ ಅಭಿವೃದ್ಧಿಯ ಕನಸುಗಳನ್ನು ಬಿಚ್ಚಿಟ್ಟರು.
ಇನ್ನು ಇದೇ ತಮ್ಮ ಜಿಲ್ಲೆ ಬಗ್ಗೆ ಪ್ರತಿಕ್ರಿಯಿಸಿ, ಹಾವೇರಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಮಾಡೋ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗ್ತಿದೆ. ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ಕೂಡ ಆಗಲಿದೆ. ನಮ್ಮ ಹಾವೇರಿ ಜಿಲ್ಲೆಯಲ್ಲಿ ಪ್ರತಿದಿನ ಎರಡು ಲಕ್ಷ ಲೀಟರ್ ವರೆಗೆ ಹಾಲು ಉತ್ಪಾದನೆ ಆಗುತ್ತದೆ. ಇಲ್ಲಿ ಉತ್ಪಾದನೆಯಾಗುವ ಹಾಲು ಸಂಸ್ಕರಣೆಯಾಗಿ ರಾಜ್ಯಾದ್ಯಂತ ಮಾರಾಟ ಆಗಲು ಅನುಕೂಲ ಆಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.