ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಇನ್ನೂ ಕರೆದಿಲ್ಲ: ಸಿಎಂ ಬೊಮ್ಮಾಯಿ

Published : Apr 27, 2022, 12:49 PM IST
ಸಚಿವ ಸಂಪುಟ ವಿಸ್ತರಣೆಗೆ ವರಿಷ್ಠರು ಇನ್ನೂ ಕರೆದಿಲ್ಲ: ಸಿಎಂ ಬೊಮ್ಮಾಯಿ

ಸಾರಾಂಶ

*   ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲಾಗುವುದು *   ಭಗೀರಥನಾಗುವ ಕನಸಿಲ್ಲ *  ಮಾಸ್ಕ್‌ ಧರಿಸುವುದು ಕಡ್ಡಾಯ  

ವಿಜಯಪುರ(ಏ.27): ಸಚಿವ ಸಂಪುಟ ವಿಸ್ತರಣೆಗೆ(Cabinet Expansion) ವರಿಷ್ಠರು ಇನ್ನೂ ಕರೆದಿಲ್ಲ. ದೆಹಲಿಯಲ್ಲಿ ನಿರ್ಣಯವಾದ ನಂತರ ತಿಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಸಂಪುಟ ವಿಸ್ತರಣೆ ಕುರಿತಾದ ಪ್ರಶ್ನೆಗೆ ಸ್ಪಷ್ಟನೆ ನೀಡಿದರು.

ಜಿಲ್ಲೆಯ ತಾಳಿಕೋಟೆ(Talikoti) ತಾಲೂಕಿನ ಕೊಡಗಾನೂರ ಗ್ರಾಮದಲ್ಲಿ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ವರಿಷ್ಠರು ಇನ್ನೂ ಸಚಿವ ಸಂಪುಟ ವಿಸ್ತರಣೆ ಬಗ್ಗೆ ದಿನಾಂಕ ನಿಗದಿಪಡಿಸಿಲ್ಲ. ನೀವೇ ದಿನಾಂಕ ನಿಗದಿಪಡಿಸಬೇಕು ಎಂದು ಪತ್ರಕರ್ತರಿಗೆ ಹೇಳಿದರು.

ಮುತ್ತಿಡಲು ಹೋದ ಸಿಎಂಗೆ ಹಾಯಲು ಬಂದ ಗೋವು: ಅಪಾಯದಿಂದ ಪಾರಾದ ಬೊಮ್ಮಾಯಿ..!

ವಿಜಯಪುರ(Vijayapura) ಜಿಲ್ಲೆಯ ಮೂವರು ಶಾಸಕರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂದು ಸಿಎಂ ಅವರ ಗಮನ ಸೆಳೆದಾಗ, ಸಚಿವ ಸಂಪುಟ ವಿಸ್ತರಣೆಯಾದಲ್ಲಿ ರಾಜ್ಯದ(Karnataka0 ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡಲು ಪ್ರಯತ್ನಿಸಲಾಗುವುದು ಎಂದರು.

ರಾಜ್ಯದಲ್ಲಿ ಇದೀಗ ಕೋವಿಡ್‌(Covid-19) ಪ್ರಕರಣಗಳು ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾಗಿವೆ. ಕೋವಿಡ್‌ ಅಲ್ಪ ಪ್ರಮಾಣದಲ್ಲಿ ಹೆಚ್ಚಳವಾದರೆ ಗಾಬರಿಯಾಗುವ ಅಗತ್ಯವಿಲ್ಲ. ಮತ್ತೆ ಗಡಿ ಭಾಗದಲ್ಲಿ ಕೋವಿಡ್‌ ನಿಯಂತ್ರಣಕ್ಕೆ ಕಟ್ಟೆಚ್ಚರ ವಹಿಸಲಾಗುವುದು ಎಂದ ಅವರು, ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಡ್‌ ಸ್ಥಿತಿಗತಿ ಕುರಿತು ವಿಡಿಯೋ ಕಾನ್ಫಫರೆನ್ಸ್‌ ನಡೆಸಲಿದ್ದಾರೆ. ಕೋವಿಡ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕೈಗೊಂಡ ಕ್ರಮಗಳ ಕುರಿತು ಅವರ ಗಮನಕ್ಕೆ ತರಲಾಗುವುದು ಎಂದರು.

ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಹೆಚ್ಚಿಸಲಾಗುವುದು. ಮಹಾರಾಷ್ಟ್ರ(Maharashtra) ಮತ್ತು ಕೇರಳ(Kerala) ಗಡಿ ಭಾಗಗಳಲ್ಲಿ ತಪಾಸಣೆ ಮತ್ತು ಎಲ್ಲ ಸುರಕ್ಷತೆ ಕ್ರಮಗಳನ್ನು ಅನುಸರಿಸಲಾಗುವುದು ಎಂದೂ ಅವರು ಹೇಳಿದರು.
ಇತ್ತೀಚೆಗೆ ನೆರೆಯ ದೇಶಗಳಲ್ಲಿ ಕೊರೋನಾ(Coronavirus) ಉಲ್ಬಣಗೊಂಡಿದೆ. ಭಾರತ ನೆರೆಯ ದೇಶಗಳಾದ ಥಾಯ್ಲೆಂಡ್‌, ಇಂಡೋನೇಷ್ಯಾ ಹಾಗೂ ಚೈನಾ ದೇಶಗಳಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಭಾರತದಲ್ಲಿಯೂ ಪ್ರಕರಣ ಸಂಖ್ಯೆ ಹೆಚ್ಚಳವಾಗಿರುವುದರಿಂದ ಪ್ರಧಾನಿ ನರೇಂದ್ರ ಮೋದಿ(Nranendra Modi) ಅವರು ಮುಂಜಾಗ್ರತೆ ವಹಿಸಿ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದ್ದಾರೆ ಎಂದು ಹೇಳಿದರು.

Covid 19 Cases ಕೊರೋನಾ ಭೀತಿ, ಎಲ್ಲಾ ರಾಜ್ಯ ಸಿಎಂ ಜೊತೆ ಇಂದು ಪ್ರಧಾನಿ ಮೋದಿ ಅಲರ್ಟ್ ಸಭೆ!

ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಕೆಲವು ಕೊರೋನಾ ಸೂಕ್ತ ನಡವಳಿಕೆಗಳನ್ನು ಪುನಃ ಜಾರಿಗೊಳಿಸಲು ಸೂಚಿಸಲಾಗಿದೆ. ಮಾಸ್ಕ್‌(Mask) ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಲಾಗಿದೆ. ಎಲ್ಲರೂ ಇದನ್ನು ಪಾಲಿಸಿದರೆ ಉತ್ತಮ. ಇದುವರೆಗೆ ಆಸ್ಪತ್ರೆಗೆ ಯಾರೂ ದಾಖಲಾಗಿಲ್ಲ ಎಂದು ಹೇಳಿದರು.

ಭಗೀರಥನಾಗುವ ಕನಸಿಲ್ಲ: ಸಿಎಂ

ತಮಗೆ ಭಗೀರಥನಾಗುವ ಕನಸಿಲ್ಲ. ಪ್ರಚಾರವೂ ಬೇಕಿಲ್ಲ. ಆದರೆ, ರೈತರು ನಲುಗಬಾರದೆನ್ನುವುದು ತಮ್ಮ ಕಾಳಜಿಯಾಗಿದೆ. ಬರದ ನೆಲಕ್ಕೆ ಹಸಿರು ಸೀರೆ ಉಡಿಸಬೇಕೆಂಬುದು ತಮ್ಮ ಕನಸಾಗಿದೆ. ಈ ಕಾರಣ- ಕಾಳಜಿಯಿಂದಾಗಿ ಏತ ನೀರಾವರಿಯಂತಹ ನೀರಾವರಿ ಯೋಜನೆಗಳು(Irrigation Projects) ರಾಜ್ಯದಲ್ಲಿ ಅನುಷ್ಠಾನಗೊಳ್ಳಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಳಗಾವಿ ಸುವರ್ಣ ಸೌಧ ಮುತ್ತಿಗೆಗೆ ಬಿಜೆಪಿ ಯತ್ನ; ವಿಜಯೇಂದ್ರ, ಅಶೋಕ ಸೇರಿ 50ಕ್ಕೂ ಅಧಿಕ ನಾಯಕರು ವಶಕ್ಕೆ
'ಅಹಿಂದ ಕಿಂಗ್ ಸಿದ್ದರಾಮಯ್ಯ' ಜೀವಂತ ಇರುವಾಗಲೇ ಪರ್ಯಾಯ ನಾಯಕತ್ವದ ಕೂಗು ಏಕೆ?: ಬೈರತಿ ಸುರೇಶ್