ರಾಜಭವನ ಹೆಸರು ಬದಲು ಅಸಾಧ್ಯ : ಸಿಎಂ ಸಿದ್ದರಾಮಯ್ಯ

Kannadaprabha News   | Kannada Prabha
Published : Dec 18, 2025, 06:24 AM IST
Siddaramaiah

ಸಾರಾಂಶ

ದ್ವೇಷ ರಾಜಕಾರಣ, ಹೆಸರು ಬದಲಿಸುವುದು ಮಾತ್ರ ಗೊತ್ತಿರುವ ಕೇಂದ್ರ ಸರ್ಕಾರ ರಾಜಭವನವನ್ನು ಲೋಕಭವನ ಎಂದು ಬದಲಿಸಲು ಹೊರಟಿದೆ. ರಾಜಭವನ ರಾಜ್ಯ ಸರ್ಕಾರದ ಆಸ್ತಿ. ಅದರ ಹೆಸರು ಬದಲಾವಣೆ ಸಾಧ್ಯವಿಲ್ಲ. ರಾಜಭವನ ಎಂದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಸುವರ್ಣ ವಿಧಾನಸೌಧ : ದ್ವೇಷ ರಾಜಕಾರಣ, ಹೆಸರು ಬದಲಿಸುವುದು ಮಾತ್ರ ಗೊತ್ತಿರುವ ಕೇಂದ್ರ ಸರ್ಕಾರ ರಾಜಭವನವನ್ನು ಲೋಕಭವನ ಎಂದು ಬದಲಿಸಲು ಹೊರಟಿದೆ. ರಾಜಭವನ ರಾಜ್ಯ ಸರ್ಕಾರದ ಆಸ್ತಿ. ಅದರ ಹೆಸರು ಬದಲಾವಣೆ ಸಾಧ್ಯವಿಲ್ಲ. ರಾಜಭವನ ಎಂದೇ ಇರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಜಿ ರಾಮ್‌ ಜಿ ಎಂದು ಬದಲಿಸುತ್ತಿರುವ ಕೇಂದ್ರದ ಕ್ರಮಕ್ಕೆ ಕಿಡಿ

ಇದೇ ವೇಳೆ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ) ಯೋಜನೆ ಹೆಸರನ್ನು ಜಿ ರಾಮ್‌ ಜಿ ಎಂದು ಬದಲಿಸುತ್ತಿರುವ ಕೇಂದ್ರದ ಕ್ರಮಕ್ಕೆ ಕಿಡಿಕಾರಿರುವ ಅವರು, ‘ಬಿಜೆಪಿಯವರಿಗೆ ಮೊದಲಿನಿಂದಲೂ ಮಹಾತ್ಮಗಾಂಧೀಜಿ, ಅಂಬೇಡ್ಕರ್, ಬಡವರನ್ನು ಕಂಡರೆ ಆಗುವುದಿಲ್ಲ’ ಎಂದು ಹೇಳಿದರು.

ಸುವರ್ಣಸೌಧದ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ರಾಜಭವನ ಎಂಬುದು ಮೊದಲಿನಿಂದಲೂ ಬಂದಿರುವ ಹೆಸರು. ಅದನ್ನು ಈಗ ಲೋಕಭವನ ಎಂದು ಬದಲಿಸಲು ಹೊರಟಿದ್ದಾರೆ. ರಾಜಭವನ ಎಂಬುದನ್ನು ಬದಲಿಸಲು ಸಾಧ್ಯವಿಲ್ಲ, ಲೋಕಭವನ ಎಂದೂ ಮಾಡಲಾಗಲ್ಲ. ರಾಜ್ಯಪಾಲರು ಬೇರೆ ಇರಬಹುದು. ಆದರೆ ರಾಜಭವನ ರಾಜ್ಯ ಸರ್ಕಾರದ ಆಸ್ತಿ. ಹೀಗಾಗಿ ರಾಜಭವನ ಎಂದೇ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ನರೇಗಾ ಯೋಜನೆಯನ್ನು ‘ಜಿ ಮೋದಿ ಜಿ’ ಮಾಡ್ತಾರೆ:

ದೇಶಾದ್ಯಂತ ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆ (ಎಂ-ನರೇಗಾ) ಹೆಸರನ್ನು ಬದಲಿಸಿ ಜಿ ರಾಮ್‌ ಜಿ ಎಂದು ಬದಲಿಸಿದ್ದಾರೆ. ಇವರಿಗೆ ಮೊದಲಿನಿಂದಲೂ ಮಹಾತ್ಮಗಾಂಧಿ, ಅಂಬೇಡ್ಕರ್‌ ಹಾಗೂ ಬಡವರನ್ನು ಕಂಡರೆ ಆಗುವುದಿಲ್ಲ. ನಮ್ಮ ಐದು ಗ್ಯಾರಂಟಿ ಯೋಜನೆಯನ್ನು ವಿರೋಧಿಸಿದವರು ಅವರು. ಈಗ ಅವುಗಳನ್ನೇ ನಕಲು ಮಾಡುತ್ತಿದ್ದಾರೆ ಎಂದರು.

ಈ ಹಿಂದೆ ಯೋಜನಾ ಆಯೋಗವನ್ನು ನೀತಿ ಆಯೋಗ ಎಂದು ಮಾಡಿದರು. ಹಲವು ಹೆಸರು ಬದಲಿಸಿದ್ದು, ಹೆಸರು ಬದಲಾವಣೆ, ದ್ವೇಷ ರಾಜಕೀಯ ಬಿಟ್ಟು ಬೇರೇನೂ ಗೊತ್ತಿಲ್ಲ. ಚಿನ್ನದ ಬೆಲೆ ಗಗನಕ್ಕೆ ಹೋಗಿದೆ ಬೆಲೆ ಏರಿಕೆ, ಹಣದುಬ್ಬರ ಕಡಿಮೆ ಮಾಡುವ ಪ್ರಯತ್ನ ಮಾಡಲ್ಲ ಎಂದು ಹರಿಹಾಯ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಎಸ್ಸಿ ಉಪ ವರ್ಗೀಕರಣ ಬಿಲ್‌ ವಿಧಾನಸಭೆಯಲ್ಲಿ ಮಂಡನೆ
ವಿಧಾನಸಭೆಯಲ್ಲಿ ಗೃಹಲಕ್ಷ್ಮೀ ಹಣ ಪಾವತಿ ಗದ್ದಲ : ಗೃಹ ಲಕ್ಷ್ಮೀ ಕ್ಷಮೆಯಾಚನೆ