ಬಿಬಿಎಂಪಿ ಚುನಾವಣೆಗೆ ಸಜ್ಜಾಗಿ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ತಮ್ಮ ಕಾರ್ಯಕರ್ತರಿಗೆ ಕರೆ ನೀಡಿದ್ದರು. ಇದರ ಬೆನ್ನಲ್ಲೇ ಜಮಿರ್ ಅಹ್ಮದ್ ಖಾನ್ ಆಪರೇಷನ್ ಹಸ್ತ ಮಾಡಿದ್ದಾರೆ.
ಬೆಂಗಳೂರು, (ಜ.19): ಮೂಲ ಕಾಂಗ್ರೆಸ್ಸಿಗರು. ವಲಸೆ ಕಾಂಗ್ರೆಸ್ಸಿಗರು ಎಂಬ ಬಣ ರಾಜಕಾರಣದಿಂದ ಸೂಕ್ತ ಕರ್ನಾಟಕ ಕಾಂಗ್ರೆಸ್‌ಗೆ ಸೂಕ್ತ ನಾಯಕನಿಲ್ಲದೇ ಸೊರಗುತ್ತಿದೆ.
ಜೆಡಿಎಸ್ ಏಕಾಂಗಿ ಸ್ಪರ್ಧೆಗೆ ಸಜ್ಜು : ಶೇ.50ರಷ್ಟು ಟಿಕೆಟ್ ಮಹಿಳೆಯರಿಗೆ
ಆದ್ರೆ, ಅತ್ತ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಶನಿವಾರ ತಮ್ಮ ಕ್ಷೇತ್ರವಾದ ಚಾಮರಾಜಪೇಟೆಯಲ್ಲಿ ಜೆಡಿಎಸ್ ನಾಯಕರನ್ನು ಕಾಂಗ್ರೆಸ್‌ಗೆ ಸೆಳೆಯುವಲ್ಲಿ ಜಮೀರ್ ಯಶಸ್ವಿಯಾಗಿದ್ದಾರೆ.
ಚಾಮರಾಜಪೇಟೆ ಜೆಡಿಎಸ್ ನಾಯಕ ಅಲ್ತಾಫ್ ಖಾನ್ ಮತ್ತು ಅವರ ತಂಡವನ್ನು ಜಮೀರ್ ಅಹ್ಮದ್ ಖಾನ್ ಆಪರೇಷನ್ ಹಸ್ತ ಮಾಡಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಸಮ್ಮುಖದಲ್ಲಿ ಅಲ್ತಾಫ್ ಖಾನ್ ಮತ್ತ ಅವರ ತಂಡ ಕಾಂಗ್ರೆಸ್ ಸೇರ್ಪಡೆಯಾಗಿದೆ. ಈ ಮೂಲಕ ಜೆಡಿಎಸ್‌ಗೆ ಹಿನ್ನೆಡೆಯಾಗಿದೆ.
ಮೊನ್ನೇ ಅಷ್ಟೇ ಬಿಬಿಎಂಪಿ ಚುನಾವಣೆಗೆ ರೆಡಿಯಾಗಿ ಎಂದು ದೇವೇಗೌಡ್ರು ತಮ್ಮ ಕಾರ್ಯಕರ್ತರಿಗೆ ಕರೆ ಕೊಟ್ಟಿದ್ದರು. ಆದ್ರೆ, ಶನಿವಾರ ಜಮೀರ್ ಅಹ್ಮದ್ ಖಾನ್ ಚಾಮರಾಜಪೇಟೆಯಲ್ಲಿ ಅಷ್ಟು ಇಷ್ಟು ಉಳಿದಿದ್ದ ಜೆಡಿಎಸ್ ನೆಲೆಯನ್ನು ಇಲ್ಲದಂತೆ ಮಾಡಿದ್ದಾರೆ.
ಇದೇ ವೇಳೆ ಅಲ್ತಾಫ್ ಖಾನ್ ಮನೆಯಲ್ಲಿ ಭರ್ಜರಿ ಔತಣಕೂಟ ಏರ್ಪಡಿಸಲಾಗಿತ್ತು.