ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಮನೆ ಮೇಲೆ ಬೆಳ್ಳಂ ಬೆಳಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐವರು ಅಧಿಕಾರಿಗಳ ತಂಡ ಈ ದಾಳಿ ನಡೆಸಿದೆ. ಡಿಕೆಶಿ ಮಾತ್ರವಲ್ಲದೇ ಸಹೋದರ, ಬೆಂಗಳೂರು ಗ್ರಾಮೀಣ ಸಂಸದ ಡಿಕೆ ಸುರೇಶ್ ಮನೆ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿ ಬೆನ್ನಲ್ಲೇ ಅವರ ವಕೀಲ ವಿಕ್ರಮ್ ಕೂಡಾ ಡಿಕೆಶಿ ನಿವಾಸಕ್ಕೆ ಆಗಮಿಸಿದ್ದಾರೆ. ಬೆಂಗಳೂರಿನ ಮನೆ ಹಾಗೂ ಮುಂಬೇ ಮನೆಯಲ್ಲಿ ಕ್ರಮವಾಗಿ 50 ಲಕ್ಷ ಹಾಗೂ 5 ಕೋಟಿ ರೂ. ಪತ್ತೆಯಾಗಿದೆ ಎಂಬ ಸುದ್ದಿ ಇದೆ. ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಇಲ್ಲಿದೆ.

04:38 PM (IST) Oct 05
"
04:38 PM (IST) Oct 05
"
04:38 PM (IST) Oct 05
"
03:55 PM (IST) Oct 05
03:55 PM (IST) Oct 05
02:39 PM (IST) Oct 05
ಡಿಕೆಶಿ ನಿವಾಸದಲ್ಲಿ ಚಿನ್ನಾಭರಣ ವಶಕ್ಕೆ
ಮಗಳ ಮದುವೆಗಾಗಿ ಖರೀದಿ ಮಾಡಿದ್ದ ಚಿನ್ನಾಭರಣ. ಚಿನ್ನಾಭರಣಕ್ಕೆದಾಖಲೆಗಳು ಇದ್ಯಾ ಎಂದು ಸಿಬಿಐ ಪರಿಶೀಲನೆ. ದಾಖಲೆಗಳು ಒದಗಿಸದಿದ್ದಲ್ಲಿ ಆಭರಣಗಳನ್ನ ವಶಕ್ಕೆ ಪಡೆಯುವ ಸಾಧ್ಯತೆ.
01:40 PM (IST) Oct 05
ಡಿಕೆಶಿ ಬ್ರದರ್ಸ್ ಮನೆಗಳ ಮೇಲೆ ಸಿಬಿಐ ದಾಳಿ ವಿಚಾರ
ಡಿಕೆಶಿ ಮನೆಯ ಮೊದಲ ಮತ್ತು ಮೂರನೇ ಮಹಡಿಯಲ್ಲಿ ಪರಿಶೀಲನೆ
ಡಿಕೆ ಸುರೇಶ್ ಮನೆಯಲ್ಲೂ ಸಿಬಿಐ ಪರಿಶೀಲನೆ
ಎಂಟು ಜನ ಸಿಬಿಐ ಅಧಿಕಾರಿಗಳಿಂದ ನಡೆಯುತ್ತಿರುವ ಶೋಧ ಕಾರ್ಯ
ದೆಹಲಿಯಿಂದ ಬಂದಿರುವ ತಂಡದಿಂದ ಡಿಕೆಶಿ ಮನೆಯಲ್ಲಿ ಶೋಧ ಕಾರ್ಯ
ಇನ್ನೇನು ಕೆಲ ಹೊತ್ತಿನಲ್ಲಿ ಪಂಚನಾಮೆ ಕಾರ್ಯ ಶುರು ಮಾಡಲಿರುವ ಸಿಬಿಐ ಅಧಿಕಾರಿಗಳು
ಬೆಂಗಳೂರು ಹಾಗೂ ದೆಹಲಿ ಸಿಬಿಐ ಅಧಿಕಾರಿಗಳು ಜಂಟಿಯಾಗಿ ನಡೆಸಿರುವ ದಾಳಿ
01:29 PM (IST) Oct 05
"
01:28 PM (IST) Oct 05
"
01:17 PM (IST) Oct 05
ಹುಬ್ಬಳ್ಳಿ; ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮನೆ ಮೇಲಿನ ಸಿಬಿಐ ದಾಳಿ ಖಂಡಿಸಿ ಹು-ಧಾ ಮಹಾನಗರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ವತಿಯಿಂದ ಹುಬ್ಬಳ್ಳಿಯ ಅಂಬೇಡ್ಕರ್ ವೃತ್ತದಲ್ಲಿ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ, ಡಿಕೆಶಿ ಚುನಾವಣಾ ತಂತ್ರಕ್ಕೆ ಹೆದರಿ ಅವರ ವಿರುದ್ಧ ಕೇಂದ್ರ ಸರ್ಕಾರ ಸೇಡಿನ ರಾಜಕೀಯ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
12:42 PM (IST) Oct 05
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮೇಲೆ ನಡೆದಿರುವ ಸಿಬಿಐ ದಾಳಿ ರಾಜಕೀಯ ಪ್ರೇರಿತವಲ್ಲ ಎಂದು ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈಗಾಗಲೇ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಹಾಗೂ ಇಡಿ ದಾಳಿ ನಡೆದಿತ್ತು. ಅದರ ಮುಂದುವರಿದ ಭಾಗವಾಗಿ ಸಿಬಿಐ ದಾಳಿ ನಡೆದಿರಬಹುದು. ಹೀಗಾಗಿ ಇದಕ್ಕೆ ರಾಜಕೀಯ ಬಣ್ಣ ಬಳಿಯುವುದು ಬೇಡ ಎಂದರು.
ಸಮಾಜದಲ್ಲಿ ವ್ಯಕ್ತಿಗಿಂತ ವ್ಯವಸ್ಥೆಯೇ ದೊಡ್ಡದು. ಇದರಲ್ಲಿ ನಂಬಿಕೆ ಹೆಚ್ಚುವ ರೀತಿಯಲ್ಲಿ ಸಿಬಿಐ ತನಿಖೆ ನಡೆಯುತ್ತಿದೆ. ಸತ್ಯ ಏನೆಂದು ಹೊರಬರಲಿ. ಇನ್ನು ತನಿಖೆಗೆ ಸಹಕಾರ ನೀಡುವುದಾಗಿ ಸ್ವತಃ ಡಿಕೆಶಿ ಹೇಳಿದ್ದಾರೆ. ಅದರಂತೆ ಅವರು ಸಹಕಾರ ನೀಡಲಿ. ತಮ್ಮ ಪ್ರಾಮಾಣಿಕತೆಯನ್ನು ಸಾಬೀತು ಮಾಡಲು ಇದೊಂದು ಅವಕಾಶ. ಸಿಕ್ಕಿದ ಅವಕಾಶವನ್ನು ಅವರು ಸದ್ಬಳಕೆ ಮಾಡಿಕೊಳ್ಳಲಿ ಎಂದು ಡಿಸಿಎಂ ಹೇಳಿದರು.
ಇಂಥ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾತನಾಡುವುದು ಸರಿಯಲ್ಲ. ಇದೊಂದು ರಾಜಕೀಯ ಪ್ರೇರಿತ ಎಂದು ಹೇಳುವ ಮೂಲಕ ಕೆಲವರು ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಉಪ ಚುನಾವಣೆಗೂ ಈ ದಾಳಿಗೂ ಯಾವುದೇ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"
12:34 PM (IST) Oct 05
12:24 PM (IST) Oct 05
ಮನೆಯಿಂದ ಹೊರಡಲು ಸಿದ್ದತೆ ಮಾಡುಕೊಳ್ತಾ ಇರುವ ಸಿಬಿಐ ಅಧಿಕಾರಿಗಳು.
ಮನೆಯಲ್ಲಿ ದಾಳಿ ವೇಳೆ ದೊರೆತಿರುವ ವಸ್ತುಗಳ ಸಮೇತ ತೆರಳಲಿರುವ ಸಿಬಿಐ ಅಧಿಕಾರಿಗಳು
12:02 PM (IST) Oct 05
"
11:57 AM (IST) Oct 05
ಡಿಕೆಶಿ ಮನೆ ಮೇಲಿನ ದಾಳಿ ವಿಚಾರ....
ದಾಳಿಯ ಬಗ್ಗೆ ಸಿಎಂಗೆ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ.
ದಾಳಿ ಬಗ್ಗೆ 9 ಗಂಟೆಗೆ ಸಿಬಿಐನಿಂದ ಅಧಿಕೃತ ಮಾಹಿತಿ ನಮಗೆ ಗೊತ್ತಾಗಿದೆ.
ಸಿಬಿಐ ಅಧಿಕಾರಿಗಳ ಅಧಿಕೃತ ಮಾಹಿತಿ ಮೇರೆಗೆ ಡಿಕೆ ಬ್ರದರ್ಸ್ ನಿವಾಸ ಸೇರಿದಂತೆ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತೆ ಹೆಚ್ಚಿಸಿದ್ದೇವೆ.
ಡಿಕೆಶಿ ಸ್ವಕ್ಷೇತ್ರ ಸೇರಿದಂತೆ ರಾಮನಗರ ಜಿಲ್ಲೆಯ ಹಲವೆಡೆ ಸೂಕ್ತ ಭದ್ರತೆ ಕಲ್ಪಿಸಲು ಎಸ್‌ಪಿಗೆ ಸೂಚಿಸಲಾಗಿದೆ, ಎಂದು ಮಾಹಿತಿ ನೀಡಿದ ಗೃಹ ಸಚಿವ.
ಸಿಎಂಗೆ ದೂರವಾಣಿ ಮೂಲಕ ಸಂಪೂರ್ಣ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ
ಗೃಹ ಸಚಿವರ ಮಾಹಿತಿ ಬಂದ ಮರುಕ್ಷಣದಲ್ಲೇ ದೇವನಹಳ್ಳಿ ರೆಸಾರ್ಟ್‌ನಲ್ಲಿ ಮೊಮ್ಮಗನ ಹುಟ್ಟುಹಬ್ಬದ ಆಚರಣೆಯಲ್ಲಿ ಬ್ಯುಸಿ ಇದ್ದ ಸಿಎಂ ಬೆಂಗಳೂರಿಗೆ.
ಕಾವೇರಿ ನಿವಾಸಕ್ಕೆ ಆಗಲಿಸಿರುವ ಸಿಎಂ ಯಡಿಯೂರಪ್ಪ....
11:38 AM (IST) Oct 05
ಡಿಕೆಶಿ ಬಂಧನ ಸಾಧ್ಯತೆ ಹಿನ್ನೆಲೆಯಲ್ಲಿ ಸಿಬಿಐ ಕಛೇರಿ ಮುಂದೆ ಪೊಲೀಸರ ನಿಯೋಜನೆ. ಸಿಬಿಐ ಕಛೇರಿಗೆ ಡಿಕೆಶಿ ಕರೆ ತರುವ ಸಾಧ್ಯತೆ. ಒಂದು ಕೆಎಸ್ ಆರ್ ಪಿ ತುಕಡಿ, ಹೆಬ್ಬಾಳ ಪೊಲೀಸ್ ಠಾಣಾ ಹಾಗೂ RT ನಗರ ಪೊಲೀಸ್ ಠಾಣಾ ಸಿಬ್ಬಂದಿ ನಿಯೋಜನೆ.
ಶಿವಕುಮಾರ್ ಮುಂಬೈ ಮನೆಯಲ್ಲಿ 3 ಕೋಟಿ ಹಾಗೂ ಬೆಂಗಳೂರಿನ ದಿಲ್ಲಿ ಮನೆಯಲ್ಲಿ 50 ಲಕ್ಷ ವಶ ಪಡಿಸಿಕೊಂಡ ಸಿಐಬಿ ಅಧಿಕಾರಿಗಳು.
11:35 AM (IST) Oct 05
ಡಿಕೆಶಿ ನಿವಾಸದ ಮೇಲಿನ ಸಿಬಿಐ ದಾಳಿ ಬಗ್ಗೆ ಅಕ್ರೋಶ ವ್ಯಕ್ತಪಡಿಸಿರುವ ಅವರ ವಯೋವೃದ್ಧ ತಾಯಿ, ಸರ್ಕಾರಕ್ಕೆ ನನ್ನ ಮಗನ ಮೇಲೆ ಬಹಳ ಪ್ರೀತಿ. ಹಾಗಾಗೇ ಒದೇ ಪದೇ ದಾಳಿ ನಡೆಸುತ್ತಿದ್ದಾರೆ ಎನ್ನುವ ಮೂಲಕ ತನಿಖಾ ಸಂಸ್ಥೆಗಳ ಮೇಲೆ ಕಿಡಿ ಕಾರಿದ್ದಾರೆ.
11:28 AM (IST) Oct 05
Central Bureau of Intimidation ಅಂದರೆ ಕೇಂದ್ರೀಯ ಎಚ್ಚರಿಕಾ ದಳವೆಂದ ಹಿರಿಯ ಕಾಂಗ್ರೆಸ್ಸಿಗ ಜೈರಾಮ್ ರಮೇಶ್
11:26 AM (IST) Oct 05
ಡಿಕೆ ಸಹೋದರರ ಮನೆ ಮೇಲೆ ದಾಳಿ. ದೆಹಲಿ ರಿಜಿಸ್ಟ್ರೇಷನ್ ಗಾಡಿಯಲ್ಲಿ ಬಂದಿರುವ ಸಿಬಿಐ ಅಧಿಕಾರಿಗಳು.
11:22 AM (IST) Oct 05
11:20 AM (IST) Oct 05
ಡಿಕೆಶಿ ಮನೆ ಮೇಲಿನ ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಆಕ್ಷೇಪಾರ್ಹ ಹೇಳಿಕೆ ಕೊಡಬೇಡಿ. ಎರಡು ಉಪಚುನಾವಣೆಗಳು ಇವೆ. ವಿವಾದಾತ್ಮಕ ಹೇಳಿಕೆಯಿಂದ ದೂರ ಇರುವಂತೆ ಸೂಚನೆ..
ಇದು ಸಿಬಿಐ ದಾಳಿ, ಪಕ್ಷಕ್ಕೂ ದಾಳಿಗೂ ಸಂಬಂಧ ಇಲ್ಲ. ರಾಜಕೀಯವಾಗಿ ದಾಳ ಮಾಡಿಕೊಂಡ್ರೆ ಪ್ರತಿ ದಾಳ ಉರುಳಿಸುವಾಗ ಆಕ್ಷೇಪಾರ್ಹದಿಂದ ದೂರ ಇರಬೇಕು. ಎಚ್ಚರಿಕೆಯಿಂದ ಪ್ರತಿಕ್ರಿಯಿಸಿ ಎಂದಿರುವ ಹೈಕಮಾಂಡ್.
11:17 AM (IST) Oct 05
ಡಿಕೆಶಿ ಬ್ರದರ್ಸ್ ಮನೆ ಮೇಲೆ ದಾಳಿ ಖಂಡಿಸಿ ಸರಣಿ ಟ್ವೀಟ್ ಮಾಡುತ್ತಿರುವ ದಿನೇಶ್ ಗುಂಡೂರಾವ್
11:15 AM (IST) Oct 05
11:10 AM (IST) Oct 05
ಡಿಕೆ ಶಿವಕುಮಾರ್ ಮನೆಯ ಮುಂಭಾಗದ ಪ್ರತಿಭಟನೆ ಕಾವು
ಯೂತ್ ಕಾಂಗ್ರೆಸ್ ಸದಸ್ಯರಿಂದ ಪ್ರತಿಭಟನ
ಇದೊಂದು ರಾಜಕೀಯ ಪ್ರೇರಿತ ದಾಳಿ ಅನ್ನೋದಾಗಿ ಆಕ್ರೋಶ.
ಪ್ರತಿಭಟನೆ ನಿಕ್ಲಿಸುವಮನತೆ ಪೊಲೀಸರ ಮನವಿ.
ಪೋಲಿಸರ ಮನವಿಗೆ ಬಗ್ಗದೆ ರಸ್ತೆಯಲ್ಲೇ ಕುಳಿತು ಪ್ರತಿಭಟನೆ.
ಪ್ರತಿಭಟನೆಕಾರಾರನ್ನು ಅರೆಸ್ಟ್ ಮಾಡಿದ ಪೊಲೀಸರು.
11:05 AM (IST) Oct 05
ಡಿಕೆಶಿ ಮೇಲೆ ದಾಳಿ ಹೊಸದಲ್ಲ. ಹವಾಲಾ ಹಣ ಸಿಕ್ಕಿರುವ ಬಗ್ಗೆ ಹಿಂದಿನ ದಾಳಿಯಲ್ಲಿ ಗೊತ್ತಾಗಿತ್ತು.ಹೀಗಾಗಿ ತನಿಖೆ ಸಹ ಆಗ್ತಿದೆ. ಇವತ್ತಿನ ಸಿಬಿಐ ದಾಳಿ ರಾಜಕೀಯ ಉದ್ದೇಶದಿಂದ ಕೂಡಿಲ್ಲ. ಇಂತಹ ಆರೋಪ ಮಾಡುವ ಕಾಂಗ್ರೆಸ್ ನಾಯಕರ ಹೇಳಿಕೆ ಕಂಡು ಆಶ್ಚರ್ಯ ಆಯ್ತು. ಹಿಂದೆ ಯಡಿಯೂರಪ್ಪ ಮೇಲೂ ಸಹ ದಾಳಿ ಆಗಿತ್ತು. ಆಗ ಕಾಂಗ್ರೆಸ್ ನಾಯಕರು ಎನಂತ ಹೇಳಿಕೆ ಕೊಟ್ಟಿದ್ದರು? ಉಪ್ಪು ತಿಂದೋನೋ, ನೀರು ಕುಡಿಯಲೇಬೇಕು ಅಂತ ಹೇಳಿದ್ದರು.
ಕಾಂಗ್ರೆಸ್ ಗೊಂದು ಕಾನೂನು ಬೇರೆ ಇದೆಯಾ? ಡಿಕೆಶಿ ತನಿಖೆಗೆ ಒಳಗಾಗಲಿ. ಸೀತೆಯಂತೆ ಹೊರಗೆ ಬರಲಿ, ಎಂದು ವ್ಯಂಗವಾಗಿ ಪ್ರತಿಕ್ರಿಯೆ ನೀಡಿದ ಸಚಿವ ಕೆ ಎಸ್ ಈಶ್ವರಪ್ಪ.
11:01 AM (IST) Oct 05
10:58 AM (IST) Oct 05
ದಾಳಿ ವೇಳೆ 50 ಲಕ್ಷ ನಗದು ಪತ್ತೆ.
10:49 AM (IST) Oct 05
ಡಿಕೆ ಸುರೇಶ್ ಶರ್ಟ್ ನಲ್ಲಿಟ್ಟುಕೊಂಡಿದ್ದೇನು?
ಒಳಗಡೆ ದಾಳಿ ನಡೆಯುವ ವೇಳೆಯೇ ಹೊರಬಂದು ಆ ಲೆಟರ್ ಓದಿದ ಡಿಕೆ ಸುರೇಶ್.
ಲೆಟರ್ ಒಮ್ಮೆ ಕಣ್ಣಾಡಿಸಿ ಮತ್ತೆ ಶರ್ಟ್ ನೊಳಗೆ ಇಟ್ಟುಕೊಂಡು ಒಳಹೋದ ಡಿಕೆ ಸುರೇಶ್
10:47 AM (IST) Oct 05
17 ಜನ ಶಾಸಕರು ಹೋದ್ರಲಾ, ಅವ್ರು ಯಾರ ಮೇಲೂ ಯಾವ ಆರೋಪವೂ ಇಲ್ವಾ? ಡಿಕೆಶಿ ಪಕ್ಷದ ಶಿಸ್ತಿನ ಸಿಪಾಯಿ. ಅದನ್ನು ತಾಳಲಾರದೆ ಕಾಂಗ್ರೆಸ್ ಪಕ್ಷದ ಮೇಲೆ ಗದಾ ಪ್ರಹಾರ ಮಾಡ್ತಿದ್ದಾರೆ. ಕಾಂಗ್ರೆಸ್ ಕಚೇರಿಯಲ್ಲಿ 11 ಗಂಟೆಗೆ ಕಾರ್ಯಕ್ರಮ ಹಾಕಿಕೊಂಡಿದ್ವಿ. ಅದು ನಡೆಯುತ್ತೆ, ನಿಲ್ಲೋದಿಲ್ಲ. ರೇಡ್ ಬಗ್ಗೆ ನಾವೇನೂ ಮಾತಾಡಕ್ಕಾಗಲ್ಲ. ಕೋವಿಡ್ ಬಂದ ಸಂದರ್ಭದಲ್ಲಿ ಡಿಕೆಶಿ ಅಧ್ಯಕ್ಷರಾದ್ಮೇಲೆ ವಿಧಾನಸೌಧ ಬಾಗಿಕು ಹಾಕಿದ್ರೈ ಕಾಂಗ್ರೆಸ್ ಬಾಗಿಲು ಹಾಕಿರಲ್ಲಿಲ್ಲ. ತಾಳಲಾರದೆ ಕಾಂಗ್ರೆಸ್ ಧ್ವನಿ ನಿಷ್ಕ್ರಿಯ ಮಾಡಲು ಬಿಜೆಪಿ ಹುನ್ನಾರ ಇದು. ಬಿಜೆಪಿಯವ್ರು ಎಲ್ರೂ ಸತ್ಯ ಹರಿಶ್ಚಂದ್ರರಾ? ಅವ್ರು ಯಾರದ್ದೂ ತಪ್ಪೇ ಇಲ್ವಾ?
ಕಾಂಗ್ರೆಸ್ ಶಕ್ತಿ ದಮನ ಮಾಡಲು ಹೀಗೆ ಮಾಡ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷರಾಗ್ಲೀ, ಡಿಕೆ ಸುರೇಶ್ ಎದೆಗುಂದುವಂತಿಲ್ಲ. ಕಾಂಗ್ರೆಸ್ ಪಕ್ಷ ಅವರ ಜೊತೆಗಿದೆ, ಎಂದ ಮಾಜಿ ಸಂಸದ ಚಂದ್ರಪ್ಪ ಹೇಳಿಕೆ.
10:38 AM (IST) Oct 05
ಉಪಚುನಾವಣೆ ಸಂದರ್ಭದಲ್ಲಿ ರಾಜಕೀಯ ದುರುದ್ದೇಶವಿಟ್ಟುಕೊಂಡು ದಾಳಿ.
ನಮ್ಮ ನಾಯಕರು ಸಮರ್ಥರಿದ್ದಾರೆ, ಕಾನೂನು ಹೋರಾಟ ನಡೆಸುತ್ತಾರೆ.
ಈಡಿ ಆಯ್ತು. ಸಿಬಿಐ. ಐಟಿ ಆಯ್ತು ಈಗ ಮತ್ತೆ ಸಿಬಿಐ ದಾಳಿ ಮಾಡಿದ್ದಾರೆ.
ನಮ್ಮ ನಾಯಕರು ಸಮರ್ಥರು ಇದ್ದಾರೆ. ಅವರು ಹ್ಯಾಂಡಲ್ ಮಾಡ್ತಾರೆ.
ಅಹ್ಮದ್ ಪಟೇಲರ ಚುನಾವಣೆಯಲ್ಲೂ ದಾಳಿ ಮಾಡುತ್ತಿದ್ದಾರೆ:.ಲಕ್ಷ್ಮೀ ಹೆಬ್ಬಾಳ್ಕರ್
10:32 AM (IST) Oct 05
"
10:29 AM (IST) Oct 05
10:27 AM (IST) Oct 05
ಕೆಪಿಸಿಸಿ ಕಾರ್ಯಧ್ಯಕ್ಷ ಸಲಿಂ ಅಹ್ಮದ್ ಜೊತೆ ರಂಗನಾಥ್ ಡಿಕೆ ಶಿವಕುಮಾರ್ ಮನೆಗೆ. ತೆರಳುವ ಮುನ್ನ ಲಾಯರ್ ವಿಕ್ರಮ್ ಜೊತೆ ಚರ್ಚೆ ನಡೆಸಿದ ರಂಗನಾಥ್.
10:21 AM (IST) Oct 05
ಕೇಂದ್ರ ಸರ್ಕಾರ ಸಿಬಿಐನ ದುರ್ಬಳಕೆ ಮಾಡಿಕೊಂಡು ಡಿ.ಕೆ ಶಿವಕುಮಾರ್ ಹಾಗೂ ಬೆಂಗಳೂರು ಗ್ರಾಮೀಣ ಎಂಪಿ D.K ಸುರೇಶ್ ಅವರ ವಿರುದ್ಧ ದಾಳಿ ನಡೆಸಿರುವುದನ್ನು ಖಂಡಿಸಿ ಪ್ರತಿಭಟನೆ.
10:20 AM (IST) Oct 05
10:16 AM (IST) Oct 05
10:12 AM (IST) Oct 05
ಅರ್ಜಿ ವಜಾ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ಸಿಬಿಐ
ಇಂದು ಡಿ.ಕೆ ಶಿವಕುಮಾರ್ ಮನೆ ಮೇಲೆ ಸಿಬಿಐ ರೇಡ್
ಈಗಾಗಲೇ ED ವಿಚಾರಣೆ ಎದುರಿಸಿ ಹೈರಾಣಾಗಿರೋ ಡಿಕೆಶಿ
ಹೈಕೋರ್ಟ್ನಲ್ಲಿದೆ ಡಿಕೆಶಿಯ ಇನ್ನೊಂದು ಅರ್ಜಿ
10:09 AM (IST) Oct 05
ಸಿಬಿಐ ತನಿಖೆಗೆ ಅನುಮತಿ ನೀಡಿದ್ದ ರಾಜ್ಯ ಸರ್ಕಾರ..!
ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತನಿಖೆಗೆ ಅನುಮತಿ
ಅನುಮತಿ ಪ್ರಶ್ನಿಸಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಡಿಕೆಶಿ
ಕೆಲ ದಿನಗಳ ಹಿಂದೆ ಡಿಕೆಶಿ ಅರ್ಜಿ ವರ್ಜಾ ಮಾಡಿದ್ದ ಹೈಕೋರ್ಟ್
"
10:09 AM (IST) Oct 05
ಕರ್ನಾಟಕ ಕಾಂಗ್ರೆಸ್ ಸಾರಥಿಗೆ ಮತ್ತೊಂದು ಬಿಗ್ ಶಾಕ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ಗೆ ಸಿಬಿಐ ಶಾಕ್..!
ಬೆಳ್ಳಂ ಬೆಳಗ್ಗೆ ಡಿ.ಕೆ ಶಿವಕುಮಾರ್ ಮನೆ ಮೇಲೆ ರೇಡ್!