ಜಾತಿ ಗಣತಿಯಲ್ಲಿ ಗೊಂದಲ ಇಲ್ಲ, ಎಲ್ಲರೂ ಪಾಲ್ಗೊಳ್ಳಿ: ಸಚಿವ ಈಶ್ವರ್ ಖಂಡ್ರೆ

Published : Sep 30, 2025, 05:32 AM IST
Eshwar Khandre

ಸಾರಾಂಶ

ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಯಾವುದೇ ಗೊಂದಲ ಇಲ್ಲ. ಈ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ನಾವು ಮನವಿ ಮಾಡುತ್ತೇವೆ. ಎಲ್ಲಾ ಸಮುದಾಯದ ಜನರೂ ಕಡ್ಡಾಯವಾಗಿ ಭಾಗಿಯಾಗಿ ಎಂದು ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ.

ಮೈಸೂರು (ಸೆ.30): ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಯಲ್ಲಿ ಯಾವುದೇ ಗೊಂದಲ ಇಲ್ಲ. ಈ ಸಮೀಕ್ಷೆಯಲ್ಲಿ ಎಲ್ಲರೂ ಪಾಲ್ಗೊಳ್ಳಲು ನಾವು ಮನವಿ ಮಾಡುತ್ತೇವೆ. ಎಲ್ಲಾ ಸಮುದಾಯದ ಜನರೂ ಕಡ್ಡಾಯವಾಗಿ ಭಾಗಿಯಾಗಿ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನರು ಜಾತಿ ಗಣತಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಅಂತ ಹೈಕೋರ್ಟ್‌ ಹೇಳಿದೆ.

ಆದರೂ ರಾಜ್ಯ ಸರ್ಕಾರ ಇದರಲ್ಲಿ ಭಾಗಿಯಾಗಿ ಅಂತಾನೇ ಮನವಿ ಮಾಡಿದೆ ಎಂದರು. ಭದ್ರಾ ಅರಣ್ಯದಲ್ಲಿ ಜಿಂಕೆ ಬೇಟೆಯ ಪ್ರಕರಣದ ವಿಚಾರವು ಎರಡು ದಿನಗಳ ಹಿಂದೆಯಷ್ಟೇ ನನಗೆ ಗೊತ್ತಾಗಿದೆ. ತನಿಖೆಗೆ ಆದೇಶ ಮಾಡಿದ್ದೇನೆ. ವರದಿ ಬಂದ ನಂತರ ಮಾತನಾಡುತ್ತೇನೆ. ಯಾರೇ ಅರಣ್ಯ ಕಾನೂನನ್ನು ಉಲ್ಲಂಘಿಸಿದರೂ ಅವರನ್ನು ಬಿಡುವ ಮಾತಿಲ್ಲ ಎಂದು ಖಂಡ್ರೆ ಎಚ್ಚರಿಕೆ ನೀಡಿದರು.

ಎಲ್ಲರೂ ಭಾಗಿ ಆಗಿ: ಜನರು ಜಾತಿ ಗಣತಿಯಲ್ಲಿ ಪಾಲ್ಗೊಳ್ಳುವುದು ಕಡ್ಡಾಯವಲ್ಲ ಅಂತ ಹೈಕೋರ್ಟ್‌ ಹೇಳಿದೆ. ಆದರೂ ರಾಜ್ಯ ಸರ್ಕಾರ ಇದರಲ್ಲಿ ಭಾಗಿಯಾಗಿ ಅಂತಾನೇ ಮನವಿ ಮಾಡಿದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.

ರೀಲ್ಸ್ ಮಾಡೋಕೆ ಅವಕಾಶ ಇಲ್ಲ

ಆನೆಗಳ ಬಳಿ ರೀಲ್ಸ್ ಮಾಡೋಕೆ ಅವಕಾಶ ಇಲ್ಲ. ದಸರಾ ಆನೆಗಳು ಹಾಗೂ ಕಾಡಾನೆಗಳಿಗೂ ಇದು ಅನ್ವಯವಾಗುತ್ತದೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ ತಿಳಿಸಿದರು.ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನೆಗಳಿಗೆ ಕಾಟ ತೊಂದರೆ ಕೊಡುವ ಕೆಲಸ ಆಗಬಾರದು. ಸಾರ್ವಜನಿಕರು ಇಂತಹದರಿಂದ ದೂರ ಇರಬೇಕು. ಈಗಾಗಲೇ ಆನೆಗಳ ಬಳಿ ರೀಲ್ಸ್ ಮಾಡಿರುವವರ ಮೇಲೆ ಕ್ರಮ ಆಗಿದೆ ಎಂದರು.

ದಸರಾವನ್ನ ವಿಜೃಂಭಣೆಯಿಂದ ಆಚರಣೆ ಮಾಡಲಾಗುತ್ತಿದೆ. ದಸರಾ ವೇಳೆ ಜಂಬೂಸವಾರಿ ಆಕರ್ಷಣೆ. ಗಜಪಡೆಯ 14 ಆನೆಗಳು ಭಾಗಿಯಾಗುತ್ತವೆ. ಆನೆಗಳ ಪಳಗಿಸುವ ಕೆಲಸ ಮಾಡೋದು ಮಾವುತರು, ಕಾವಾಡಿಗರು. ಸ್ವಲ್ಪ ಹೊತ್ತು ಅವರ ಬಳಿ ಕಾಲ ಕಳೆಯಲು ಇಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು. ಇತ್ತೀಚಿನ ದಿನಗಳಲ್ಲಿ ಮಾನವ ಸಂಘರ್ಷಣೆಗಳು ಹೆಚ್ಚಾಗುತ್ತಿವೆ. ಆನೆಗಳನ್ನ ಪಳಗಿಸುವ ಶಕ್ತಿ ಸಾಮರ್ಥ್ಯ ಮಾವುತರು ಕಾವಾಡಿಗರಿಗೆ ರಕ್ತ ಗತವಾಗಿ ಬಂದಿದೆ.

ಮಾವುತರು ಕಾವಾಡಿಗರ ಬೇಡಿಕೆ ಈಡೇರಿಸುವ ಭರವಸೆ ಕೊಟ್ಟಿದ್ದೇವೆ. ಅರ್ಜುನ 8 ಬಾರಿ ಚಿನ್ನದ ಅಂಬಾರಿ ಹೊತ್ತು ಎಲ್ಲಾ ಜನರ ಪ್ರೀತಿ ಗಳಿಸಿದ್ದಾನೆ. ಬಳ್ಳೆಯಲ್ಲಿ ಅರ್ಜುನ ಸ್ಮಾರಕ ನಿರ್ಮಾಣ ಮಾಡಲಾಗಿದೆ. ಎಸಳೂರಿನಲ್ಲೂ ಅರ್ಜುನ ಸ್ಮಾರಕ ಮಾಡುತ್ತೇವೆ. ನಮ್ಮ ರಾಜ್ಯದಲ್ಲಿ 6395 ಆನೆಗಳಿ ಇವೆ. ಪುಂಡಾನೆಗಳನ್ನ ಸೆರೆ ಹಿಡಿಯಲು ಇತರೆ ರಾಜ್ಯದವರು ನಮ್ಮ ಬಳಿ ಬರ್ತಾರೆ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಂಗನವಾಡಿ, ಆಶಾ ನೌಕರರ ಗೌರವಧನ ಹೆಚ್ಚಿಸಿ: ಸಂಸದ ಡಾ.ಕೆ.ಸುಧಾಕರ್‌ ಮನವಿ
ಬಂಗಾರಪ್ಪ ಅವರ ಹೆಸರಿಗೆ ತಕ್ಕ ರೀತಿ ಮಧು ಮಾತನಾಡಲಿ: ಆರಗ ಜ್ಞಾನೇಂದ್ರ ತಿರುಗೇಟು