ರಾಜರಾಜೇಶ್ವರಿ ನಗರ ಉಪಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ನಟ ದರ್ಶನ್ ವಿರುದ್ಧ ದೂರು ದಾಖಲಾಗಿದೆ. ಅಷ್ಟಕ್ಕೂ ದರ್ಶನ್ ಮಾಡಿದ್ದಾದ್ರೂ ಏನು..?
ಬೆಂಗಳೂರು, (ನ.01) : ರಾಜ್ಯದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ಉಪಚುಣಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ನಡೆಸಿದ್ದ ನಟ ದರ್ಶನ್ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.
ನಗರದ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ವಿವಿದೆಡೆ ನಟ ದರ್ಶನ್ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಶುಕ್ರವಾರ ಪ್ರಚಾರ ಮಾಡಿದ್ದರು. ಈ ವೇಳೆ ದರ್ಶನ್ ಮತ್ತು ಇತರೆ ನಾಯಕರು ಕೋವಿಡ್ ನಿಯಮವಾಳಿಗಳನ್ನು ಗಾಳಿಗೆ ತೂರಿ ಸಾಮಾಜಿಕ ಅಂತರ ಪಾಲನೆ ಮಾಡದೇ ಪ್ರಚಾರ ನಡೆಸಿದ್ದರು ಎಂಬ ಆರೋಪದ ಮೇರೆಗೆ ದರ್ಶನ್ ವಿರುದ್ಧ ದೂರು ದಾಖಲಾಗಿದೆ.
undefined
ಆರ್ ಆರ್ ನಗರದ ಕುರುಕ್ಷೇತ್ರಕ್ಕೆ ಸುಯೋಧನನ ಎಂಟ್ರಿ; ಹೇಗಿತ್ತು ನೋಡಿ ಪ್ರಚಾರ!
ವಿಪತ್ತು ನಿರ್ವಹಣಾ ಕಾಯ್ದೆಯಡಿಯಲ್ಲಿ ನಟ ದರ್ಶನ್ ಮತ್ತಿತ್ತರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
Case registered under the Disaster Management Act against Kannada film actor Darshan for campaigning in Rajarajeshwari Nagar without following guidelines: N Manjunath Prasad, Commissioner, Bruhat Bengaluru Mahanagara Palike (BBMP), Karnataka
— ANI (@ANI)ಆರ್ ಆರ್ ನಗರ ಉಪಚುನಾವಣೆ ಪ್ರಚಾರದಲ್ಲಿ ಸ್ಟಾರ್ ಗಳ ಹವಾ ಶುರುವಾಗಿದೆ, ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಖಷ್ಬೂ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪ್ರಚಾರ ಮಾಡಿದ್ದರು. ತೆರೆದ ವಾಹನದಲ್ಲಿ ಹಲವು ಸ್ಥಳಗಳಲ್ಲಿ ಪ್ರಚಾರ ನಡೆಸಿದ ದರ್ಶನ್ ನೋಡಲು ಅಭಿಮಾನಿಗಳು ಮತ್ತು ಬೆಂಬಲಿಗರು ಮುಗಿ ಬಿದ್ದಿದ್ದರು. ಶುಕ್ರವಾರ ಈದ್ ಮಿಲಾದ್ ರಜೆ ಇದ್ದ ಕಾರಣ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರು.