ಸಂಪುಟ ಪುನಾರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದ್ದು, ಮುಖ್ಯಮಂತ್ರಿಗಳು ಏನು ನಿರ್ಧಾರ ಮಾಡುತ್ತಾರೋ ನೋಡೋಣ. ಅವರು ಏನು ನಿರ್ಧಾರ ಮಾಡುತ್ತಾರೋ ಅದರಂತೆ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ಜಮಖಂಡಿ (ಏ.03): ಸಂಪುಟ ಪುನಾರಚನೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರವಾಗಿದ್ದು, ಮುಖ್ಯಮಂತ್ರಿಗಳು ಏನು ನಿರ್ಧಾರ ಮಾಡುತ್ತಾರೋ ನೋಡೋಣ. ಅವರು ಏನು ನಿರ್ಧಾರ ಮಾಡುತ್ತಾರೋ ಅದರಂತೆ ಆಗುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು. ನಗರದ ಕುಂಚನೂರ ರಸ್ತೆಯಲ್ಲಿರುವ ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲಿನ ಬೆಲೆ ಏರಿಕೆ ಮಾಡಿದ್ದು, ರೈತರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಎಂದ ಅವರು, ರೈತರು ಬದುಕಬೇಕೋ ಬೇಡವೋ ಎಂದು ಪ್ರಶ್ನಿಸಿದರು. ರೈತರಿಗಾಗಿ ಹಾಲಿನ ದರ ಏರಿಸಿದ್ದೇವೆ. ಬೆಲೆ ಏರಿಕೆಯಿಂದ ಜನರು ತತ್ತರಿಸಿದ್ದು, ಬೆಲೆಗಳು ಗಗನಕ್ಕೇರಿವೆ. ಅವರನ್ನು ಬದುಕಿಸಬೇಕು ಎಂಬ ಸದುದ್ದೇಶದಿಂದ ಸರ್ಕಾರ ಐದು ಗ್ಯಾರಂಟಿ ನೀಡಿದೆ ಎಂದು ಹೇಳಿದರು.
ರಾಜಕೀಯ ವೃತ್ತಿಯನ್ನು ಸಹಕಾರಿ ಕ್ಷೇತ್ರದಿಂದ ಆರಂಭಿಸಿರುವ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರದ ಜಮಖಂಡಿ ನಗರದ ಅರ್ಬನ್ ಬ್ಯಾಂಕ್ ಕಾರ್ಯಕ್ರಮಕ್ಕೆ ಆಗಮಿಸಿದ್ದೇನೆ. ಕಾರ್ಯಕ್ರಮಕ್ಕೆ ಬರುತ್ತೇನೆ ಎಂದು ಮಾತು ಕೊಟ್ಡಿದ್ದೆ. ಅದಕ್ಕೆ ಬಂದಿದ್ದೇನೆ. ಕಾರ್ಯಕ್ರಮದ ನಂತರ ದೆಹಲಿಯಲ್ಲಿ ಕರ್ನಾಟಕ ಭವನ ಉದ್ಘಾಟನೆಗೆ ಹೊರಟಿದ್ದೇನೆ. ಕೇಂದ್ರ ಸಚಿವ ರಾಜನಾಥಸಿಂಗ್ ಸೇರಿದಂತೆ ಬೇರೆ ಇಲಾಖೆಯವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಎಂಎಲ್‌ಸಿ ಕ್ಷೇತ್ರ ಮತ್ತು ಬೇರೆ ಬೇರೆ ಕೆಲಸಗಳ ವೇಳಾಪಟ್ಟಿ ಚರ್ಚೆಗೆ ಹೊರಟಿದ್ದೇನೆ ಎಂದು ಹೇಳಿದರು. ವಕ್ಫ್ ಬಿಲ್ ಮಂಡನೆ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಈಗಾಗಲೇ ಅದರ ಕುರಿತು ನಮ್ಮ ರಾಷ್ಟ್ರೀಯ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳುವ ಮೂಲಕ ಸಮರ್ಪಕ ಉತ್ತರ ನೀಡಲಿಲ್ಲ.
ವಾರಾಹಿ ಯೋಜನೆ ಪೂರ್ಣಕ್ಕೆ ಕ್ರಮ: ಭೂಸ್ವಾಧೀನ ಪ್ರಕ್ರಿಯಲ್ಲಿನ ವಿಳಂಬ, ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯಿಂದ ತೀರುವಳಿ ಪಡೆಯಲು ವಿಳಂಬ ಸೇರಿದಂತೆ ವಿವಿಧ ಕಾರಣಗಳಿಂದ ವಾರಾಹಿ ಯೋಜನೆ ಪೂರ್ಣಗೊಳಿಸಲು ಆಗಿಲ್ಲ, ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಎಡದಂಡೆ ಕಾಲುವೆಯಿಂದ ನೀರು ಹರಿಸಲಾಗುತ್ತಿದ್ದು, 6100 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲಾಗುತ್ತಿದೆ. ಬಲದಂಡೆ ಕಾಲುವೆ ಕಾಮಗಾರಿಗೆ ಸುಮಾರು 11.86 ಹೆಕ್ಟೇರ್ ಅರಣ್ಯ ಪ್ರದೇಶದ ಅಗತ್ಯವಿದೆ.
ಹೊಸ ಪಕ್ಷ ಕಟ್ಟಿದವರ್ಯಾರೂ ಯಶಸ್ವಿಯಾಗಿಲ್ಲ ಎಂದ ಮುರುಗೇಶ ನಿರಾಣಿ ಡಿಕೆಶಿ ಜೊತೆ ಪಿಸುಮಾತು
ವಾರಾಹಿ ಏತ ನೀರಾವರಿ ಯೋಜನೆಯಡಿ 12.735 ಕಿ.ಮೀ. ಕಾಮಗಾರಿ ಬಾಕಿ ಇದೆ. ಅರಣ್ಯ ಇಲಾಖೆಯ ಅನುಮತಿ ಪಡೆದು ಯೋಜನೆಗೆ ಅಗತ್ಯವಿರುವ ಜಮೀನುಗಳ ಭೂಸ್ವಾಧೀನತೆಗೆ ಅಗತ್ಯ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. 1979ರಲ್ಲಿ ಅಧಿಕಾರಿಗಳು ಅರಣ್ಯ ಇಲಾಖೆಯ ನಿಮಮಗಳ ಅರಿವಿಲ್ಲದೇ ಯೋಜನೆ ಆರಂಭಿಸಿದರು. ಪ್ರಮುಖವಾಗಿ ಭೂಸ್ವಾಧೀನ ಸಮಸ್ಯೆಯಾಗಿದೆ. 1009 ಎಕರೆ ಪಟ್ಟಾ ಭೂಮಿಯಲ್ಲಿ 765 ಎಕರೆ ಸ್ವಾಧೀನ ಮಾಡಲಾಗಿದೆ, ಇನ್ನೂ 343 ಎಕರೆ ಸ್ವಾಧೀನ ಬಾಕಿ ಇದೆ, ಅದೇ ರೀತಿ ಸರ್ಕಾರಿ ಭೂಮಿಯಲ್ಲಿ 714 ಎಕರೆ ಪೈಕಿ 99 ಎಕರೆ ಸ್ವಾಧೀನ ಬಾಕಿ ಇದೆ. ಒಟ್ಟಾರೆ ಭೂಸ್ವಾಧೀನಕ್ಕೆ 73 ಕೋಟಿ ರು. ಅಗತ್ಯವಿದೆ ಎಂದು ಸಚಿವರು ವಿವರಿಸಿದರು.