ಜಯನಗರ ಕ್ಷೇತ್ರದಿಂದ ರೂಪ ಅಯ್ಯರ್‌ ಸ್ಪರ್ಧಿಸಲು ಸಂತರ ಆಶೀರ್ವಾದ

By Kannadaprabha NewsFirst Published Mar 27, 2023, 12:39 PM IST
Highlights

ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿಯ ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿರುವ ಪಕ್ಷದ ಮುಖಂಡರೂ ಆಗಿರುವ ಕಲಾವಿದೆ ರೂಪ ಅಯ್ಯರ್‌ ಅವರಿಗೆ ಸಂತರು ಆಶೀರ್ವಾದದ ಬೆಂಬಲ ನೀಡಿದ್ದಾರೆ.

ಬೆಂಗಳೂರು (ಮಾ.27): ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ರಾಜಧಾನಿಯ ಪ್ರತಿಷ್ಠಿತ ಜಯನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಲು ಪ್ರಬಲ ಆಕಾಂಕ್ಷಿಯಾಗಿರುವ ಪಕ್ಷದ ಮುಖಂಡರೂ ಆಗಿರುವ ಕಲಾವಿದೆ ರೂಪ ಅಯ್ಯರ್‌ ಅವರಿಗೆ ಸಂತರು ಆಶೀರ್ವಾದದ ಬೆಂಬಲ ನೀಡಿದ್ದಾರೆ. ಕಳೆದ ಹಲವು ದಿನಗಳಿಂದ ಕ್ಷೇತ್ರಾದ್ಯಂತ ಸಂಚರಿಸುತ್ತಿರುವ ರೂಪ ಅಯ್ಯರ್‌ ಅವರು ಜನರ ವಿಶ್ವಾಸ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ, ಈ ನಿಟ್ಟಿನಲ್ಲಿ ಹಲವಾರು ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಜಯನಗರದ ಶಾಲಿನಿ ಮೈದಾನದಲ್ಲಿ ರೂಪ ಅಯ್ಯರ್‌ ಅವರು ‘ಸಂತ ಸಮಾವೇಶ’ ಮತ್ತು ‘108 ಹೋಮ ಕುಂಡಗಳ ಸಾಮೂಹಿಕ ಹವನ ಮಹಾ ಚಂಡಿಕಾ ಯಾಗ’ ಕಾರ್ಯಕ್ರಮ ಭರ್ಜರಿ ಯಶಸ್ವಿಯಾಗಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವಾರು ಸ್ವಾಮೀಜಿಗಳು, ಸಂತರು, ರೂಪ ಅಯ್ಯರ್‌ ಅವರಿಗೆ ಮುಂಬರುವ ಚುನಾವಣೆಯಲ್ಲಿ ಯಶಸ್ಸು ಸಿಗಲಿ ಎಂಬ ಆಶೀರ್ವಾದ ಮಾಡಿದ್ದಾರೆ.

ಮೂರೇ ತಿಂಗಳಲ್ಲಿ ವಿಧಾನಸೌಧದ ಮುಂಭಾಗ ಪ್ರತಿಮೆ ಸ್ಥಾಪಿಸಿ ಅಶೋಕ್ ಸಾಧನೆ

ಉಡುಪಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥ ಸ್ವಾಮೀಜಿ ಮಾತನಾಡಿ, ರೂಪ ಅಯ್ಯರ್‌ ಅವರು ಯಾಗ ನೆರವೇರಿಸಿ ಸಂತರ ಸಮಾವೇಶ ಆಯೋಜಿಸಿರುವುದು ಜಗತ್ತಿನ ಕಲ್ಯಾಣಕ್ಕಾಗಿ. ಜಗತ್ತು ಮುನ್ನಡೆಯುತ್ತಿರುವುದು ಯಜ್ಞದ ಮೂಲಕ. ಯಜ್ಞದಿಂದಾಗಿ ದೇವತೆಗಳು ಸಂತುಷ್ಟರಾಗಿ ಮಳೆ-ಬೆಳೆ ಆಗುತ್ತದೆ. ಜನರು ಸಂತೋಷದಿಂದ ಇರುತ್ತಾರೆ. ಯಾವುದೇ ಕಾನೂನು ಕಟ್ಟಳೆಗಳಿಂದ ಜನರನ್ನು ಸಂತುಷ್ಟರನ್ನಾಗಿ ಮಾಡಲು ಸಾಧ್ಯವಿಲ್ಲ. ಇಂತಹ ಒಳ್ಳೆಯ ಕಾರ್ಯದಿಂದ ಆರಂಭ ಮಾಡುತ್ತಿರುವ ರೂಪ ಅಯ್ಯರ್‌ ಅವರ ರಾಜಕೀಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದರು.

ಗೌರಿಗದ್ದೆಯ ವಿನಯ್‌ ಗುರೂಜಿ ಮಾತನಾಡಿ, ಯಾರಿಗೆ ಧರ್ಮ ಪ್ರಜ್ಞೆ ಇರುತ್ತದೆಯೋ ಅವರು ಮಾತ್ರ ಧರ್ಮ ಉಳಿಸಲು ಸಾಧ್ಯ. ನಿತ್ಯವೂ ವಿಷ್ಣು ಸಹಸ್ರನಾಮ, ರಂಗೋಲಿ, ಹಬ್ಬ ಹರಿದಿನಗಳ ಆಚರಣೆ ಸೇರಿದಂತೆ ಧರ್ಮದ ಉಳಿವಿಗೆ ಸ್ತ್ರೀಯರು ಬಹಳಷ್ಟುಶ್ರಮಿಸುತ್ತಿದ್ದಾರೆ. ರೂಪ ಅಯ್ಯರ್‌ ಮುಂದೆ ರಾಜ್ಯಕ್ಕೆ ದೊಡ್ಡ ಆಸ್ತಿ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.

ಓಂಕಾರೇಶ್ವರ ಮಠದ ಮಧುಸೂದಾನಂದಪುರಿ ಸ್ವಾಮೀಜಿ, ಬಿಜಿಎಸ್‌ ಮತ್ತು ಎಸ್‌ಜೆಬಿ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿದೇಶಕ ಡಾ.ಪ್ರಕಾಶನಾಥ ಸ್ವಾಮೀಜಿ, ಹುಕ್ಕೇರಿಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾ ಅಧ್ಯಕ್ಷ ಅಶೋಕ್‌ ಹಾರನಹಳ್ಳಿ ಮೊದಲಾದವರು ಮಾತನಾಡಿ ರೂಪ ಅಯ್ಯರ್‌ ಅವರ ಕಾರ್ಯವನ್ನು ಮುಕ್ತಕಂಠದಿಂದ ಪ್ರಶಂಸಿಸಿದರು.

ವಿಧಾನಸೌಧ ಆಧುನಿಕ ಅನುಭವ ಮಂಟಪವಾಗಲಿ: ಸಿಎಂ ಬೊಮ್ಮಾಯಿ

ಪ್ರಾಸ್ತಾವಿಕವಾಗಿ ಮಾತನಾಡಿದ ರೂಪ ಅಯ್ಯರ್‌, 108 ಯಾಗ ಮಾಡಿಸಬೇಕು ಎಂದು ದೇವಿಯ ಪ್ರೇರಣೆ ಆಯಿತು. ಶ್ರೀರಂಗಪಟ್ಟಣದ ಭಾನುಪ್ರಕಾಶ ಗುರೂಜಿಯವರ ನೇತೃತ್ವದಲ್ಲಿ ವೆಂಕಟೇಶ ಆಚಾರ್ಯರ ಸಾನಿಧ್ಯದಲ್ಲಿ 70 ಋುತ್ವಿಜರಿಂದ 108 ಮಹಾ ಚಂಡಿಕಾ ಯಾಗ ಆಯೋಜಿಸಲಾಯಿತು. ಸಂತರು ಆಗಮಿಸಿ ಆಶೀರ್ವಾದ ನೀಡಿದ್ದಕ್ಕೆ ಜನ್ಮ ಸಾರ್ಥಕವಾಯಿತು ಎಂದು ಸಂತಸ ವ್ಯಕ್ತಪಡಿಸಿದರು.

click me!