ಬಿಜೆಪಿಯ ಅಯೋಧ್ಯೆ ರೈಲು ಯಾತ್ರೆ 1 ವಾರ ಮುಂದೂಡಿಕೆ

Published : Jan 27, 2024, 08:01 AM IST
ಬಿಜೆಪಿಯ ಅಯೋಧ್ಯೆ ರೈಲು ಯಾತ್ರೆ 1 ವಾರ ಮುಂದೂಡಿಕೆ

ಸಾರಾಂಶ

ಸುಮಾರು 1500 ಮಂದಿ ಬೆಂಗಳೂರಿನಿಂದ ತೆರಳಬೇಕಾಗಿದ್ದ ಮೊದಲ ರೈಲಿಗೆ ಸಂಜೆಯಷ್ಟೇ ನಿಗದಿತ ಮೊತ್ತ ಪಾವತಿಸಿ ಬುಕ್ ಮಾಡಲಾಗಿತ್ತು. ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ರಾಮಮಂದಿರ ದರ್ಶನ ಮಾಡಿಸುವ ಸಲುವಾಗಿ ರಾಜ್ಯ ಬಿಜೆಪಿಯು ಈ ಅಭಿಯಾನ ಆರಂಭಿಸಿದ್ದು, ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದಾಗಿದೆ.

ಬೆಂಗಳೂರು(ಜ.27):  ರಾಜ್ಯ ಬಿಜೆಪಿಯಿಂದ ಹಮ್ಮಿಕೊಂಡಿರುವರಾಮ ಮಂದಿರ ದರ್ಶನ ಅಭಿಯಾನದ ಅಂಗವಾಗಿ ಈ ತಿಂಗಳ31ರಂದು ಕರ್ನಾಟಕದಿಂದ ಅಯೋಧ್ಯೆಗೆ ಹೊರಡಬೇಕಿದ್ದ ಮೊದಲ ವಿಶೇಷ ರೈಲಿನ ಯಾತ್ರೆ ಒಂದು ವಾರ ಮುಂದೂಡಲಾಗಿದೆ. ಈ ಬಗ್ಗೆ ರೈಲ್ವೆ ಇಲಾಖೆ ಸೂಚನೆ ರವಾನಿಸಿದ್ದು, ಈ ತಿಂಗಳ 31ರ ಬದಲಾಗಿ ಒಂದು ವಾರ ವಿಳಂಬವಾಗಿ ರೈಲು ಹೊರಡಲಿದೆ ಎಂದು ಅಭಿಯಾನದ ಸಹ ಸಂಚಾಲಕ ಜಗದೀಶ್ ಹಿರೇಮನಿ ತಿಳಿಸಿದ್ದಾರೆ.

ಸುಮಾರು 1500 ಮಂದಿ ಬೆಂಗಳೂರಿನಿಂದ ತೆರಳಬೇಕಾಗಿದ್ದ ಮೊದಲ ರೈಲಿಗೆ ಸಂಜೆಯಷ್ಟೇ ನಿಗದಿತ ಮೊತ್ತ ಪಾವತಿಸಿ ಬುಕ್ ಮಾಡಲಾಗಿತ್ತು. ಪಕ್ಷದ ಕಾರ್ಯಕರ್ತರಿಗೆ ಅಯೋಧ್ಯೆಯ ರಾಮಮಂದಿರ ದರ್ಶನ ಮಾಡಿಸುವ ಸಲುವಾಗಿ ರಾಜ್ಯ ಬಿಜೆಪಿಯು ಈ ಅಭಿಯಾನ ಆರಂಭಿಸಿದ್ದು, ಇದರಲ್ಲಿ ಸಾರ್ವಜನಿಕರೂ ಪಾಲ್ಗೊಳ್ಳಬಹುದಾಗಿದೆ.

ಬಾಳೆದಿಂಡಿನಲ್ಲಿ ಅಯೋಧ್ಯೆಯ ಶ್ರೀರಾಮಮಂದಿರ: ಚಿಕ್ಕಮಗಳೂರಿನಲ್ಲಿ ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ!

ಇದರ ಅಂಗವಾಗಿ ರಾಜ್ಯದಿಂದ ಹೆಚ್ಚ ಕಡಿಮೆ 35 ಸಾವಿರ ಮಂದಿ ಕಾರ್ಯಕರ್ತರು ಮಾ.25ರವರೆಗೆ ಸುಮಾರು 25 ರೈಲುಗಳಲ್ಲಿ ಅಯೋಧ್ಯೆಗೆ ತೆರಳಿ ಶ್ರೀರಾಮನ ದರ್ಶನ ಪಡೆಯುವ ಉದ್ದೇಶ ಹೊಂದಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ