ಕಾರ್ಯಕರ್ತರು ಗೊಂದಲಕ್ಕೆ ಇಡಾಗಬಾರದು. 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಚಿಮಣಿ ಹಚ್ಚಿ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಇಂಡಿ (ಸೆ.01): ಕಾರ್ಯಕರ್ತರು ಗೊಂದಲಕ್ಕೆ ಇಡಾಗಬಾರದು. 2023ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ. ಕಾಂಗ್ರೆಸ್ ಪಕ್ಷದ ಬಗ್ಗೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬಾರದು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಎಲ್ಲಿದೆ ಎಂದು ಚಿಮಣಿ ಹಚ್ಚಿ ಹುಡುಕುವ ಪರಿಸ್ಥಿತಿ ಬಂದಿದೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು. ಅವರು ಮಂಗಳವಾರ ಪಟ್ಟಣದ ಶ್ರೀ ಶಾಂತೇಶ್ವರ ಮಂಗಲ ಕಾರ್ಯಾಲಯದ ಹತ್ತಿರ ಬಿಜೆಪಿ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಜಗತ್ತಿನಲ್ಲಿ ಭಾರತ ವಿಶ್ವಗುರುವಾಗಬೇಕು ಎಂಬ ಪ್ರಧಾನಿ ನರೇಂದ್ರ ಮೋದಿ ಅವರು ಕನಸು ಇಂದು ನನಸಾಗುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಇಂಡಿ ತಾಲೂಕಿಗೆ ಕಾಲುವೆ ನೀರು ಬರಲಿಲ್ಲ. ಕೇವಲ ಸಿಂದಗಿವರೆಗೆ ಮಾತ್ರ ಕಾಲುವೆ ತಂದು ನಿಲ್ಲಿಸಲಾಗಿತ್ತು. ದೇವೆಗೌಡರಿಗೆ ಮನವಿ ಮಾಡಿಕೊಂಡಾಗ ಇಂಡಿ ತಾಲೂಕಿಗೆ ಕಾಲುವೆ ನಿಮಾಣಕ್ಕೆ .63 ಕೋಟಿ ಅನುದಾನ ಬಿಡುಗಡೆ ಮಾಡಿದ್ದರು. ಇಂಡಿ ಪಟ್ಟಣಕ್ಕೆ ಬೈಪಾಸ್ ರಸ್ತೆ ಅವಶ್ಯಕತೆ ಇದೆ ಎಂದು ತಿಳಿದು, ಮಣೂರ, ಅಗರಖೇಡ, ಅಥರ್ಗಾ, ನಾಗಠಾಣ ಮೂಲಕ ವಿಜಯಪುರ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುವ ವೇಳೆ ಇಂಡಿ ಪಟ್ಟಣಕ್ಕೆ ಬೈಪಾಸ್ ರಸ್ತೆ ನಿರ್ಮಾಣ ಆಗಬೇಕು ಎಂದು ಮಂಜೂರು ಮಾಡಿಸಿದ್ದೇನೆ. ಇದಕ್ಕಾಗಿ 250 ಕೋಟಿ ಅನುದಾನ ಮಂಜೂರು ಆಗಿದೆ. ಸಧ್ಯದಲ್ಲಿಯೇ ಟೆಂಡರ್ ಪ್ರಕ್ರಿಯೆ ಆಗಲಿದೆ ಎಂದು ಹೇಳಿದರು.
undefined
ಮುರುಘಾ ಶ್ರೀಗಳ ವಿರುದ್ಧ ಆರೋಪಿಸಿದ್ದು ತಪ್ಪು: ಉಮೇಶ್ ಕತ್ತಿ
ಲಿಂಗಸೂರು-ಶಿರಾಡೋಣ ಹೆದ್ದಾರಿಯನ್ನು ಅಭಿವೃದ್ಧಿಪಡಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೇಳಿಕೊಂಡಾಗ ಅವರು .53 ಕೋಟಿ ಅನುದಾನವನ್ನು ಆರ್ಥಿಕ ಇಲಾಖೆಯ ಮೂಲಕ ಒಪ್ಪಿಗೆ ನೀಡಿದ್ದಾರೆ. ಮಂಜೂರಾತಿ ಹಂತದಲ್ಲಿ ಇದ್ದು, ಒಂದು ವಾರದಲ್ಲಿ ಆ ರಸ್ತೆ ಅಭಿವೃದ್ಧಿ ಮಂಜೂರು ಆಗಲಿದೆ ಎಂದು ಹೇಳಿದರು.
ಹೊರ್ತಿ ರೇವಣಸಿದ್ದೇಶ್ವರ ಏತ ನೀರಾವರಿಗಾಗಿ ರೈತರು ಧರಣಿ ಕುಳಿತಾಗ, ಮುಖ್ಯಮಂತ್ರಿಗಳು ನನಗೆ ಕರೆ ಮಾಡಿ ಯಾವುದೇ ಪರಿಸ್ಥಿತಿಯಲ್ಲಿ ರೈತರು ಹೋರಾಟದಿಂದ ಕೈಬಿಡಿಸಬೇಕು. ತಾವು ಭರವಸೆ ನೀಡಿದ ಎಲ್ಲವು ಅನುಷ್ಠಾನಕ್ಕೆ ತರುತ್ತೇನೆ ಎಂದು ನನಗೆ ಮಾತು ಕೊಟ್ಟಿದ್ದರು. ನೀರಾವರಿ ಮಂತ್ರಿ ನನ್ನ ಸಹೋದರನೇ ಇದ್ದಾರೆ. ಅವರು ಪ್ರಸ್ತಾವ ತಯಾರಿಸುತ್ತಾರೆ. ಅದಕ್ಕೆ ತಾವು ಸಹಿ ಹಾಕಬೇಕು ಎಂದು ಹೇಳಿದೆ. ಅದಕ್ಕೆ ಅವರು ಒಪ್ಪಿಗೆ ನೀಡಿದ್ದರಿಂದ ರೇವಣಸಿದ್ದೇಶ್ವರ ಏತ ನೀರಾವರಿಗಾಗಿ ನಡೆಸುತ್ತಿದ್ದ ರೈತರಿಗೆ ಭರವಸೆ ನೀಡಿದ್ದರಿಂದ ರೈತರು ಹೋರಾಟದಿಂದ ಹಿಂದೆ ಸರಿದರು. ಇದು ಬಿಜೆಪಿ ಸರ್ಕಾರದ ಸಾಧನೆ ಎಂದು ಹೇಳಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಕಿವಡೆ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ ಮಾತನಾಡಿದರು. ಬಿಜೆಪಿ ಮುಖಂಡರಾದ ಕಾಸುಗೌಡ ಬಿರಾದಾರ, ದಯಾಸಾಗರ ಪಾಟೀಲ, ರವಿಕಾಂತ ಬಗಲಿ, ಶೀಲವಂತ ಉಮರಾಣಿ, ಅನೀಲ ಜಮಾದಾರ, ಶಂಕರಗೌಡ ಪಾಟೀಲ ಡೊಮನಾಳ, ಸಿದ್ದಲಿಂಗ ಹಂಜಗಿ, ಮುತ್ತು ದೇಸಾಯಿ, ಹಣಮಂತ್ರಾಯಗೌಡ ಪಾಟೀಲ, ರಾಜಕುಮಾರ ಸಗಾಯಿ, ಯಲ್ಲಪ್ಪ ಹದರಿ, ಭೀಮಸಿಂಗ ರಾಠೋಡ, ಬಸವರಾಜ ಹೂಗಾರ, ವಿಜಯಲಕ್ಷ್ಮಿ ರೂಗಿಮಠ ವೇದಿಕೆಯಲ್ಲಿ ಇದ್ದರು.
ರವಿ ವಗ್ಗೆ, ದೇವೆಂದ್ರ ಕುಂಬಾರ, ಅನೀಲಗೌಡ ಬಿರಾದಾರ, ರಾಚು ಬಡಿಗೇರ, ವೆಂಕಟೇಶ ಕುಲಕರ್ಣಿ, ಬುದ್ದುಗೌಡ ಪಾಟೀಲ, ರಾಮಸಿಂಗ ಕನ್ನೊಳ್ಳಿ, ರಮೇಶ ಧರೆನವರ, ವಿಜು ಮೂರಮನ, ಸುನಂದಾ ಬಂಡಿವಡ್ಡರ, ಅಶೋಕಗೌಡ ಬಿರಾದಾರ, ಸಂಜು ದಶವಂತ, ಮಲ್ಲಯ್ಯ ಪತ್ರಿಮಠ, ಲಾಯಪ್ಪ ದೊಡ್ಡಮನಿ, ವಿಜು ಮಾನೆ, ಸಚಿನ ಬೊಳೆಗಾಂವ, ದತ್ತಾ ಬಂಡೆನವರ, ಮಲ್ಲು ವಾಲಿಕಾರ, ಶ್ರೀಶೈಲಗೌಡ ಬಿರಾದಾರ, ಚನ್ನುಗೌಡ ಪಾಟೀಲ, ಬತ್ತುಸಾಹುಕಾರ ಹಾವಳಗಿ, ಸಂತೋಷಗೌಡ ಪಾಟೀಲ, ದಯಾನಂದ ಹುಬ್ಬಳ್ಳಿ, ರಾಜಶೇಖರ ಯರಗಲ್ಲ, ಬಿ.ಎಸ್.ಪಾಟೀಲ, ಪ್ರವೀಣ ಮಠ, ಮಲ್ಲು ಗುಡ್ಲ, ಪಿಂಟೂ ರಾಠೋಡ ಕಾರ್ಯಕ್ರಮದಲ್ಲಿ ಇದ್ದರು. ಪಕ್ಷಕ್ಕಾಗಿ ದುಡಿದ ಹಿರಿಯರನ್ನು ಸನ್ಮಾನಿಸಲಾಯಿತು. ರವಿ ವಗ್ಗೆ ನಿರೂಪಿಸಿದರು. ಅನಿಲಗೌಡ ಬಿರಾದಾರ ವಂದಿಸಿದರು.
ಸಾವರ್ಕರ ಸ್ವಾತಂತ್ರ್ಯ ಹೋರಾಟಗಾರ ಅಲ್ಲ: ಗಣಿಹಾರ
ಜಾತಿ ಬಿಟ್ಟು ಪಕ್ಷ ಸಂಘಟನೆ ಗಮನಿಸಿ: ಕಾರ್ಯಕರ್ತರು, ಮುಖಂಡರಿಗೆ ಕೈಮುಗಿಯುವೆ, ಪಕ್ಷ ಸಂಘಟನೆಯತ್ತ ಗಮನವಹಿಸಿ. ಜಾತಿ ಕಡೆಗೆ ಲಕ್ಷ ಕೊಡಬೇಡಿ. ಒಂದೇ ಜಾತಿಯಿಂದ ಗೆಲ್ಲಲು ಸಾಧ್ಯವಿಲ್ಲ. ಜಾತಿ ಬಿಟ್ಟು ರಾಜಕಾರಣ ಮಾಡಬೇಕು. ಜಾತಿ ಹಿಡಿದು ರಾಜಕಾರಣ ಮಾಡಿದರೆ ಅದು ಸಾಧ್ಯವಾಗುವುದಿಲ್ಲ ಎಂದು ಕಿವಿಮಾತು ಹೇಳಿದರು.