ಸಿಎಂ ನೋಡಿದ್ರೆ ಅಯ್ಯೋ‌ ಪಾಪ‌ ಅನಿಸುತ್ತೆ, ಗ್ಯಾರಂಟಿ ಹಣ ಹೊಂದಿಸಲು ಸಿದ್ದು ಪರದಾಟ: ವಿಜಯೇಂದ್ರ

Published : Nov 21, 2024, 04:37 PM IST
ಸಿಎಂ ನೋಡಿದ್ರೆ ಅಯ್ಯೋ‌ ಪಾಪ‌ ಅನಿಸುತ್ತೆ, ಗ್ಯಾರಂಟಿ ಹಣ ಹೊಂದಿಸಲು ಸಿದ್ದು ಪರದಾಟ: ವಿಜಯೇಂದ್ರ

ಸಾರಾಂಶ

ಸಿಎಂ ಖರ್ಚಿ ಅಲುಗಾಡುತ್ತಿದೆ. ಸಿಎಂಂ ಖರ್ಚಿಯನ್ನು ಹಾರಾಜಿಗಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರವಾಗಿ ಆರೋಪ ಮಾಡಿದ್ದಾರೆ. 50 ಕೋಟಿ ಆಫರ್ ನಾವು ಮಾಡುತ್ತಿಲ್ಲ. ಕಾಂಗ್ರೆಸ್ ಶಾಸಕರೇ 50 ಕೋಟಿ ಹಣ ಕೇಳುತ್ತಿದ್ದಾರೆ. ಹೀಗಾಗಿ ಸಿಎಂ 50 ಕೋಟಿ 100 ಕೋಟಿ ಆಫರ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 

ಹುಬ್ಬಳ್ಳಿ(ನ.21):  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಯಾರಿಗೂ ನೆಮ್ಮದಿ ಇಲ್ಲ. ರಾಜ್ಯದ ರೈತರಿಗೆ, ಆಡಳಿತ ಪಕ್ಷದ ಶಾಸಕರಿಗೂ ನೆಮ್ಮದಿ ಇಲ್ಲ. ಆಡಳಿತ ಪಕ್ಷದ ಶಾಸಕರೇ ಸರ್ಕಾರದ ಬಗ್ಗೆ ಹೇಳುತ್ತಿದ್ದಾರೆ. ಸಿಎಂ ಅವರನ್ನ ನೋಡಿದ್ರೆ ಅಯ್ಯೋ‌ಪಾಪ‌ ಅನಿಸುತ್ತೆ. ಗ್ಯಾರಂಟಿಗಳ ಹಣ ಹೊಂದಿಸಲು ಸಿಎಂ ಪರದಾಡುತ್ತಿದ್ದಾರೆ.. ತಮ್ಮ ಹುಳುಕನ್ನ ಮುಚ್ಚಿಹಾಕುವ ಉದ್ದೇಶದಿಂದ ಕೇಂದ್ರದ ಮೇಲೆ‌ ಗೂಬೆ ಕೂರಿಸುತ್ತಿದ್ದಾರೆ. ಮುಖ್ಯ‌ಮಂತ್ರಿಗಳು ಅವರ ಸ್ಥಾನಕ್ಕೆ ಅಗೌರವ ತರುವಂತಹ ಕೆಲಸ‌ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹರಿಹಾಯ್ದಿದ್ದಾರೆ. 

ಇಂದು(ಗುರುವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು, ವಕ್ಫ್ ವಿಚಾರದಲ್ಲಿ ರಾಜ್ಯ ಸರ್ಕಾರ ರೈತರಿಗೆ ಬರೆ ಎಳೆಯುತ್ತಿದೆ. ವಕ್ಫ್ ವಿಚಾರವಾಗಿ ತಮಗೆ ಮಾಹಿತಿಯೇ ಇಲ್ಲ ಎಂದು ಸಿಎಂ ಹೇಳುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. 

ಮಹಾರಾಷ್ಟ್ರ, ಜಾರ್ಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತೆ: ಬಿ.ವೈ.ವಿಜಯೇಂದ್ರ‌

ರಾಷ್ಟ್ರೀಯ ಆಹಾರ ಭದ್ರತೆ ಖಾಯ್ದೆ ಅಡಿಯಲ್ಲಿ‌ ಕೇಂದ್ರ ಸರ್ಕಾರ ಶೇ 92.50 ಸಹಾಯ ಮಾಡುತ್ತಿದೆ. ಶೇಕಡ 7.50 ರಷ್ಟು ಮಾತ್ರ ರಾಜ್ಯ ಸರ್ಕಾರ ನೀಡುತ್ತಿದೆ. ಬಿಪಿಎಲ್ ಕಾರ್ಡುದಾರರನ್ನ ರದ್ದು ಮಾಡುತ್ತಿರೋದು ಯಾವ ಆಧಾರದ ಮೇಲೆ?. ಯಾವ ಮಾನ‌ದಂಡಗಳ ಆಧಾರದ ಮೇಲೆ 11.50 ಲಕ್ಷ ಬಿಪಿಎಲ್ ಕಾರ್ಡ್‌ಗಳನ್ನ ರದ್ದು ಮಾಡಿದ್ದು, ಇದು ಸಮಂಜಸವಲ್ಲ. ಅವೈಜ್ಞಾನಿಕವಾಗಿ‌ ಬಿಪಿಎಲ್ ಕಾರ್ಡ್‌ಗಳನ್ನ‌ ರದ್ದು ಮಾಡಲಾಗಿದೆ. ಅನರ್ಹರ ಬಿಪಿಎಲ್ ಕಾರ್ಡ್ ಗಳನ್ನ‌ ರದ್ದು ಮಾಡುವುದು ಸರಿ. ಆದ್ರೆ ಅರ್ಹರು ಕಾರ್ಡುಗಳನ್ನ‌ ರದ್ದು ಮಾಡುವುದು ಎಷ್ಟು ‌ಸರಿ?. ಸಿಎಂ ಒಂದೇ‌ ಕಲ್ಲಿನಿಂದ ಎರಡು‌ ಹಕ್ಕಿಗಳನ್ನ‌ ಹೊಡೆಯುವ ಕೆಲಸ‌ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. 

ಪಾನ್‌ ಕಾರ್ಡ್ ಆಧಾರದ ಮೇಲೆ‌‌ ಈ‌ ರೀತಿ ಮಾಡುತ್ತಿದ್ದಾರೆ. 20 ಲಕ್ಷ ಕಾರ್ಡ್ ಗಳನ್ನ ರದ್ದು ಮಾಡಿದ್ರೆ ಗೃಹ ಲಕ್ಷ್ಮೀ‌ ಹಣ ಉಳಿತಾಯವಾಗುತ್ತದೆ ಅನ್ನೋದು ಅವರ ಉದ್ದೇಶ. ಗ್ಯಾರಂಟಿಗಳ‌ ಬಗ್ಗೆ ಇಡೀ ರಾಜ್ಯದ ಜನ‌ ಕಣ್ಣೀರು‌ ಹಾಕುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳು ಅಸಮರ್ಥರಿದ್ದಾರೆ. ಗ್ಯಾರಂಟಿ ಯೋಜನೆಗಳಿಗೆ ಹಣ ಕ್ರೂಡೀಕರಣ ಮಾಡಲು‌ ಆಗದೆ ಅಸಮರ್ಥರಾಗಿದ್ದಾರೆ. ಪದೇ ಪದೇ ಕೇಂದ್ರ ಸರ್ಕಾರವನ್ನ ದೂರುತ್ತಿರೋದು ತಮ್ಮ‌ ಹುಳುಕನ್ನ‌ ಮುಚ್ಚಿ ಹಾಕುವ ಉದ್ದೇಶದಿಂದ. ರಾಜ್ಯದ ರೈತರನ್ನ, ಬಡವರನ್ನ ಬೀದಿಗೆ ತಳ್ಳುವ ಕೆಲಸ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ. 

ಜನ ಇವತ್ತು ಛೀ ಥೂ ಅಂತಾ ಉಗೀತಿದಾರೆ. ಸಿಎಂ 15 ಬಜೆಟ್ ಮಂಡನೆ ಮಾಡಿದ್ರು ಅಸಮರ್ಥ ಮುಖ್ಯಮಂತ್ರಿಯಾಗಿದ್ದಾರೆ. ನಬಾರ್ಡ್ ಯೋಜನೆಯಡಿ ಬ್ಯಾಂಕ್‌ಗಳಿಗೆ ಅನುದಾನ ಕಡಿತ ವಿಚಾರದ ಬಗ್ಗೆ ಮಾತನಾಡಿದ ವಿಜಯೇಂದ್ರ, ಕರ್ನಾಟಕ ಅಷ್ಟೆ ಅಲ್ಲ ಬೇರೆ ರಾಜ್ಯಗಳಲ್ಲೂ ಹಣ ಕಡಿತವಾಗಿದೆ. ಮಾನದಂಡದ ಆಧಾರದ ಮೇಲೆ ಕಡಿತ ಮಾಡಲಾಗಿದೆ. ಪದೇ ಪದೇ ಕೇಂದ್ರದ ಮೇಲೆ ದೂರುತ್ತಿದ್ದಾರೆ. ಕಾರ್ಡ್ ರದ್ದು ಮಾಡ್ತಿರೋದು ಕಪಟ ನಾಟಕ ಎಂದು ಕೆಂಡ ಕಾರಿದ್ದಾರೆ. 

ವಕ್ಫ್‌ ವಿಚಾರ ಯತ್ನಾಳ ಶುರುಮಾಡಿದ್ದೋ, ನಾನು ಶುರು ಮಾಡಿದ್ದು ಪ್ರಶ್ನೆ ಅದಲ್ಲ. ಮೋದಿ ಅವರು ವಕ್ಫ್ ಕಾಯ್ದೆ ತಿದ್ದುಪಡಿ ವಿಚಾರವಾಗಿ ಕಮಿಟಿ ಮಾಡಿದ್ದಾರೆ. ವಕ್ಫ್ ಕಾಯ್ದೆ ತರಲು ಮೋದಿ ಚಿಂತನೆ ಮಾಡುತ್ತಿದ್ದಾರೆ. ಇದು ಯತ್ನಾಳ್, ವಿಜಯೇಂದ್ರ ಶುರುಮಾಡಿರೋ ಹೋರಾಟದ ಪ್ರಶ್ನೆ ಅಲ್ಲ. ಇದು ಕೇಂದ್ರ ಸರ್ಕಾರದ ಚಿಂತನೆಯಾಗಿದೆ.  ‌ಇವತ್ತು ಮತ್ತು ನಾಳೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಕ್ಫ್‌ ವಿಚಾರವಾಗಿ ಧರಣಿ ನಡೆಯಲಿದೆ. ಮೂರು ತಂಡಗಳು ಧರಣಿ ಮಾಡಲಿದ್ದೇವೆ. ಯತ್ನಾಳ ಕ್ರೆಡಿಟ್ ತಗೋಲಿ ಅದು ಪ್ರಶ್ನೆ ಅಲ್ಲ. ರೈತರಿಗೆ ಅನ್ಯಾಯ ಮಾಡೋ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ. 

ವಕ್ಫ್‌ ಹೋರಾಟ: ವಿಜಯೇಂದ್ರ ಪ್ಲಾನ್ ಭಿನ್ನರಿಂದ ಹೈಜಾಕ್?

ಸಿಎಂ ಖರ್ಚಿ ಅಲುಗಾಡುತ್ತಿದೆ. ಸಿಎಂಂ ಖರ್ಚಿಯನ್ನು ಹಾರಾಜಿಗಿಟ್ಟಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಗಂಭೀರವಾಗಿ ಆರೋಪ ಮಾಡಿದ್ದಾರೆ. 50 ಕೋಟಿ ಆಫರ್ ನಾವು ಮಾಡುತ್ತಿಲ್ಲ. ಕಾಂಗ್ರೆಸ್ ಶಾಸಕರೇ 50 ಕೋಟಿ ಹಣ ಕೇಳುತ್ತಿದ್ದಾರೆ. ಹೀಗಾಗಿ ಸಿಎಂ 50 ಕೋಟಿ 100 ಕೋಟಿ ಆಫರ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿಎಂ ಯಾವುದೇ ಕ್ಷಣದಲ್ಲಿ ರಾಜೀನಾಮೆ ಕೊಡಬಹುದು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಕಾಂಗ್ರೆಸ್ ನಲ್ಲಿ ಸಿಎಂ ಹುದ್ದೆಗೆ ಪೈಪೋಟಿ ಇದೆ. ಹೀಗಾಗಿ ಯಾವ ಕ್ಷಣದಲ್ಲಿ ಆದರೂ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಬಹುದು ಎಂದು ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್
Karnataka News Live: ಮಹಾಮೇಳಾವ್ ಅನುಮತಿ ನಿರಾಕರಣೆ - ನಾಡದ್ರೋಹಿ ಎಂಇಎಸ್ ‌ಪುಂಡರಿಗೆ ಶಾಕ್ ಕೊಟ್ಟ ಬೆಳಗಾವಿ ಜಿಲ್ಲಾಡಳಿತ