Kolar: ಜಿಲ್ಲೆಯ ಆರೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿಸಬೇಕು: ಸಚಿವ ಮುನಿರತ್ನ

By Govindaraj S  |  First Published Sep 19, 2022, 9:55 PM IST

ಮುಂದಿನ 2023ರ ಚುನಾವಣೆಯಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಪ್ರಬಲ ಪೈಪೋಟಿ ನೀಡುತ್ತೇವೆ. ಇದುವರೆಗೂ ನೀವ್ಯಾರು ನೋಡಿರಲಿಕ್ಕೆ ಸಾಧ್ಯವೇ ಇಲ್ಲ ಚುನಾವಣೆಯ ಸಂದರ್ಭದಲ್ಲಿ ಕನಿಷ್ಠ 8 ದಿನ ಇಲ್ಲೇ ಇದ್ದು, ಕೆಲಸ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.


ಕೋಲಾರ (ಸೆ.19): ಮುಂದಿನ 2023ರ ಚುನಾವಣೆಯಲ್ಲಿ ಜಿಲ್ಲೆಯ 6 ವಿಧಾನಸಭೆ ಕ್ಷೇತ್ರಗಳಲ್ಲಿಯೂ ಪ್ರಬಲ ಪೈಪೋಟಿ ನೀಡುತ್ತೇವೆ. ಇದುವರೆಗೂ ನೀವ್ಯಾರು ನೋಡಿರಲಿಕ್ಕೆ ಸಾಧ್ಯವೇ ಇಲ್ಲ ಚುನಾವಣೆಯ ಸಂದರ್ಭದಲ್ಲಿ ಕನಿಷ್ಠ 8 ದಿನ ಇಲ್ಲೇ ಇದ್ದು, ಕೆಲಸ ಮಾಡುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಮುನಿರತ್ನ ಹೇಳಿದರು.

ಬಿಜೆಪಿಯ ಜನಸ್ಪಂದನಾ ಸಮಾವೇಶ ಯಶಸ್ವಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಕೆಂದಟ್ಟಿಸಮೀಪ ನಡೆದ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯ ಆರೂ ಕ್ಷೇತ್ರದಿಂದ ಬಿಜೆಪಿ ಗೆಲುವು ಸಾಧಿಸಬೇಕು. ಅದು ನಿಮ್ಮಗಳ ಮುಖಾಂತರ ಆಗಬೇಕು. ಸಂಘಟನೆ ಬಲಪಡಿಸಿ ವಿಧಾನಸಭೆ ಪ್ರವೇಶಿಸಲು ಸಹಕರಿಸಿ. ಜಿಲ್ಲೆಯಲ್ಲಿ ಬಿಜೆಪಿ ಗಟ್ಟಿಯಾಗಿ ನೆಲೆಯೂರುತ್ತಿದೆ. ನಾನು ಅನ್ನುವ ಬದಲು ನಾವು ಅಂದುಕೊಂಡು ಎಲ್ಲರೂ ಒಟ್ಟಿಗೆ ಹೋಗೋಣ ಎಂದರು.

Tap to resize

Latest Videos

Kolar: ಜಿಲ್ಲಾಸ್ಪತ್ರೆಯಲ್ಲಿ ಸೌಲಭ್ಯದ ಕೊರತೆ ಆಗಬಾರದು: ಜಿಲ್ಲಾಧಿಕಾರಿ ಸೂಚನೆ

ಸರ್ವಾಧಿಕಾರಕ್ಕೆ ಕಡಿವಾಣ ಹಾಕಿ: ಜಿಲ್ಲೆಯಲ್ಲಿ 6 ತಾಲೂಕುಗಳಲ್ಲೂ ಸರ್ವಾಧಿಕಾರಿಗಳ ಧೋರಣೆಯಿದೆ. ಎಲ್ಲ ಕಡೆ ನಾವು ಗೆಲ್ಲುವ ಮೂಲಕ ಅದಕ್ಕೆ ಕಡಿವಾಣ ಹಾಕಬೇಕು. ಅಭಿವೃದ್ಧಿ ಕಡೆಗೆ ಆದ್ಯತೆ ನೀಡುವ ಜನಪ್ರತಿನಿಧಿಗಳು ಗೆಲ್ಲಬೇಕು. ನಿಮ್ಮನ್ನು ಸ್ಮರಿಸುವುದು ನಮ್ಮ ಕರ್ತವ್ಯವಾಗಿದ್ದು, ಚುನಾವಣೆಗೆ ಬಳಸಿಕೊಂಡು ಕೈಬಿಡುವುದು ಸರಿಯಲ್ಲ, ಬಿಜೆಪಿ ಜನಸ್ಪಂದನಾ ಸಮಾವೇಶಕ್ಕೆ ನಮ್ಮ ಹುಲಿ ವರ್ತೂರು ಪ್ರಕಾಶ್‌ ಪ್ರತಿಯೊಬ್ಬರೂ ಶ್ರಮಿಸಿರುವುದಾಗಿ ಹೇಳಿದರು.

ಕೆಜಿಎಫ್‌ ಮಾಜಿ ಶಾಸಕ ವೈ.ಸಂಪಂಗಿ ಮಾತನಾಡಿ, ಉಸ್ತುವಾರಿ ಸಚಿವರು ನಮ್ಮ ಜಿಲ್ಲೆಯಲ್ಲಿ ಸ್ಪರ್ಧಿಸಲ್ಲ. ಆದರೂ ಪಕ್ಷ ಬಲಪಡಿಸಲು ಪಣತೊಟ್ಟು ಇಲ್ಲಿಗೆ ಬಂದಿದ್ದಾರೆ. ಇವರೇ ನಮ್ಮ ಜಿಲ್ಲೆಗೆ ಸುಪ್ರೀಂ. ಯಾರು, ಯಾರಿಗೂ ಅಂಜಬೇಕಾಗಿಲ್ಲ. ಸಚಿವರ ನೇತೃತ್ವದಲ್ಲೇ ಚುನಾವಣೆ ನಡೆಯಬೇಕು. ನಾಟಕಗಳು ಬೇಡ. ಸಂಸದರಾಗಲೀ, ನಾನಾಗಲೀ, ಇನ್ನೊಬ್ಬರಾಗಲಿ ಉಸ್ತುವಾರಿ ಸಚಿವರಿಗೆ ಗೌರವ ಕೊಡಲೇಬೇಕು. ಚುನಾವಣೆಗೆ ಹೋದಾಗ ಜನರ ಆಶೀರ್ವಾದ ಇದ್ದರೆ ಗೆಲ್ಲುತ್ತೇವೆ ಎಂದು ಹೇಳಿದರು.

ಕನಿಷ್ಠ ನಾಲ್ಕು ಸ್ಥಾನ ಗೆಲ್ಲಲೇಬೇಕು: ಮಾಜಿ ಶಾಸಕ ಕೆ.ಎಸ್‌.ಮಂಜುನಾಥ್‌ಗೌಡ ಮಾತನಾಡಿ, ಎಂಎಲ್ಸಿ ಚುನಾವಣೆ, ದೊಡ್ಡಬಳ್ಳಾಪುರದ ಸಮಾವೇಶ ನಮ್ಮಲ್ಲಿ ಹುಮ್ಮಸ್ಸು ತಂದಿದೆ. ಮೊದಲು ಬಿಜೆಪಿ ಹೀಗೆ ಇರಲಿಲ್ಲ. ಮುಂದಿನ ಚುನಾವಣೆಯಲ್ಲಿ ಕನಿಷ್ಠ 4 ಸ್ಥಾನ ಗೆಲ್ಲಿಸಿಕೊಳ್ಳಬೇಕಿದೆ. ಮುಂದೆ 1 ಲಕ್ಷ ಜನಕ್ಕೆ ನಾವೇ ಊಟ ಹಾಕಿಸುತ್ತೇವೆ. ನೀವೂ ಹಾಗೂ ಸಚಿವ ಡಾ.ಸುಧಾಕರ್‌ ಜವಾಬ್ದಾರಿ ತೆಗೆದುಕೊಂಡರೆ ಎರಡೂ ಜಿಲ್ಲೆಗಳಲ್ಲಿ ಇನ್ನಷ್ಟುಸ್ಥಾನಗಳನ್ನು ಗೆಲ್ಲಬಹುದು ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ.ವೇಣುಗೋಪಾಲ್‌ ಮಾತನಾಡಿ ಡಬಲ್‌ ಎಂಜಿನ್‌ ಸರಕಾರ ತ್ರಿಬಲ್‌ ಎಂಜಿನ್‌ ಸರಕಾರ ಆಗಬೇಕಾದರೆ ಮುಂದಿನ ಚುನಾವಣೆಗಳಲ್ಲಿ ಇನ್ನಷ್ಟುನಾವು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು. ಸಭೆಗೂ ಮುನ್ನ ಸಚಿವರಿಗೆ ಸೇಬಿನ ಹಾರವನ್ನು ಕ್ರೇನ್‌ ಮೂಲಕ ಹಾಕಿ ತೆರೆದ ವಾಹನದಲ್ಲಿ ವೇದಿಕೆ ಬಳಿಗೆ ಕರೆತರಲಾಯಿತು.

ಸಭೆಯಲ್ಲಿ ಮಾಜಿ ಶಾಸಕರಾದ ಬಿ.ಪಿ.ವೆಂಕಟಮುನಿಯಪ್ಪ, ಎಂ.ನಾರಾಯಣಸ್ವಾಮಿ, ಮಾವು ಅಭಿವೃದ್ಧಿ ಮಂಡಳಿ ಅಧ್ಯಕ್ಷ ವಾಸುದೇವ್‌, ಕೆಯುಡಿಎ ಅಧ್ಯಕ್ಷ ವಿಜಯ್‌ ಕುಮಾರ್‌, ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌.ವೆಂಕಟೇಶ್‌, ಮಾಜಿ ಸದಸ್ಯರಾದ ಅರುಣ್‌ ಪ್ರಸಾದ್‌, ರೂಪಶ್ರೀ ಮಂಜುನಾಥ್‌, ಅಶ್ವಿನಿ ಸಂಪಂಗಿ, ವೆಂಕಟೇಶ್‌ ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರೇಗೌಡ, ಕೆಜಿಎಫ್‌ ಟಿಎಪಿಸಿಎಂಎಸ್‌ ಅಧ್ಯಕ್ಷ ಪ್ರವೀಣ್‌, ಮುಖಂಡರಾದ ನಾರಾಯಣಸ್ವಾಮಿ, ಬೆಗ್ಲಿ ಸೂರ್ಯಪ್ರಕಾಶ್‌, ಬಂಕ್‌ ಮಂಜು, ಮಮತಮ್ಮ, ಸರಸ್ವತಿ ಉಪಸ್ಥಿತರಿದ್ದರು.

ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದರೆ 5 ಲಕ್ಷ ಬಡ್ಡಿ ರಹಿತ ಸಾಲ: ರಮೇಶ್‌ ಕುಮಾರ್‌

ದುಷ್ಟ ಶಕ್ತಿಗಳ ಸಂಹಾರ ಮಾಡಿ: ಸಿಸಿ ಬ್ಯಾಂಕ್‌ ಮೂಲಕ ಸರಕಾರದ ಹಣವನ್ನು ತಮ್ಮದೆನ್ನುವ ರೀತಿ ಸಾಲ ನೀಡುತ್ತಿರುವ ದುಷ್ಟಶಕ್ತಿಗಳ ಸಂಹಾರಕ್ಕಾಗಿ ನಿಮಗೆ ಖಡ್ಗ ನೀಡಲಾಗಿದೆ. ಆ ಮೂಲಕ ಅವರ ಆಟಗಳಿಗೆ ಕಡಿವಾಣ ಹಾಕಬೇಕು ಎಂದು ಮಾಜಿ ಸಚಿವ ವರ್ತೂರು ಪ್ರಕಾಶ್‌ ಮನವಿ ಮಾಡಿದರು.

click me!