ಕೊಪ್ಪಳ: ಸಾಹಿತ್ಯ ಸಮ್ಮೇಳನದ ಬಲೂನ್ ವಿಚಾರದಲ್ಲಿ ಬಿಜೆಪಿ ಪಾಲಿಟಿಕ್ಸ್?

By Ravi Janekal  |  First Published Mar 12, 2023, 2:03 PM IST

ನಾಳೆ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೆಳನ ಹಿನ್ನೆಲೆ ನಗರಸಭೆ ಎದುರು ಹಾಕಿದ್ದ ಬಲೂನ್ ಕಿತ್ತೊಗೆದಿರುವ ನಗರಸಭೆ ಅಧಿಕಾರಿಗಳು ಈ ನಡೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ. ವಿಜಯಸಂಕಲ್ಪ ಯಾತ್ರೆ ನಡೆಯುತ್ತಿರುವುದರಿಂದ ಬಿಜೆಪಿಯವರೇ ಕಿತ್ತು ಹಾಕಿಸಿದ್ದಾರೆ ಎಂದು ಆರೋಪಿಸಲಾಗಿದೆ. 


ಕೊಪ್ಪಳ (ಮಾ.12) : ನಾಳೆ ನಡೆಯಲಿರುವ ತಾಲೂಕು ಸಾಹಿತ್ಯ ಸಮ್ಮೆಳನಕ್ಕೆ ಹಾಕಿದ್ದ ಬಲೂನ್ ಕಿತ್ತೊಗೆದಿರುವ ನಗರಸಭೆ ನಡೆ ಈಗ ರಾಜಕೀಯ ತಿರುವು ಪಡೆದುಕೊಂಡಿದೆ.

ನಾಳೆ ತಾಲೂಕು ಸಾಹಿತ್ಯ ಸಮ್ಮೆಳನ ಹಿನ್ನೆಲೆ ಶಾಸಕ ರಾಘವೇಂದ್ರ ಹಿಟ್ನಾಳ್(Raghavendra Hitnal) ಸರ್ವಾಧ್ಯಕ್ಷರ ಫೋಟೋ ಇದ್ದ ಬಲೂನ್ ಹಾಕಿದ್ದರು. ಆದರೆ ಇಂದು ಸಂಜೆ ಬಿಜೆಪಿ ವಿಜಯಸಂಕಲ್ಪ ಸಮಾವೇಶದ ಹಿನ್ನಲೆ ನಗರಸಭೆ ಅಧಿಕಾರಿಗಳ ಮೂಲಕ ಬಿಜೆಪಿಯವರೇ ಕಿತ್ತುಹಾಕಿಸಿರುವ ಆರೋಪ ಕೇಳಿ ಬಂದಿದೆ. 

Latest Videos

undefined

KARNATAKA ELECTION 2023: ಕೊಪ್ಪಳಕ್ಕಿಂದು ವಿಜಯ ಸಂಕಲ್ಪ ಯಾತ್ರೆ ಆಗಮನ

ಸಾಹಿತ್ಯ ಸಮ್ಮೆಳನ ವಿಚಾರದಲ್ಲೂ ಬಿಜೆಪಿ ಬಲೂನ್ ಪಾಲಿಟಿಕ್ಸ್(Balloon politics) ಮಾಡ್ತಿದೆಯಾ? ತಾಲೂಕು ಸಾಹಿತ್ಯ ಸಮ್ಮೆಳನಕ್ಕೆ ಮೆರಗು ನೀಡಲು ಶಾಸಕ ಹಿಟ್ನಾಳ ನಗರಸಭೆ ಎದುರುಗಡೆ ಸರ್ವಾಧ್ಯಕ್ಷರ ಫೋಟೊ ಬಲೂನ್ ಹಾಕಿಸಿದ್ದರು. ಅಲ್ಲದೆ ಬಿಜೆಪಿ ಸಮಾವೇಶ ನಡೆಯುವ ಸ್ಥಳ, ಬಲೂನ್ ಹಾಕಿರುವ ಸ್ಥಳ ಬೇರೆ ಬೇರೆ.ಆದರೂ ನಗರಸಭೆ ಮುಂದಿನ ಬಲೂನ್ ಕಿತ್ತು ಹಾಕಿದ್ಯಾಕೆ? ಸಮಾವೇಶ ಹಿನ್ನೆಲೆ ಬಿಜೆಪಿಯವರೇ ಕಿತ್ತುಹಾಕಿದರೆ? ಬಿಜೆಪಿ ಕನ್ನಡ ಸಾಹಿತ್ಯ ವಿಚಾರದಲ್ಲೂ ಇಂಥ ರಾಜಕೀಯ ಮಾಡುತ್ತದೆಯೆ? 

ಕೆಲವರು ಆರೋಪಿಸಿದಂತೆ ಬಿಜೆಪಿಯವರೇ ನಗರಸಭೆ ಅಧಿಕಾರಿಗಳ ಮೂಲಕ ಕಿತ್ತುಹಾಕಿಸಿದ್ದಾರೆ. ಬಿಜೆಪಿ ವಿಜಯಸಂಕಲ್ಪ ಸಮಾವೇಶಕ್ಕೆ ಎಲ್ಲೆಡೆ ಬ್ಯಾನರ್ ಹಾಕಲಾಗುತ್ತಿದೆ. ಇದರ ಮದ್ಯೆ ಕನ್ನಡ ಸಾಹಿತ್ಯದ ಬಲೂನ್ ಇರುವುದರಿಂದ ಕಿತ್ತುಹಾಕಿದ್ದಾರೆ ಎಂದು ಸಾಹಿತ್ಯಾಭಿಮಾನಿಗಳು ಆರೋಪಿಸಿದ್ದಾರೆ.ಬಿಜೆಪಿ ಕ್ರಮಕ್ಕೆ ಸಾರ್ವಜನಿಕವಾಗಿ ವ್ಯಾಪಕ ಆಕ್ರೋಶ

Silver Jubilee Celebration: ಕೊಪ್ಪಳ ಜಿಲ್ಲೆಗೆ 25ನೇ ವರ್ಷದ ರಜತ ವೈಭವ

click me!