ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಗೋವಿಂದ ಆಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಅವರು ತುಮಕೂರಿನಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯರನ್ನು ಇಳಿಸಲು ಡಿ.ಕೆ.ಶಿವಕುಮಾರ್ ಪರ ಗ್ಯಾಂಗ್ ಈಗಾಗಲೇ ರೆಡಿ ಆಗಿ ಕೂತಿದೆ.
ತುಮಕೂರು (ನ.26): ಲೋಕಸಭಾ ಚುನಾವಣೆ ಬಳಿಕ ರಾಜ್ಯ ಸರ್ಕಾರ ಗೋವಿಂದ ಆಗುತ್ತದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದರು. ಅವರು ತುಮಕೂರಿನಲ್ಲಿ ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಿದ್ದರಾಮಯ್ಯರನ್ನು ಇಳಿಸಲು ಡಿ.ಕೆ.ಶಿವಕುಮಾರ್ ಪರ ಗ್ಯಾಂಗ್ ಈಗಾಗಲೇ ರೆಡಿ ಆಗಿ ಕೂತಿದೆ.
ಇನ್ನೊಂದು ಕಡೆ ಶಿವಕುಮಾರ್ ಅವರನ್ನು ಸಿಕ್ಕಿಹಾಕಿಸಲು ಸಿದ್ದರಾಮಯ್ಯ ಅವರು ಪರಮೇಶ್ವರ್ ಮನೆಯಲ್ಲಿ ಮೀಟಿಂಗ್ ಮಾಡಿದ್ದಾರೆ. ನಾಲ್ಕು ಜನ ಸೇರಿ ಶಿವಕುಮಾರ್‌ಗೆ ಖೆಡ್ಡಾ ತೋಡಲು ರೆಡಿ ಮಾಡಿದ್ದಾರೆ ಎಂದರು. ಹಿಂದೆ ಮೈತ್ರಿ ಸರ್ಕಾರವನ್ನು ಬೀಳಿಸುವುದಕ್ಕೆ ಬೆಳಗಾವಿಯಲ್ಲಿಯೇ ಪ್ಲಾನ್ ಆಗಿತ್ತು. ಈಗಲೂ ಅಲ್ಲಿಂದಲೇ ತಯಾರಿ ನಡೀತಾ ಇದೆ. ಇವೆಲ್ಲ ಬೆಳವಣಿಗೆಯನ್ನು ನೋಡಿದರೆ ಶೀಘ್ರ ಸರ್ಕಾರ ಗೋವಿಂದ ಆಗಲಿದೆ ಎಂದರು.
undefined
ಸೀಟು ನಿರ್ಧಾರವಾಗಿಲ್ಲ: ಲೋಕಸಭಾ ಚುನಾವಣೆಗೆ ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಆದರೆ ಯಾರಿಗೆ ಎಷ್ಟು ಸೀಟು ಅನ್ನೋದು ಇನ್ನೂ ನಿರ್ಧಾರ ವಾಗಿಲ್ಲ. ರಾಷ್ಟ್ರೀಯ ನಾಯಕರು, ಜೆಡಿಎಸ್ ವರಿಷ್ಠ ದೇವೇಗೌಡರು ಸೇರಿ ತೀರ್ಮಾನ ಮಾಡುತ್ತಾರೆ ಎಂದ ಅವರು, ಮೊದಲೆಲ್ಲ 24, 25 ಕಡೆಗಳಲ್ಲಿ ಸ್ಪರ್ಧೆ ಮಾಡುತ್ತಿದ್ದೆವು. ಈ ಬಾರಿ 28 ಕ್ಷೇತ್ರಗಳಲ್ಲಿಯೂ ನಾವು ಟಫ್ ಫೈಟ್ ಕೊಡುತ್ತೇವೆ ಎಂದರು.
ಡಿಕೆಶಿ ಪ್ರಾಮಾಣಿಕರಾಗಿದ್ದರೆ ಸಂಪುಟ ನಿರ್ಧಾರ ವಿರೋಧಿಸಬೇಕಿತ್ತು: ವಿಜಯೇಂದ್ರ
ಸರ್ಕಾರಕ್ಕೆ ಚಾಟಿ: ರೈತರು ಸಾಲ ಮನ್ನಾ ಮಾಡ್ಬೇಕು ಅಂತಾ ಹೇಳುತ್ತಿದ್ದಾರೆ, ರೈತರ ಸಮಸ್ಯೆ ಏನು ಅನ್ನೋದನ್ನು ಅವರಿಂದಲೇ ಕೇಳಿ ತಿಳಿದುಕೊಳ್ಳುತ್ತಿದ್ದೇವೆ. ಇನ್ನು ಈ ಚಳಿಗಾಲದ ಅಧಿವೇಶನದಲ್ಲಿ ಬರಗಾಲದ ವಿಚಾರವನ್ನೇ ಮೊದಲಿಗೆ ಎತ್ತಿಕೊಳ್ಳಲಿದ್ದೇವೆ. ರೈತರಿಗೆ ಮತ್ತು ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆ ಬಗ್ಗೆ ಸರ್ಕಾರಕ್ಕೆ ಚಾಟಿ ಬೀಸುತ್ತೇವೆ ಎಂದರು.
ಬುಡ್ನಹಟ್ಟಿ, ತಳಕು ಗ್ರಾಮಕ್ಕೆ ಇಂದು ಆರ್.ಅಶೋಕ್ ಭೇಟಿ: ರಾಜ್ಯಾದ್ಯಂತ ಬರಗಾಲದ ಪರಿಸ್ಥಿತಿ ಅಧ್ಯಯನ ನಡೆಸುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ನ.೨೬ರ ಭಾನುವಾರ ಬೆಂಗಳೂರಿನಿಂದ ಚಳ್ಳಕೆರೆ ತಾಲೂಕಿನ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಅಧ್ಯಯನ ನಡೆಸುವರು ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಾಳೆಮಂಡಿರಾಮದಾಸ್ ತಿಳಿಸಿದ್ದಾರೆ. ಅವರು, ಪತ್ರಿಕೆಗೆ ಮಾಹಿತಿ ನೀಡಿ, ಚಳ್ಳಕೆರೆ ತಾಲೂಕಿಗೆ ಮಧ್ಯಾಹ್ನ 1ಕ್ಕೆ ಆಗಮಿಸುವ ಅವರು, ಬುಡ್ನಹಟ್ಟಿ ಗ್ರಾಮದ ಬೆಳೆ ಒಣಗಿದ ಜಮೀನಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು.
ಕಾನೂನು ಪ್ರಕಾರ ಡಿಕೆಶಿ ಕೇಸ್ ವಾಪಸ್: ಸಚಿವ ಪ್ರಿಯಾಂಕ್ ಖರ್ಗೆ
ನಂತರ ನೇರವಾಗಿ ಅಲ್ಲಿಂದ ತಳಕು ಗ್ರಾಮಕ್ಕೆ ಭೇಟಿ ನೀಡಿ ಅಲ್ಲೂ ಬರ ಅಧ್ಯಯನ ನಡೆಸಿ ನಂತರ ಕೂಡ್ಲಗಿ ಮೂಲಕ ಬಳ್ಳಾರಿ ಜಿಲ್ಲೆಗೆ ತೆರಳುವರು ಎಂದು ತಿಳಿಸಿದ್ದಾರೆ. ವಿರೋಧ ಪಕ್ಷದ ನಾಯಕರ ಬರ ಅಧ್ಯಯನ ಸಮಯದಲ್ಲಿ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ತಮ್ಮ ಸಮಸ್ಯೆಗಳ ಬಗ್ಗೆ ಹಾಗೂ ಸರ್ಕಾರದಿಂದ ಯಾವರೀತಿ ಪರಿಹಾರ ದೊರಕಿದೆ ಎಂಬ ಬಗ್ಗೆ ಮಾಹಿತಿ ನೀಡಬೇಕು. ಬರವೀಕ್ಷಣೆ ನಂತರ ರಾಜ್ಯ ಬಿಜೆಪಿ ಘಟಕ ಕೇಂದ್ರ ಸರ್ಕಾರಕ್ಕೆ ಮತ್ತೊಮ್ಮೆ ಬರದ ಸ್ಥಿತಿಯ ಬಗ್ಗೆ ವಿಸ್ತುತ ವರದಿ ಕಳಿಸಿಕೊಡಲಿದೆ ಎಂದು ತಿಳಿಸಿದ್ದಾರೆ.