ಹನುಮನ ನಾಡಲ್ಲಿ ಧ್ವಜ ಹಾರಿಸೋಕೆ ಕಾಂಗ್ರೆಸ್‌ನ ಕೇಳಬೇಕಾ?: ಆರ್.ಅಶೋಕ್

By Govindaraj S  |  First Published Jan 31, 2024, 6:43 AM IST

ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸೋಕೆ ಕಾಂಗ್ರೆಸ್ ಪಕ್ಷವನ್ನು ಕೇಳಬೇಕಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದರು. 
 


ದೊಡ್ಡಬಳ್ಳಾಪುರ (ಜ.31): ಹನುಮನ ನಾಡಿನಲ್ಲಿ ಹನುಮ ಧ್ವಜ ಹಾರಿಸೋಕೆ ಕಾಂಗ್ರೆಸ್ ಪಕ್ಷವನ್ನು ಕೇಳಬೇಕಾ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಪ್ರಶ್ನಿಸಿದರು. ದೊಡ್ಡಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಅವರು, ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದವರು ಕಾಂಗ್ರೆಸ್ ನವರು. ಕೆರಗೋಡು ಸುತ್ತಮುತ್ತಲಿನ 22 ಗ್ರಾಮದ ಜನರಿಂದ 100 ರುಪಾಯಿ ದೇಣಿಗೆ ಸಂಗ್ರಹಿಸಿ 6 ಲಕ್ಷ ದೇಣಿಗೆ ಹಣದಲ್ಲಿ 108 ಆಡಿಗಳ ಧ್ವಜವನ್ನ ನಿರ್ಮಾಣ ಮಾಡಲಾಗಿತ್ತು, ಈ ಧ್ವಜಸ್ತಂಭ ಗ್ರಾಮಸ್ಥರಿಗೆ ಸೇರಿದ್ದೇ ಹೊರತು ಸಚಿವ ಚೆಲುವರಾಯಸ್ವಾಮಿ ಹಾಗೂ ಕಾಂಗ್ರೆಸ್ ಪಕ್ಷದ್ದಲ್ಲ ಎಂದರು.

ರಾಷ್ಟ್ರೀಯ ಹಬ್ಬಗಳು ಬಂದಾಗ ರಾಷ್ಟ್ರ ಬಾವುಟ ಮತ್ತು ನಾಡ ಬಾವುಟವನ್ನ ಹಾರಿಸಲಾಗುತ್ತಿತ್ತು, ಅನಂತರ ಹನುಮಂತನ ಬಾವುಟವನ್ನ ಹಾರಿಸಲಾಗುತ್ತಿತ್ತು. ಹನುಮಂತ ಹುಟ್ಟಿದ್ದ ನಾಡಲ್ಲಿ ಹನುಮನ ಬಾವುಟ ಹಾರಿಸುವುದಕ್ಕೆ ಕಾಂಗ್ರೆಸ್ ಪಕ್ಷವನ್ನ ಕೇಳಬೇಕಾ, ದೇವಸ್ಥಾನದಿಂದ 40 ಅಡಿಗಳ ಅಂತರದಲ್ಲಿ ಹನುಮಂತನ ಬಾವುಟವನ್ನ ಹಾರಿಸಲಾಗಿದೆ ಎಂದರು.

Latest Videos

undefined

ಗ್ಯಾಂಗ್‌ರೇಪ್‌: ಎಸ್‌ಐಟಿ ತನಿಖೆಗೆ ಬಿಜೆಪಿ ಪಟ್ಟು: ಅಶೋಕ್‌, ಬೊಮ್ಮಾಯಿ ನೇತೃತ್ವದಲ್ಲಿ ಪ್ರತಿಭಟನೆ

ರಾಷ್ಟ್ರಧ್ವಜ ಹಾರಿಸಲೂ ಬಿಡದ ಕಾಂಗ್ರೆಸ್!: ಲಾಲ್ ಚೌಕ್ ನಲ್ಲಿ ರಾಷ್ಟಧ್ವಜವನ್ನ ಹಾರಿಸಿದಾಗ ಇದೇ ಕಾಂಗ್ರೆಸ್‌ನವರು ಗುಂಡು ಹಾರಿಸಿ, ಲಾಠಿಚಾರ್ಜ್ ಮಾಡಿಸಿದ್ದರು. ರಾಷ್ಟ್ರಧ್ವಜ ಹಾರಿಸುವುದಕ್ಕೆ ಅವರು ಅನುಮತಿ ಕೊಡಲಿಲ್ಲ. 30 ವರ್ಷಗಳ ಹಿಂದೆ ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ 5 ಸಾವಿರ ಪೊಲೀಸರ ಸರ್ಪಗಾವಲು ಭೇದಿಸಿ ರಾಷ್ಟ್ರ ಬಾವುಟವನ್ನ ಹರಿಸಿದಾಗಲೂ ಇದೇ ವರ್ತನೆ ಮುಂದುವರಿಸಿ ನಮ್ಮನ್ನು ಜೈಲಿಗೆ ಕಳಿಸಿದ್ದರು. ಆಗೆಲ್ಲಾ ರಾಷ್ಟ್ರಧ್ವಜವನ್ನ ಹಾರಿಸಲು ವಿರೋಧ ಮಾಡಿದವರು ಈಗ ರಾಷ್ಟ್ರಧ್ವಜದ ಮೇಲೆ ಪ್ರೀತಿ ತೋರಿಸುತ್ತಿದ್ದಾರೆ ಎಂದರು. ಹೆಸರಲ್ಲಿ ರಾಮ ಇದ್ರೆ ಸಾಲದು, ಹೃದಯದಲ್ಲಿ ರಾಮ ಇರಬೇಕು. ನಿಮ್ಮ ಹೃದಯಲ್ಲಿ ಇರೋದು ಮೌಲ್ವಿಗಳು ಮತ್ತು ಟಿಪ್ಪು ಸುಲ್ತಾನ್ ಮಾತ್ರ ಎಂದರು

ಕಾಂಗ್ರೆಸ್‌ನವರಿಗೆ ರಾಮನನ್ನು ಕಂಡರೆ ದ್ವೇಷ: ಕಾಂಗ್ರೆಸ್‌ನವರಿಗೆ ರಾಮನನ್ನು ಕಂಡರೆ ಆಗಲ್ಲವೆಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಷಾದ ವ್ಯಕ್ತಪಡಿಸಿದರು. ನರೇಂದ್ರ ಮೋದಿ ಹಾಗೂ ಶ್ರೀರಾಮ ಈರ್ವರನ್ನು ಕಂಡರೂ ಕಾಂಗ್ರೆಸ್‌ನವರಿಗೆ ಭಯ ಶುರುವಾಗಿದೆ. ಇಂತಹ ಐತಿಹಾಸಿಕ ಕಾರ್ಯಕ್ರಮಕ್ಕೆ ರಜೆ ನೀಡದಕ್ಕೆ ಸಿದ್ದರಾಮಯ್ಯನವರಿಗೆ ಶ್ರೀರಾಮ ಒಳ್ಳೆಯ ಬುದ್ಧಿ ಕೊಡಲಿ ಎಂದರು. ರೂಪೇನ ಅಗ್ರಹಾರದ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕುಂಬಾಭಿಷೇಕ ಮಹೋತ್ಸವದಲ್ಲಿ ಪಾಲ್ಗೊಂಡು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದರು. ಕಾಂಗ್ರೆಸ್‌ನವರಿಗೆ ಮೊದಲಿನಿಂದಲೂ ಪ್ರಧಾನಿ ಅವರನ್ನು ಕಂಡರೆ ಭಯವಿದ್ದೇ ಇದೆ ಎಂದರು.

ಶ್ರೀರಾಮ ರಜೆ ಕೇಳಿಲ್ಲ, ಕಷ್ಟಪಟ್ಟು ದುಡಿಯಿರಿ ಅಂದಿದ್ದಾರೆ: ಸಚಿವ ಚಲುವರಾಯಸ್ವಾಮಿ

ಶಾಸಕ ಎಂ.ಸತೀಶ್ ರೆಡ್ಡಿ ಮಾತನಾಡಿ, ಜ.೨೨ ಇತಿಹಾಸದ ಪುಟದಲ್ಲಿ ಅಳಿಸಲಾಗದ ಹೆಜ್ಜೆ ಗುರುತಾಗಲಿದೆ. ಪ್ರಧಾನಿ ಮೋದಿ ಅವರು ಪ್ರಪಂಚದೆಲ್ಲೆಡೆ ರಾಮನ ನೀತಿ, ತತ್ವ, ದಕ್ಷತೆ, ಪ್ರಾಮಾಣಿಕತೆಯನ್ನು ಪಸರಿಸಲು ಮುಂದಾಗಿದ್ದಾರೆ ಎಂದು ಹೇಳಿದರು. ಬೆಂ.ದಕ್ಷಿಣ ಲೋಕಸಭಾ ಸಂಸದ ತೇಜಸ್ವಿ ಸೂರ್ಯ, ಯಲಹಂಕ ಶಾಸಕ ವಿಶ್ವನಾಥ ರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಗೋಪಿ ನಾಥ್ ರೆಡ್ಡಿ, ದೇವಸ್ಥಾನದ ಜೀರ್ಣೋದ್ಧಾರದ ಮುಖಂಡರಾದ ನರೇಂದ್ರ ಬಾಬು, ಬಿಜೆಪಿ ಮುಖಂಡರಾದ ಶ್ರೀನಿವಾಸ ರೆಡ್ಡಿ ಉಪಸ್ಥಿತರಿದ್ದರು.

click me!