ಬಿಜೆಪಿ ದಲಿತರಿಗೆ ಸ್ಥಾನ ನೀಡದೆ ಅನ್ಯಾಯ: ರಮೇಶ್ ಜಿಗಜಿಣಗಿ ಹೇಳಿಕೆಗೆ ಕಾರಜೋಳ ಕಿಡಿ

By Girish Goudar  |  First Published Jul 17, 2024, 4:47 PM IST

ಗೋವಿಂದ ಕಾರಜೋಳ ಅವರು, ಸಿಎಂ ಸಿದ್ದರಾಮಯ್ಯ ಸತ್ಯಹರಿಚಂದ್ರರಿಗೆ ಹೋಲಿಕೆ ಮಾಡಿಕೊಳ್ತಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ಇರಲಿ ಹಗರಣ ಹಗರಣನೇ. ನಿಷ್ಪಕ್ಷಪಾತವಾಗಿ ತನಿಖೆ ಆಗಲೇಬೇಕು ಎಂದ ಬಿಜೆಪಿ ಸಂಸದ ಗೋವಿಂದ ಕಾರಜೋಳ 


ಹುಬ್ಬಳ್ಳಿ(ಜು.17):  ನಾವು ಪಕ್ಷದ ಚೌಕಟ್ಟಿನಲ್ಲಿ ಇರಬೇಕು, ಅದನ್ನ ಬಿಟ್ಟು ಏನೋ ಮಾತನಾಡಲು ಬರಲ್ಲ. ಏನೇ ಅಸಮಾಧಾನವಿದ್ದರೂ ಪಕ್ಷದ ವೇದಿಕೆಯಲ್ಲಿಯೇ ಚರ್ಚಿಸಬೇಕು ಎಂದು ಬಿಜೆಪಿ ದಲಿತರಿಗೆ ಸ್ಥಾನ ನೀಡದೆ ಅನ್ಯಾಯ ಮಾಡಿದೆ ಅನ್ನೋ ವಿಚಾರಕ್ಕೆ ವಿಜಯಪುರ ಸಂಸದ ರಮೇಶ್ ಜಿಗಜಿಣಗಿ ಹೇಳಿಕೆಗೆ ಬಿಜೆಪಿ ಸಂಸದ ಗೋವಿಂದ ಕಾರಜೋಳ ಕಿಡಿ ಕಾರಿದ್ದಾರೆ.

ಇಂದು(ಬುಧವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಗೋವಿಂದ ಕಾರಜೋಳ ಅವರು, ಸಿಎಂ ಸಿದ್ದರಾಮಯ್ಯ ಸತ್ಯಹರಿಚಂದ್ರರಿಗೆ ಹೋಲಿಕೆ ಮಾಡಿಕೊಳ್ತಾರೆ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರೇ ಇರಲಿ ಹಗರಣ ಹಗರಣನೇ. ನಿಷ್ಪಕ್ಷಪಾತವಾಗಿ ತನಿಖೆ ಆಗಲೇಬೇಕು ಎಂದು ತಿಳಿಸಿದ್ದಾರೆ. 

Latest Videos

undefined

ಕೇಂದ್ರ ಸಂಪುಟದಲ್ಲಿ‌‌ ಸ್ಥಾನ ಸಿಗದ ವಿಷಯ ಬೇಡವೇ ಬೇಡ, ಬೇರೆ ಏನಾದ್ರೂ ಇದ್ರೆ ಕೇಳಿ: ರಮೇಶ್‌ ಜಿಗಜಿಣಗಿ‌

ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿಯಿಂದ ಅನುದಾನ ಇಲ್ಲಾ ಅನ್ನೋ ವಿಚಾರದ ಬಗ್ಗೆ ಮಾತನಾಡಿದ ಕಾರಜೋಳ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಒಟ್ಟು 135 ಶಾಸಕರಿದ್ದಾರೆ. ಅವರಿಗೆ ಒಂದೇ ಒಂದು ರೂಪಾಯಿ ಹಣ ಬಂದಿಲ್ಲ. ಸುಮಾರು 50 ಜನ ಶಾಸಕರು ಅಸಮಾಧಾನದಲ್ಲಿದ್ದಾರೆ. ವಿನಯ್ ಕುಲಕರ್ಣಿ, ರಾಯರೆಡ್ಡಿ ಸೇರಿ ಹಲವರು ಈ ಬಗ್ಗೆ ಹೇಳಿದ್ದಾರೆ. ಮುಂದೆ ಅವರ ನಡೆ ಏನಿರುತ್ತೋ ಗೊತ್ತಿಲ್ಲ. ಹಾಲು ಕುಡಿದು ಸಾಯುವವರಿಗೆ ವಿಷ ಹಾಕುವ ಕೆಲಸ ಮಾಡೋದಿಲ್ಲ ಎಂದು ಹೇಳಿದ್ದಾರೆ. 

click me!