ಜನರಿಗೆ ಕೇಂದ್ರದ ಯೋಜನೆ ಮುಟ್ಟಿಸುವ ಪ್ರಾಮಾಣಿಕ ಯತ್ನ: ಸಂಸದ ಅಣ್ಣಾಸಾಹೇಬ ಜೊಲ್ಲೆ

By Kannadaprabha NewsFirst Published Feb 2, 2024, 9:30 PM IST
Highlights

ಪ್ರಧಾನ ಸೇವಕ ಎಂದು ಸೇವೆ ಮಾಡುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದರಾಗಿ ಅಣ್ಣಾಸಾಹೇಬ ಜೊಲ್ಲೆ ಅವರು ಅಭಿವೃದ್ಧಿ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಹಾನ ಪುರುಷರ ಜೀವನ ಚರಿತ್ರೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದ ಶಾಸಕಿ ಶಶಿಕಲಾ ಜೊಲ್ಲೆ

ಸಂಕೇಶ್ವರ(ಫೆ.02):  ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಯೋಜನೆಗಳನ್ನ ಜನರಿಗೆ ಮುಟ್ಟಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಅದರ ಜೊತೆಗೆ ಜೊಲ್ಲೆ ಗ್ರುಪ್ ವತಿಯಿಂದ ಸಾಕಷ್ಟು ಕಾರ್ಯಕ್ರಮಗಳ ಮೂಲಕ ಪ್ರತಿಭೆಗಳನ್ನ ಗುರುತಿಸುವ ಕಾರ್ಯ ಮಾಡುತ್ತಿದ್ದು, ಮುಂದಿನ ದಿನಗಳಲ್ಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಂದುವರೆಯಲಿವೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಪಟ್ಟಣದ ಎಸ್.ಡಿ ಹೈಸ್ಕೂಲ್ ಮೈದಾನದಲ್ಲಿ ನಾಲ್ಕು ದಿನಗಳ ಕಾಲ ಜೊಲ್ಲೆ ಗ್ರುಪ್ ವತಿಯಿಂದ ಆಯೋಜಿಸಿದ್ದ ಸಂಸದರ ಸಾಂಸ್ಕೃತಿಕ ಮಹೋತ್ಸವ ಕಾರ್ಯಕ್ರಮ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಂಕೇಶ್ವರ ಪಟ್ಟಣದಲ್ಲಿ ಇದೆ ಮೊದಲು 4 ದಿನಗಳ ಕಾಲ ಸಾಂಸ್ಕೃತಿಕ ಸಮಾರಂಭ ಆಯೋಜಿಸಿದ್ದು, ಸಮಾರಂಭಕ್ಕೆ ಇಲ್ಲಿನ ಜನರು ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಸಹಕಾರನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.

ಬರ ನಿರ್ವಹಣೆ ಅಗತ್ಯ ಸಿದ್ಧತೆಗೆ ಸೂಚನೆ: ಸಚಿವ ಕೃಷ್ಣ ಭೈರೇಗೌಡ

ಮಾಜಿ ಸಚಿವೆ, ಶಾಸಕಿ ಶಶಿಕಲಾ ಜೊಲ್ಲೆ ಮಾತನಾಡಿ, ಪ್ರಧಾನ ಸೇವಕ ಎಂದು ಸೇವೆ ಮಾಡುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದರಾಗಿ ಅಣ್ಣಾಸಾಹೇಬ ಜೊಲ್ಲೆ ಅವರು ಅಭಿವೃದ್ಧಿ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಹಾನ ಪುರುಷರ ಜೀವನ ಚರಿತ್ರೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.

ಭವ್ಯ ಪರಂಪರೆ, ಇತಿಹಾಸ ಹೊಂದಿರುವ ಭಾರತದ ಇತಿಹಾಸವನ್ನ ನಾವು ಮರೆಯುತ್ತಿದ್ದೇವೆ. ಯುವ ಪೀಳಿಗೆಗೆ ನಮ್ಮ ದೇಶದ ಪರಂಪರೆ, ಇತಿಹಾಸ ತಿಳಿಸುವ ಕಾರ್ಯ ಸಂಸದರ ಸಾಂಸ್ಕೃತಿಕ ಮಹೋತ್ಸವ ಮೂಲಕ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಾಜಿ ಸಚಿವ ಶಶಿಕಾಂತ ನಾಯಿಕ, ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಮಾತನಾಡಿದರು. ಸಮಾರಂಭದದಿವ್ಯ ಸಾನ್ನಿಧ್ಯ ಪಟ್ಟಣದಶಂಕರಾಚಾರ್ಯ ಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ, ನೀಡಸೊಸಿ ದುರದುಂಡೇಶ್ವರ ಮಠದ ಉತ್ತರಾಧಿಕಾರಿ ಶ್ರೀ ನಿಜಲಿಂಗೇಶ್ವರ ಸ್ವಾಮಿಗಳು, ಹುಕ್ಕೇರಿ ವಿರಕ್ತ ಮಠದ ಶಿವಬಸವ ಸ್ವಾಮೀಜಿ, ಜಾರಕಿಹೊಳಿ ಮಠದ ಕೃಪಾನಂದ ಸ್ವಾಮೀಜಿ, ಕ್ಯಾರಗುಡ್ಡದ ಅವಜಿಕರ ಆಶ್ರಮದ ಅಭಿನವ ಮಂಜುನಾಥ ಸ್ವಾಮೀಜಿ ವಹಿಸಿದ್ದರು. ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಗಜಾನನವ್ವಳ್ಳಿ, ವೈದ್ಯ ನಂದಕುಮಾರ ಹವಳ, ಹಾಲಸಿದ್ದನಾಥ ಕಾರ್ಖಾನೆ ಉಪಾಧ್ಯಕ್ಷ ಪವನ ಪಾಟೀಲ, ಜಯಾನಂದ ಜಾಧವ, ಮುಖಂಡ
ಪ್ರಧಾನ ಸೇವಕ ಎಂದು ಸೇವೆ ಮಾಡುತ್ತಿರುವ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಂಸದರಾಗಿ ಅಣ್ಣಾಸಾಹೇಬ ಜೊಲ್ಲೆ ಅವರು ಅಭಿವೃದ್ಧಿ ಕಾರ್ಯದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಹಾನ ಪುರುಷರ ಜೀವನ ಚರಿತ್ರೆ ತಿಳಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹಾಲಿ ಶಾಸಕಿ, ಮಾಜಿ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ. ಬಸವರಾಜ ಹುಂದ್ರಿ, ರವಿ ಹಂಜಿ, ಪವನ ಪಾಟೀಲ, ಪ್ರಮೋದ ಹೊಸಮನಿ ಇದ್ದರು. ಶಶಿರಾಜ ಪಾಟೀಲ ಸ್ವಾಗತಿಸಿದರು.ರಮೇಶ ಪಾಟೀಲ ನಿರೂಪಿಸಿದರು.

click me!