ಎಷ್ಟು ಕಾಲ ದರ್ಪ ತೋರಿಸ್ತಾರೋ ನೋಡೋಣ: ಪ್ರಿಯಾಂಕ್ ಖರ್ಗೆ ಮಿನಿ ಸರ್ವಾಧಿಕಾರಿ ಎಂದ ಸಿಟಿ ರವಿ

Kannadaprabha News   | Kannada Prabha
Published : Jun 16, 2026, 09:39 AM IST
CT Ravi on dk shivakumar

ಸಾರಾಂಶ

ಬಳ್ಳಾರಿಯಲ್ಲಿ ಮಾತನಾಡಿದ ಸಿ.ಟಿ. ರವಿ, ಭಯೋತ್ಪಾದಕರಿಗೆ ಬಿರಿಯಾನಿ ಹಾಕುವ ಸರ್ಕಾರ ಈಗಿಲ್ಲ, ಅವರನ್ನು ಮಟ್ಟ ಹಾಕುವ ಸರ್ಕಾರವಿದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರಿಯಾಂಕ್ ಖರ್ಗೆ 'ಮಿನಿ ಸರ್ವಾಧಿಕಾರಿ' ಎಂದು ಕರೆದಿದ್ದೇಕೆ ಸಿಟಿ ರವಿ?

ಬಳ್ಳಾರಿ (ಜೂ.16): ಭಯೋತ್ಪಾದಕ(Terrorists)ರಿಗೆ ಬಿರಿಯಾನಿ ಕೊಟ್ಟು ಸಾಕುವ ಸರ್ಕಾರ ಈಗಿಲ್ಲ. ಭಯೋತ್ಪಾದಕರನ್ನು ಸಂಪೂರ್ಣ ಮಟ್ಟಹಾಕುವ ಸರ್ಕಾರ ದೇಶದಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಚಿಕ್ಕಮಗಳೂರಿನ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ(CT Ravi) ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಭಾರತ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದೆ. ಭಯೋತ್ಪಾದಕರಿಗೆ ಇಲ್ಲಿ ಉಳಿಗಾಲವಿಲ್ಲ. ಭಯೋತ್ಪಾದಕರನ್ನು ಬ್ರದರ್ಸ್ ಎಂದು ಕರೆದದ್ದು ಕಾಂಗ್ರೆಸ್ಸು. ಅವರು ನಕ್ಸಲರನ್ನು ಬೆಂಬಲಿಸುತ್ತಿದ್ದರು. ದೇಶದಲ್ಲಿ ಕಾಂಗ್ರೆಸ್ ಆಡಳಿತ ಇರುವ ಕಡೆ ನಕ್ಸಲ್ ತುಕಡೆ ಗ್ಯಾಂಗ್ ಬೇರೆ ಸಿದ್ಧಾಂತದ ಮೂಲಕ ರೂಪಾಂತರಗೊಂಡು ಜೀವಂತವಿದೆ ಎಂದು ತಿಳಿಸಿದರು.

ಎಸ್‌ಐಆರ್ ಮೂಲಕ ಅಕ್ರಮ ಮತದಾರರು ಬೇಟೆ

ಎಸ್ಐಆರ್(SIR) ಮೂಲಕ ಮತದಾರರ ಪಟ್ಟಿಯಲ್ಲಿನ ಅಕ್ರಮ ಮತದಾರರನ್ನು ತೆಗೆದುಹಾಕುವ ಕೆಲಸವಾಗುತ್ತಿದೆ. ವಿರೋಧಿಸುವವರು ದೇಶದ್ರೋಹಿಗಳು. ತುಕಡೆ ಗ್ಯಾಂಗ್‌ಗಳು ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಮುಂದಾಗಿದ್ದು, ಭಾರತ ಸರ್ಕಾರ ತುಕಡೆ ಗ್ಯಾಂಗ್‌ಗಳನ್ನು ಸಮರ್ಥವಾಗಿ ಎದುರಿಸಲಿದೆ. ನಕ್ಸಲ್ ಮುಕ್ತ ಭಾರತ ನಿರ್ಮಾಣವಾಗಲಿದೆ. ನರೇಂದ್ರ ಮೋದಿ ಆಡಳಿತದಲ್ಲಿ ಭಾರತ ಅಭಿವೃದ್ಧಿಯ ಪಥದತ್ತ ಸಾಗಿದೆ. ನಾವು ಬರೀ ಹೇಳುವುದಲ್ಲ. ಪೂರಕ ದಾಖಲೆಗಳು, ಪ್ರಗತಿಯ ಅಂಶಗಳೇ ತಿಳಿಸುತ್ತವೆ. ಆರ್ಥಿಕ ಸಂಕಷ್ಟದಲ್ಲಿದ್ದ ಭಾರತ ಆರ್ಥಿಕ ಸುಸ್ಥಿತಿಗೆ ತಲುಪಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಬೆಲೆ ಏರಿಕೆ ನಿಯಂತ್ರಣದಲ್ಲಿದೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನಲ್ಲ:

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿ ನಾನು ಅಲ್ಲ. ಪಕ್ಷದ ನಾಯಕರು ಅವರನ್ನೇ ಮುಂದುವರಿಸಬಹುದು ಅಥವಾ ಬೇರೆಯವರನ್ನಾದರೂ ಮಾಡಬಹುದು ಅದು ಗೊತ್ತಿಲ್ಲ. ಯಾರೇ ಅಧ್ಯಕ್ಷರಾದರೂ ಕಾರ್ಯನಿರ್ವಹಿಸುತ್ತೇವೆ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಪ್ರಿಯಾಂಕ್ ಮಿನಿ ಸರ್ವಾಧಿಕಾರಿ:

ಆರ್‌ಎಸ್‌ಎಸ್ ಕುರಿತು ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಿಯಾಂಕ್ ಖರ್ಗೆ ಮಿನಿ ಸರ್ವಾಧಿಕಾರಿಯಾಗಿದ್ದಾನೆ. ಈ ಸರ್ವಾಧಿಕಾರಿ ಎಷ್ಟು ಕಾಲ ಅಧಿಕಾರ ದರ್ಪ ತೋರಿಸ್ತಾರೆ ನೋಡೋಣ. ತುರ್ತು ಪರಿಸ್ಥಿತಿಗೆ ನಾವು ಹೆದರಿಲ್ಲ. ಇನ್ನು ಇವರಿಗೆ ನಾವು ಹೆದರುತ್ತೇವಾ? ಎಂದು ಪ್ರಶ್ನಿಸಿದರಲ್ಲದೆ, ತುರ್ತು ಪರಿಸ್ಥಿತಿ ಹಾಕಿದವರು ಅಧಿಕಾರ ಕಳೆದುಕೊಳ್ಳುವಂತಾಯಿತು. ಆ ಸರ್ವಾಧಿಕಾರಿಯೇ ಬಹಳ ದಿನ ಉಳಿಯಲಿಲ್ಲ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿಧಾನಸಭಾ ಚುನಾವಣೆಯಲ್ಲಿ ಮಂಗಳೂರು, ಪುತ್ತೂರು ಗೆಲ್ಲಲು ಬಿಜೆಪಿಯಿಂದ ರಹಸ್ಯ ಟಾಸ್ಕ್!
Kodagu: ಸಚಿವ ಸಂಪುಟ ವಿಸ್ತರಣೆ ಯಾವಾಗ?: ಶಾಸಕ ಎ.ಎಸ್.ಪೊನ್ನಣ್ಣ ಕೊಟ್ರು ಮಹತ್ವದ ಸುಳಿವು!