ಜಿನ್ನಾ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ: ಸಿದ್ದರಾಮಯ್ಯ ವಿರುದ್ಧ ಸಿ.ಟಿ.ರವಿ ಆಕ್ರೋಶ

By Kannadaprabha News  |  First Published Oct 10, 2024, 12:47 PM IST

ಮತಾಂಧರನ್ನು ಓಟು ಬ್ಯಾಂಕ್ ಅಂತಾ ಕಾಂಗ್ರೆಸ್ ಪರಿಗಣಿಸಿ, ರಾಜಕಾರಣ ಮಾಡುತ್ತಿದೆ. ಇವರಿಂದ ದೊಡ್ಡ ಅಪಾಯ ತಂದೊಡ್ಡುತ್ತಿದೆ. ಕೋಮುಶಕ್ತಿಗಳು ಸದ್ಯ ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಜನರು ಕೆಲ ಕಾಲ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅಪರಾಧ ಎಸಗಿ, ಕೊಲೆ ಮಾಡಿ, ಅತ್ಯಾಚಾರ ಎಸಗಿ ಯಾವುದೇ ಹಿಂದುಗಳು ಜೈಲಿಗೆ ಹೋಗಿಲ್ಲ. ಸದುದ್ದೇಶ ಇಟ್ಟುಕೊಂಡು ಬಂದ ಯುವಕರನ್ನು ಆರೋಪಿ ಮಾಡಿ, ಬಂಧಿಸಲಾಗಿದೆ: ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ 


ದಾವಣಗೆರೆ(ಅ.10):  ಗಣೇಶ ಮೆರವಣಿಗೆಗೆ ಅಡ್ಡಿಪಡಿಸಿದವರು, ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ಪುಂಡರನ್ನು ಬಂಧಿಸಿ, ಕೇಸ್ ಹಾಕುವ ಬದಲಿಗೆ ಮೆರವಣಿಗೆಯಲ್ಲಿದ್ದವರು. ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದವರನ್ನೇ ಎ-1 ಮಾಡಿ, ಹಿಂದುಗಳನ್ನು ಬಂಧಿಸಿ. ಮುಸ್ಲಿಮರನ್ನೂ ಬಂಧಿಸುವ ಖಾಜಿ ನ್ಯಾಯವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ ಎಂದು ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಜಿಲ್ಲಾ ಕಾರಾಗೃಹಕ್ಕೆ ಬುಧವಾರ ಭೇಟಿ ನೀಡಿ ಜೈಲಿನಲ್ಲಿದ್ದ ಸತೀಶ ಪೂಜಾರಿ, ದರ್ಶನ್ ಕೆ.ಪವಾರ್, ಮಧು ಸೇರಿದಂತೆ ಹಿಂದು ಸಂಘಟನೆಗಳ ಮುಖಂಡರು, ಕಾರ್ಯಕರ್ತರಿಗೆ ಆತ್ಮಸ್ಥೆರ್ಯ ಮೂಡಿಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 

Tap to resize

Latest Videos

undefined

ಸಿಎಂ ಕೆಳಗಿಳಿಸಲು ಕಾಂಗ್ರೆಸ್ಸಿಗರಿಗೇ ಹೆಚ್ಚು ಆತುರ: ಸಿ.ಟಿ.ರವಿ

ನಾಗಮಂಗಲದಲ್ಲಿ ಸಾರ್ವಜನಿಕ ರಸ್ತೆ, ಅದೂ ರಾಜ್ಯ ಹೆದ್ದಾರಿಯಲ್ಲಿ ಗಣೇಶ ಮೆರವಣಿಗೆ ನಡೆಸದಂತೆ, ಕಲ್ಲು ತೂರಾಟ ಮಾಡಲಾಗಿದೆ. ಗಣಪತಿ, ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದವರ ಮೇಲೆ ಕೇಸ್ ಹಾಕಬೇಕಾಗಿತ್ತು. ದಾವಣಗೆರೆಯಲ್ಲೂ ಕಲ್ಲು ತೂರಿದವರನ್ನು ಬಿಟ್ಟು, ಗಣೇಶ ಪ್ರತಿಷ್ಠಾಪಿಸಿದ್ದವರು. ಗಣೇಶ ಮೆರವಣಿಗೆಯಲ್ಲಿ ಇದ್ದವರನ್ನು ಬಂಧಿಸಲಾಗಿದೆ. ಮತ್ತೊಂದು ಕಡೆ ಮುಸ್ಲಿಮರನ್ನೂ ಬಂಧಿಸಿದರು. ಕಾಂಗ್ರೆಸ್ ಸರ್ಕಾರ ಖಾಜಿ ನ್ಯಾಯವನ್ನು ಮಾಡುತ್ತಿದೆ. ಕಾಂಗ್ರೆಸ್ ಸರ್ಕಾರವು ಮತಾಂಧರನ್ನು ಓಟು ಬ್ಯಾಂಕ್ ಆಗಿ ಆರಾಧಿಸುತ್ತಿದೆ. ಮಹಮ್ಮದ್ ಆಲಿ ಜಿನ್ನಾ ಮನಸ್ಥಿತಿಯಲ್ಲಿ ಕಾಂಗ್ರೆಸ್ ಸರ್ಕಾರ ನಡೆಯುತ್ತಿದೆ. ಸಿದ್ದರಾಮಯ್ಯ 2ನೇ ಅವಧಿಗೆ ಸಿಎಂ ಆದನಂತರ ಕೋಮುವಾದಿ ಶಕ್ತಿಗಳು, ಮತಾಂಧರಿಗೆ ಹೆಚ್ಚು ಶಕ್ತಿ ಬಂದಿದೆ ಎಂದರು. 

ಮತಾಂಧರನ್ನು ಓಟು ಬ್ಯಾಂಕ್ ಅಂತಾ ಕಾಂಗ್ರೆಸ್ ಪರಿಗಣಿಸಿ, ರಾಜಕಾರಣ ಮಾಡುತ್ತಿದೆ. ಇವರಿಂದ ದೊಡ್ಡ ಅಪಾಯ ತಂದೊಡ್ಡುತ್ತಿದೆ. ಕೋಮುಶಕ್ತಿಗಳು ಸದ್ಯ ರಾಜ್ಯದಲ್ಲಿ ವಿಜೃಂಭಿಸುತ್ತಿವೆ. ಜನರು ಕೆಲ ಕಾಲ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ಅಪರಾಧ ಎಸಗಿ, ಕೊಲೆ ಮಾಡಿ, ಅತ್ಯಾಚಾರ ಎಸಗಿ ಯಾವುದೇ ಹಿಂದುಗಳು ಜೈಲಿಗೆ ಹೋಗಿಲ್ಲ. ಸದುದ್ದೇಶ ಇಟ್ಟುಕೊಂಡು ಬಂದ ಯುವಕರನ್ನು ಆರೋಪಿ ಮಾಡಿ, ಬಂಧಿಸಲಾಗಿದೆ. ನೀವು ಯಾರೂ ಹೆದರಬೇಡಿ ಅಂತಾ ಧೈರ್ಯ ತುಂಬುವ ಕೆಲಸವನ್ನು ನಾವು ಮಾಡುತ್ತಿದ್ದೇವೆ. ನಿಮ್ಮೊಂದಿಗೆ ನಾವಿದ್ದೇವೆ ಎಂದು ಭರವಸೆ ಮೂಡಿಸುತ್ತಿದ್ದೇವೆ ಎಂದು ಸಿ.ಟಿ.ರವಿ ತಿಳಿಸಿದರು. 

ಸಂವಿಧಾನ ಕಾನೂನು ಬಗ್ಗೆ ಭಯವಿಲ್ಲದ ಸಿದ್ದರಾಮಯ್ಯಗೆ ಏನೆಂದು ಕರೆಯಬೇಕು?: ಸಿಟಿ ರವಿ

ನ್ಯಾಯಾಲಯದಲ್ಲಿ ನಮ್ಮ ಪರ ವಕೀಲರ ತಂಡ ವಕಾಲತ್ತು ಸಲ್ಲಿಸಿದೆ. ಅ.14ಕ್ಕೆ ಸಿಗುವ ವಿಶ್ವಾಸವಿದೆ. ಬಂಧಿತರಲ್ಲಿ ವಿದ್ಯಾರ್ಥಿಗಳೂ ಇದ್ದಾರೆ. ಅಂತಹ ಮಕ್ಕಳ ಬಗ್ಗೆ ಸಂಬಂಧಿಸಿದವರ ಜೊತೆ ಮಾತನಾಡುತ್ತೇವೆ. ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ಭರವಸೆ ಇದೆ ಎಂದು ಭರವಸೆ ನೀಡಿದರು. 

ಈ ಸಂದರ್ಭ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ರಾಜಶೇಖರ ನಾಗಪ್ಪ, ವಿಪಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ನಿಕಟಪೂರ್ವ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಹಿರಿಯ ಮುಖಂಡರಾದ ಎಂ.ಪಿ ಕೃಷ್ಣಮೂರ್ತಿ ಪವಾರ್, ಧನಂಜಯ ಕಡೇಬಾಳು, ಅನಿಲ ಕುಮಾರ ನಾಯ್ಕ, ಆಕ್ಷೇಶ, ಶಿವನಗೌಡ ಪಾಟೀಲ್, ಟಂಕರ್‌ಮಂಜಣ್ಯ, ರಘು ಅಂಬರಕರ್, ಶಂಕರ ಗೌಡ ಬಿರಾದಾರ್, ಕಿಶೋರ, ವಕೀಲರಾದ ಎ.ಸಿ.ರಾಘವೇಂದ್ರ ಮೊಹರೆ, ದಿವಾಕರ ಇತರರು ಇದ್ದರು.

click me!