
ಬೆಂಗಳೂರು(ಫೆ.11): 'ಮುಖ್ಯಮಂತ್ರಿ ಸಿದ್ದರಾಮಯ್ಯ 11 ಕೆವಿ ಕರೆಂಟ್ ಅಲ್ಲ. ಅದು 660 ಕೆವಿ ಕರೆಂಟ್. ಅವರನ್ನು ಮುಟ್ಟೋದು ಅಷ್ಟು ಸುಲಭವಲ್ಲ' ಎಂದು ಬಿಜೆಪಿ ಶಾಸಕ ಮುನಿರತ್ನ ಹಾಡಿ ಹೊಗಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಸಿದ್ದರಾಮಯ್ಯ ಅವರು ಸರ್ಕಾರದಿಂದ ಆಚೆ ಹೋದರೆ ಏನಾಗುತ್ತೋ ಗೊತ್ತಿಲ್ಲ. ಅವರನ್ನು ಮುಟ್ಟಿ ಗೆದ್ದು ಚಲಾವಣೆ ಆಗುತ್ತೇವೆ ಎಂಬುದು ಭ್ರಮೆ. ಆ ರೀತಿ ಭಾವಿಸುವುದು ಬಹಳ ತಪ್ಪು ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಮುನಿರತ್ನ ಒಂದು ಕಾಲದ ಲೀಡಿಂಗ್ ರೌಡಿ, ಕೋರ್ಟ್‌ಗೆ ಬೆಳಗೆರೆ ಬರಹ ಉಲ್ಲೇಖಿಸಿದ ಸಂತ್ರಸ್ಥೆ ಪರ ವಕೀಲ!
ನಾನು ಸಿದ್ದರಾಮಯ್ಯ ಅವರೊಂದಿಗೆ ಐದು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನಾನು ಅವರೊಂದಿಗೆ ಒಡನಾಟ ಇರಿಸಿಕೊಂಡಿದ್ದವನು. ಅವರ ಮನಸ್ಥಿತಿ ಬಗ್ಗೆ ಗೊತ್ತಿರುವವನು. ಅವರ ಶಕ್ತಿ ಬಗ್ಗೆ ನೋಡಿದವನು. ಇವತ್ತು ಒಂದು ಭಾಷಣಕ್ಕೆ ಸಿದ್ದರಾಮಯ್ಯ ಹೋಗುತ್ತಾರೆ ಎಂದರೆ ಜನ ಕಾಯುತ್ತಾರೆ. ಇಂಥ ವ್ಯಕ್ತಿ ಕಾಂಗ್ರೆಸ್‌ನಲ್ಲಿ ಬೇರೆ ಯಾರು ಇದ್ದಾರೆ? ಯಾರೂ ಇಲ್ಲ. 500 ರು. ಕೊಟ್ಟು ಜನ ಕರೆತಂದು ಶೋ ತೋರಿಸಬೇಕು. ಆದರೆ, ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಒಂದು ಕರೆ ನೀಡಿದರೆ 10 ಲಕ್ಷ ಜನ ಸೇರುತ್ತಾರೆ. ಇದು ಸಿದ್ದರಾಮಯ್ಯ ಅವರ ಶಕ್ತಿ ಎಂದು ಗುಣಗಾನ ಮಾಡಿದರು.
ಒಂದೇ ಪಕ್ಷದಲ್ಲಿ ಮೈತ್ರಿ ಇದೆ:
ನಾವು 17 ಜನ ಕಾಂಗ್ರೆಸ್ ಬಿಟ್ಟಾಗ ಕಣ್ಣಿಗೆ ಕಾಣುವ ಮೈತ್ರಿ ಸರ್ಕಾರ ಇತ್ತು. ಈಗ ಕಣ್ಣಿಗೆ ಕಾಣದ ಮೈತ್ರಿ ಸರ್ಕಾರವಿದೆ. ಅವತ್ತು ಉಪಮುಖ್ಯಮಂತ್ರಿ ಆಗಿದ್ದವರು ಮುಖ್ಯಮಂತ್ರಿ ರೀತಿ ಇದ್ದರು. ಇವತ್ತು ಹಾಗೆಯೇ 25.2. ಇದೆ. ಶ್ರೀ.ಕುಮಾರಸ್ವಾಮಿ ಜಾಗದಲ್ಲಿ ಸಿದ್ದರಾಮಯ್ಯ, ಅವತ್ತಿನ ಡಾ.ಜಿ.ಪರಮೇಶ್ವರ್ ಸ್ಥಾನದಲ್ಲಿ ಇವತ್ತಿನ ಉಪಮುಖ್ಯಮಂತ್ರಿ ಇದ್ದಾರೆ. ಇದರಲ್ಲಿ ಏನೂ ವ್ಯತ್ಯಾಸವಿಲ್ಲ. ಅವತ್ತು ಎರಡು ಪಕ್ಷಗಳ ಮೈತ್ರಿ ಇತ್ತು. ಇವತ್ತು ಒಂದೇಪಕ್ಷದಲ್ಲಿ ಮೈತ್ರಿ ಇದೆಎಂದುಪರೋಕ್ಷವಾಗಿ ಉಪಮುಖ್ಯಮಂತ್ರಿ ಟಾಂಗ್ ನೀಡಿದರು.
ಕಾಲ ಭೈರವೇಶ್ವರ ಮೇಲೆ ಮುನಿರತ್ನ ಆಣೆ ಮಾಡಲಿ: ಸಂತ್ರಸ್ತರ ಸವಾಲು
ಡಿ.ಕೆ.ಶಿವಕುಮಾರ್ ಅವರಿಗೆ ನಾನು ಸಿದ್ದರಾಮಯ್ಯ ಅವರನ್ನು ಹೊಸದಾಗಿ ನೋಡಿ ಮಾತನಾಡುತ್ತಿಲ್ಲ. ಅವರೊಂದಿಗೆ ಒಡನಾಟ, ಪರಿಚಯ ಇದ್ದುದ್ದರಿಂದ ಹೇಳುತ್ತಿದ್ದೇನೆ. ನನ್ನ ಕೊನೆ ಉಸಿರು ಇರೋವರೆಗೂ ಬಿಜೆಪಿಯಲ್ಲೇ ಇರುತ್ತೇನೆ. ಇದರಲ್ಲಿ ಎರಡು ಮಾತೇ ಇಲ್ಲ. ಇದು ಸ್ಪಷ್ಟ. ನಾನು ಸಿದ್ದರಾಮಯ್ಯ ಶಕ್ತಿ ಬಗ್ಗೆ ಹೇಳುತ್ತಿದ್ದೇನೆ. ಅವರನ್ನು ಇವರು ಮುಟ್ಟಿದರೂ ಚುನಾವಣೆ ಬರಲಿದೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಹೇಳುತಿದೇನೆ ಎಂದರು.
ಸಿದ್ದು ಒಂದು ಬೆರಳು ಆಚೆ ಇಟ್ಟರೂ ಶೂನ್ಯ
ಸಿದ್ದರಾಮಯ್ಯ ಅಲ್ಲಿ ಇರುವವರೆಗೂ 136 ಸೀಟು ಇರುತ್ತದೆ. ಅವರು ಒಂದು ಕಾಲು ಅಲ್ಲ, ಒಂದು ಬೆರಳು ಹೊರೆಗೆ ಇಟ್ಟರೂ ಕಾಂಗ್ರೆಸ್ ಶೂನ್ಯವಾಗುತ್ತದೆ. ಇದು ಅವರನ್ನು ಹೊಗಳುವುದಲ್ಲ. ಹೆಚ್ಚು-ಕಡಿಮೆ ಆದರೆ ನಾವು ಎಚ್ಚರದಿಂದ ಇರಬೇಕು. ಯಾವುದೇ ಕ್ಷಣದಲ್ಲಿ ಚುನಾವಣೆ ಎದುರಿಸಲು ಸಿದ್ಧರಿರಬೇಕು ಎಂದು ಹೇಳುತ್ತಿದ್ದೇನೆ. ಎಂದು ಮುನಿರತ್ನ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.