ಕೊರೋನಾ ಚಿಕಿತ್ಸೆಗೆ ಸ್ಪಂದಿಸದೆ ತಪ್ಪಿಸಿಕೊಳ್ಳುವ ತಬ್ಲಿಘಿಗಳ ಗುಂಡಿಕ್ಕಿ ಹತ್ಯೆ ಮಾಡಿ ಎಂದಿದ್ದ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಅಬ್ಬರಿಸಿದ್ದಾರೆ.
ಬೆಂಗಳೂರು, (ಏ.12): ಚಿಕಿತ್ಸೆಗೆ ಸ್ಪಂದಿಸದೇ ಇದ್ರೆ ತಬ್ಲಿಘಿಗಳನ್ನು ಗುಂಡಿಕ್ಕಿ ಕೊಂದ್ರು ತಪ್ಪಲ್ಲ ಎಂಬ ಹೇಳಿಕೆಯನ್ನು ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂಪಿ ರೇಣುಕಾಚಾರ್ಯ ಸಮರ್ಥಿಸಿಕೊಂಡಿದ್ದಾರೆ.
ನಾನು ತಪ್ಪು ಮಾಡಿದ್ದರೆ ನನ್ನನ್ನು ಬಂಧಿಸಿ ನೇಣಿಗೇರಿಸಲಿ ಎಂದು ರೇಣುಕಾಚಾರ್ಯ ತಮ್ಮ ಹಳೆ ಹೇಳಿಕೆಯನ್ನು ಟ್ವಿಟ್ಟರ್‌ನಲ್ಲಿ ಸ್ಮಮರ್ಥಿಸಿಕೊಂಡಿದ್ದಾರೆ.
'ಆಸ್ಪತ್ರೆಗೆ ಬರದೇ ತಲೆಮರೆಸಿಕೊಂಡಿರುವ ತಬ್ಲಿಘಿಗಳನ್ನು ಗುಂಡಿಕ್ಕಿ ಕೊಂದರೂ ತಪ್ಪಿಲ್ಲ'
ಮುಸ್ಲಿಂ ಸಮುದಾಯದ ಮೇಲೆ ಅವಹೇಳನ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಎಚ್ಚರಿಕೆ ನೀಡಿದ್ದರು.
ಇದರ ಬೆನ್ನಲ್ಲೇ ತಬ್ಲೀಘಿ ಜಮಾತ್ ನಲ್ಲಿ ಪಾಲ್ಗೊಂಡು ವಾಪಸ್ ಬಂದ ಮುಸ್ಲಿಮರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡಿಸದವರು ದೇಶ ದ್ರೋಹಿಗಳು. ಚಿಕಿತ್ಸೆಗೆ ಸ್ಪಂದಿಸದೆ ಕದ್ದು ಮುಚ್ಚಿ ಒಡಾಡುವರನ್ನ ಗಂಡಿಕ್ಕಿ ಕೊಲ್ಲಿ ಎಂದು ರೇಣುಕಾಚಾರ್ಯ ಗುಡುಗಿದ್ದರು.
ಇದು ಭಾರೀ ವಿವಾದ ಸೃಷ್ಟಿಸಿತ್ತು. ಅಲ್ಲದೇ ರೇಣುಕಾಚಾರ್ಯ ಅವರ ಹೇಳಿಕೆಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೆ ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಬಂಧಿಸುವಂತೆ ಸಿಎಂ ಬಿಎಸ್‌ವೈಗೆ ಒತ್ತಾಯಿಸಿದ್ದರು.
ಇದೀಗ ಕಾಂಗ್ರೆಸ್ ನೀಡಿರುವ ದೂರಿನ ಬಗ್ಗೆ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸಿರುವ ರೇಣುಕಾಚಾರ್ಯ, ನಾನು ತಪ್ಪು ಮಾಡಿದ್ದರೆ ನನ್ನನ್ನು ಬಂಧಿಸಲಿ ನೇಣೆಗೇರಿಸಲಿ.
KPCC ರಾಜ್ಯ ಘಟಕದ ವತಿಯಿಂದ ರಾಜ್ಯದ ಪೋಲಿಸ್ ವರಿಷ್ಠಾದಿಕಾರಿಗೆ ನನ್ನ ವಿರುದ್ದ ದೂರು ದಾಖಲಿಸಿ ಬಂಧಿಸಿಬೆಕೆಂದು ಹೇಳಿದ್ದಾರೆ. ದೂರು ದಾಖಲಿಸಿಲಿಕ್ಕೆ ನಾನು ಧಮ೯ ನಿಂದನೆ ಮಾಡಿಲ್ಲ. ಯಾವ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿಲ್ಲ ಎಂದಿದ್ದಾರೆ.
ನಾನು ತಪ್ಪು ಮಾಡಿದ್ದರೆ ನನ್ನನ್ನು ಬಂಧಿಸಲಿ ನೇಣೆಗೇರಿಸಲಿ.
KPCC ರಾಜ್ಯ ಘಟಕದ ವತಿಯಿಂದ ರಾಜ್ಯದ ಪೋಲಿಸ್ ವರಿಷ್ಠಾದಿಕಾರಿಗೆ ನನ್ನ ವಿರುದ್ದ ದೂರು ದಾಖಲಿಸಿ ಬಂಧಿಸಿಬೆಕೆಂದು ಹೇಳಿದ್ದಾರೆ.
ದೂರು ದಾಖಲಿಸಿಲಿಕ್ಕೆ ನಾನು ಧಮ೯ ನಿಂದನೆ ಮಾಡಿಲ್ಲ. ಯಾವ ಸಮುದಾಯದ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿಲ್ಲ.